ಹೊನ್ನಾವರ: ಶ್ರೀ ಸಂಸ್ಥಾನದ ಮೇಲೆ ಹಾಗೂ ಶ್ರೀ ರಾಮಚಂದ್ರಾಪುರದ ಮೇಲೆ ಆಪಾದನೆಗಳು ಬಂದಿದ್ದ ಸಂದರ್ಭದಲ್ಲಿ ಎಲ್ಲ ಕಷ್ಟಗಳೂ ಕಳೆಯುವಂತೆ ಕೆಕ್ಕಾರಿನ ಹನುಮನಿಗೆ ನಾವಿದ್ದೇವೆ ಬಳಗದವರು ಕಣಜ ಸೇವೆಯನ್ನು ಹರಕೆ ಹೊತ್ತಿದ್ದರು.

IMG 20170923 WA0014

ಅದರಂತೆ ಎಲ್ಲ ಆಪಾದನೆಗಳೂ ದೂರಾಗಿ ನ್ಯಾಯಲಯವೇ ಶ್ರೀಗಳು ದೋಷಮುಕ್ತ ಎಂದು ಹೇಳಿತು. ಹಾಗಾಗಿ ಇಂದು ನಾವಿದ್ದೇವೆ ಬಳಗದವರು ಶರನ್ನವರಾತ್ರಿ ಶುಭ ಸಂದರ್ಭದಲ್ಲಿ ಹರಕೆ ಸಮರ್ಪಿಸಿದರು.

RELATED ARTICLES  ಟೆರೆಸ್ ಮೇಲಿಂದ ಕಾಲುಜಾರಿ ಬಿದ್ದು ಮಹಿಳೆ ಸಾವು.

ಇದೇ ಸಂದರ್ಭದಲ್ಲಿ ಮಾತನಾಡಿದ ನಾವಿದ್ದೇವೆ ಬಳಗದ ಸದಸ್ಯರು. ನಾವು ಅಂದು ಹರಕೆ ಪ್ರಾರ್ಥನೆ ಸಲ್ಲಿಸಿದಂತೆ ಈ ದಿನದ ಶುಭ ಸಂದರ್ಭದಲ್ಲಿ ಗುರುಮುಖೇನ ಕೆಕ್ಕಾರು ಮಠದ ಹನುಮಂತನಿಗೆ ಕೊಟ್ಟೆ ಕಣಜ ಸೇವೆಯನ್ನು ಸಮರ್ಪಿಸಿದ್ದೇವೆ.. ಹನುಮ, ನಮ್ಮೆಲ್ಲರ ಸೇವೆಯನ್ನು ಸ್ವೀಕರಿಸಿಕೊಂಡು ನಿನ್ನ, ನಮ್ಮೆಲ್ಲರ ಪ್ರಭು ಶ್ರೀರಾಮನ ಆರಾಧಕಾರದ ಪರಮಪೂಜ್ಯ ಗುರುಗಳ ಮೇಲೆ ನಿನ್ನ ಕರುಣೆಯಿಟ್ಟು ಸದಾ‌ ಕಾಲ ಕಾಪಾಡು.. ನಮಗೆ ಇನ್ನಷ್ಟು ಸ್ವಾಮಿ ನಿಷ್ಠೆಯನ್ನು ಕರುಣಿಸು ಎಂದು ಪ್ರಾರ್ಥಿಸಿರುವುದಾಗಿ ಸತ್ವಾಧಾರ ನ್ಯೂಸ್ ಗೆ  ತಿಳಿಸಿದರು.

RELATED ARTICLES  ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಸಿ.ವಿ.ಎಸ್.ಕೆ ಪ್ರೌಢಶಾಲೆಯಲ್ಲಿ ಇಸ್ರೋ ವತಿಯಿಂದ ‘ವಿಶ್ವ ಬಾಹ್ಯಾಕಾಶ ಸಪ್ತಾಹ’