ಕುಮಟಾ : ಕೊಂಕಣ ಎಜ್ಯುಕೇಶ್ಯನ್ ಟ್ರಸ್ಟನ ಬಿ.ಕೆ. ಭಂಡರ‍್ಕರ್ ಸರಸ್ವತಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಶಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಪ್ರತಿ ಬಾರಿಯಂತೆ ಈ ಬಾರಿಯು ರಾಜ್ಯ ಮಟ್ಟದ ರ‍್ಯಾಂಕ್ ನೊಂದಿಗೆ ಶೇಕಡಾ ೧೦೦ರ ಫಲಿತಾಂಶ ದಾಖಲೆಸಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ವಿದ್ಯಾರ್ಥಿಗಳಾದ ಪ್ರಜ್ಞಾ ಪ್ರಕಾಶ ಶ್ಯಾನಭಾಗ ೯೭.೮೩% (ಲೆಕ್ಕಶಾಸ್ತ್ರ ೧೦೦, ಸಂಖ್ಯಾಶಾಸ್ತ್ರ ದಲ್ಲಿ ೧೦೦), ೬೦೦ಕ್ಕೆ ೫೮೭ ಅಂಕ ಗಳಿಸಿ ಪ್ರಥಮ ಸ್ಥಾನವನ್ನು, ಶರದ್ ಕಿರಣ ನಾಯಕ ೯೬.೮೩% (ಲೆಕ್ಕಶಾಸ್ತ್ರ ೧೦೦) ೬೦೦ಕ್ಕೆ ೫೮೧ ಅಂಕ ಗಳಿಸಿ ದ್ವಿತೀಯ ಸ್ಥಾನವನ್ನು, ರಕ್ಷಾ ಸುಭ್ರಾಯ ಭಟ್ಟ್ ೯೬.೬೬% (ಸಂಖ್ಯಾಶಾಸ್ತ್ರ ದಲ್ಲಿ ೧೦೦) ೬೦೦ಕ್ಕೆ ೫೮೦ ಅಂಕ ಗಳಿಸಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ೬ ವಿದ್ಯಾರ್ಥಿಗಳು ೯೫ಕ್ಕಿಂತ ಅಧಿಕ ಅಂಕಗಳಿಸಿದರೆ, ೧೨ ವಿದ್ಯಾರ್ಥಿಗಳು ೯೦ಕ್ಕಿಂತ ಅಧಿಕ ಅಂಕಗಳಿಸಿದರೆ, ೧೫ ವಿದ್ಯಾರ್ಥಿಗಳು ೮೫ಕ್ಕಿಂತ ಅಧಿಕ ಅಂಕಗಳಿಸಿದರೆ, ೧೭ ವಿದ್ಯಾರ್ಥಿಗಳು ೮೦ಕ್ಕಿಂತ ಅಧಿಕ ಅಂಕಗಳಿಸಿದರೆ, ಉಳಿದೆಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಅಲ್ಲದೇ ೬ ವಿದ್ಯಾರ್ಥಿಗಳು ಸಂಖ್ಯಾಶಾಸ್ತ್ರ ದಲ್ಲಿ ಹಾಗೂ ೩ ವಿದ್ಯಾರ್ಥಿಗಳು ಲೆಕ್ಕಶಾಸ್ತ್ರದಲ್ಲಿ, ೧ ವಿದ್ಯಾರ್ಥಿ ಅರ್ಥಶಾಸ್ತçದಲ್ಲಿ ನೂರಕ್ಕೆ ನೂರು ಅಂಕ ಪಡೆದು ಅತ್ಯುತ್ತಮ ಸಾಧನೆ ಮಾಡಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಈ ಅತ್ಯುತ್ತಮ ಸಾಧನೆಗೆ ಆಡಳಿತ ಮಂಡಳಿಯವರು, ಪ್ರಾಚಾರ್ಯರು ಹಾಗೂ ಉಪನ್ಯಾಸಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.