Satwadhara News

ವಿಧಾತ್ರಿ ಅಕಾಡೆಮಿ ಸಂಯೋಗದ ಸರಸ್ವತಿ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ಅತ್ಯಅಮೋಘ ಸಾಧನೆ : ರಾಜ್ಯ ಮಟ್ಟದ ರ‍್ಯಾಂಕ್ ನೊಂದಿಗೆ ಶೇಕಡಾ ೧೦೦ರ ದಾಖಲೆ

ಕುಮಟಾ: ಕೊಂಕಣ ಎಜ್ಯುಕೇಶ್ಯನ್ ಟ್ರಸ್ಟನ ವಿಧಾತ್ರಿ ಅಕಾಡೆಮಿ ಸಂಯೋಗದೊಂದಿಗೆ ಬಿ.ಕೆ. ಭಂಡಾರ‍್ಕರ್ ಸರಸ್ವತಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಪ್ರಶಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಪ್ರತಿ ಬಾರಿಯಂತೆ ಈ ಬಾರಿಯು ರಾಜ್ಯ ಮಟ್ಟದ ರ‍್ಯಾಂಕ್ ನೊಂದಿಗೆ ಶೇಕಡಾ ೧೦೦ರ ಫಲಿತಾಂಶ ದಾಖಲೆಸಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ವಿದ್ಯಾರ್ಥಿಗಳಾದ ರುಚಿತಾ ಮಂಜುನಾಥ ನಾಯಕ ೯೮.೩೩% (ಭೌತಶಾಸ್ತ್ರ ೧೦೦, ರಸಾಯನಶಾಸ್ತ್ರ ೧೦೦, ಗಣಿತದಲ್ಲಿ ೧೦೦, ಜೀವಶಾಸ್ತ್ರ ೧೦೦), ೬೦೦ಕ್ಕೆ ೫೯೦ ಅಂಕ ಗಳಿಸಿ ಪ್ರಥಮ ಸ್ಥಾನವನ್ನು, ಗಣಪತಿ ಅರವಿಂದ ಶ್ಯಾನಭಾಗ ಗೋಳಿ ೯೮% (ಭೌತಶಾಸ್ತç ೧೦೦, ಗಣಿತದಲ್ಲಿ ೧೦೦, ಕಂಪ್ಯೂಟರ್ ಸೈನ್ಸ ೧೦೦), ಸಂಜನಾ ಕೃಷ್ಣ ಭಟ್ ೯೮% (ರಸಾಯನಶಾಸ್ತ್ರ ೧೦೦, ಗಣಿತದಲ್ಲಿ ೧೦೦, ಕಂಪ್ಯೂಟರ್ ಸೈನ್ಸ ೧೦೦), ಶ್ರೀಲಕ್ಷ್ಮೀ ಆರ್ ಕಾಮತ್ (ಗಣಿತದಲ್ಲಿ ೧೦೦), ೬೦೦ಕ್ಕೆ ೫೮೮ ಅಂಕ ಗಳಿಸಿ ದ್ವಿತೀಯ ಸ್ಥಾನವನ್ನು, ಪೃಥ್ವಿ ಗಜಾನನ್ ಹೆಗಡೆ ೯೭.೮೩% (ಭೌತಶಾಸ್ತ್ರ ೧೦೦, ಗಣಿತದಲ್ಲಿ ೧೦೦), ಶ್ರವಣ್ ಎಮ್ ಪೈ (ಭೌತಶಾಸ್ತ್ರ ೧೦೦, ರಾಸಾಯನಶಾಸ್ತ್ರ ೧೦೦, ಗಣಿತದಲ್ಲಿ ೧೦೦, ಜೀವಶಾಸ್ತç ೧೦೦), ೬೦೦ಕ್ಕೆ ೫೮೭ ಅಂಕ ಗಳಿಸಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ೧೬ ವಿದ್ಯಾರ್ಥಿಗಳು ೯೫ಕ್ಕಿಂತ ಅಧಿಕ ಅಂಕಗಳಿಸಿದರೆ, ೩೩ ವಿದ್ಯಾರ್ಥಿಗಳು ೯೦ಕ್ಕಿಂತ ಅಧಿಕ ಅಂಕಗಳಿಸಿದರೆ, ೪೦ ವಿದ್ಯಾರ್ಥಿಗಳು ೮೫ಕ್ಕಿಂತ ಅಧಿಕ ಅಂಕಗಳಿಸಿದರೆ, ಉಳಿದೆಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಅಲ್ಲದೇ ೧೪ ವಿದ್ಯಾರ್ಥಿಗಳು ಗಣಿತದಲ್ಲಿ ಹಾಗೂ ೭ ವಿದ್ಯಾರ್ಥಿಗಳು ಭೌತಶಾಸ್ತ್ರದಲ್ಲಿ, ೬ ವಿದ್ಯಾರ್ಥಿಗಳು ಕಂಪ್ಯೂಟರ್ ಸೈನ್ಸನಲ್ಲಿ, ೫ ವಿದ್ಯಾರ್ಥಿಗಳು ರಸಾಯನಶಾಸ್ತ್ರ ದಲ್ಲಿ, ೨ ವಿದ್ಯಾರ್ಥಿಗಳು ಜೀವಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ಪಡೆದು ಅತ್ಯುತ್ತಮ ಸಾಧನೆ ಮಾಡಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಈ ಅತ್ಯುತ್ತಮ ಸಾಧನೆಗೆ ಆಡಳಿತ ಮಂಡಳಿಯವರು, ವಿಧಾತ್ರಿ ಅಕಾಡೆಮಿಯ ಶ್ರೀ ಗುರುರಾಜ ಶೆಟ್ಟಿ. ಹಾಗೂ ಪ್ರಾಚಾರ್ಯರಾದ ಶ್ರೀ ಕಿರಣ ಭಟ್ಟರವರು ಹಾಗೂ ಉಪನ್ಯಾಸಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

Comments

Leave a Reply

Your email address will not be published. Required fields are marked *