ಯಲ್ಲಾಪುರ : ತಾಲೂಕಿನ ಬಿಳಕಿ ಗ್ರಾಮದ ಶಿಡ್ಲಗುಂಡಿಗೆ ಹೋಗುವ ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದವರನ್ನು ಅಡ್ಡಗಟ್ಟಿದ ನಾಲೈದು ಜನರ ತಂಡವೊಂದು 9,33,000 ನಗದು ಹಾಗೂ ಬೆಲೆಬಾಳುವ ಮೊಬೈಲುಗಳು, ಬಂಗಾರದ ಉಂಗುರ ಸೇರಿದಂತೆ ಒಟ್ಟು 14, 30, 000 ಮೌಲ್ಯದ ವಸ್ತುಗಳನ್ನು ದರೋಡೆ ಮಾಡಿದ ಘಟನೆ ನಡೆದಿದೆ.
ಮುಂಬಯಿ ನಿವಾಸಿ ಅಂತೋನಿ ದಿವ್ಯಕುಮಾರ ಫ್ರಾನ್ಸಿಸ್ ಪೆರೇರಾ (39) ಎಂಬಾತನು ತನ್ನ ಸ್ನೇಹಿತರೊಂದಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ತಾಲೂಕಿನ ಬಿಳಕಿ ಗ್ರಾಮದ ಶಿಡ್ಲಗುಂಡಿ ರಸ್ತೆಯಲ್ಲಿ ಮೋಟಾರು ಸೈಕಲಿನೊಂದಿಗೆ ನಿಂತಿದ್ದ 4-5 ಜನರ ತಂಡ ಒಮ್ಮೇಲೆ ಕಾರನ್ನು ಅಡ್ಡಗಟ್ಟಿ ಕತ್ತಿ ಹಾಗೂ ದೊಣ್ಣೆ ಹಿಡಿದುಕೊಂಡು ಬಂದು ಭಯಪಡಿಸಿ ಕಾರಿನಲ್ಲಿದ್ದ 9, 33, 000 ನಗದು, ಬೆಲೆಬಾಳುವ ಮೊಬೈಲುಗಳು, ಬಂಗಾರದ ಉಂಗುರ ಸೇರಿದಂತೆ ಒಟ್ಟು 14, 30, 000 ರೂ ಬೆಲೆಯ ಸ್ವತ್ತನ್ನು ದರೋಡೆ ಮಾಡಿಕೊಂಡು ಮೂವರು ಮೋಟಾರು ಬೈಕಿನಲ್ಲಿ ಹಾಗೂ ಇನ್ನುಳಿದವರು ಅರಣ್ಯ ಪ್ರದೇಶದಲ್ಲಿ ಓಡಿ ಹೋದ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ
ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.