ಕುಮಟಾ : ಹನುಮಂತ ಬೆಣ್ಣೆ ಸರಕಾರಿ ಪದವಿ ಪೂರ್ವ ಕಾಲೇಜಿನ ೨೦೨೨ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಬಂದಿದ್ದು ಪರೀಕ್ಷೆಗೆ ಕುಳಿತ ೮೮೫ ವಿದ್ಯಾರ್ಥಿಳಲ್ಲಿ ೭೦೮ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ೮೦.೧೧% ಫಲಿತಾಂಶ ಬಂದಿರುತ್ತದೆ.ವಾಣಿಜ್ಯವಿಭಾಗದ ೩೦೮ ,ವಿಜ್ಞಾನ ವಿಭಾಗ ೨೨೦, ಕಲಾ ವಿಭಾಗದ ೧೮೦ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ವಾಣಿಜ್ಯ ವಿಭಾಗದ ೨೭, ವಿಜ್ಞಾನವಿಭಾಗದ ೪೦, ಕಲಾ ವಿಭಾಗದ ೦೯ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ.

ವಿಜ್ಞಾನ ವಿಭಾಗದ ಕು.ಸ್ವಾತಿ ವಿನಾಯಕ ಭಟ್ಟ ೫೮೭/೬೦೦ (೯೭.೮೩%) (ಭೌತಶಾಸ್ತ್ರ ೧೦೦,ರಸಾಯನ ಶಾಸ್ತ್ರ ೧೦೦ ,ಗಣಿತ ೧೦೦ ) ಕು.ಪೂಜಾ ಗಜಾನನ ಶ್ಯಾನಭಾಗ ೫೮೬/೬೦೦ (೯೭.೦೬%) (ಗ ೧೦೦,ಸಂ ೧೦೦ ) ಕು.ಕಾರ್ತಿಕ್ ಗಜಾನನ ಶೇಟ್ ೫೭೯/೬೦೦ (೯೧.೫%)(ಗ ೧೦೦) ವಾಣಿಜ್ಯ ವಿಭಾಗದ ಕು.ವಿಘ್ನೇಶ ಟಿ ನಾಯ್ಕ ೫೮೨/೬೦೦ (೯೭%) ಕು.ಸಹನಾ ಡಿ ನಾಯ್ಕ ೫೭೮/೬೦೦ (೯೬%) (ವ್ಯ.ಅ-೧೦೦, ಸಂ ೧೦೦) ಕು.ಚಂದನ ಎಂ ಭಟ್ಟ ೫೭೩/೬೦೦ (೯೫.೫%) (ಸಂ ೧೦೦) ಕಲಾವಿಭಾಗದ ಕು.ಗಣೇಶ ಶೇಖರ ಪಟಗಾರ ೫೬೨/೬೦೦ (೯೩.೬೬%) ಕು.ಭಾರ್ಗವಿ ಗೋಪಾಲ ಪಟಗಾರ ೫೫೧/೬೦೦ (೯೧.೮೩%) ಕು.ತೃಪ್ತಿ ನಾರಾಯಣ ನಾಯ್ಕ ೫೫೦/೬೦೦ (೯೧.೬೬%) ಅಂಕಗಳೊಂದಿಗೆ ತೇರ್ಗಡೆಯಾಗಿರುತ್ತಾರೆ.

RELATED ARTICLES  ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಗಾಗಿ ಪಠ್ಯಪೂರಕ ಚಟುವಟಿಕೆಗಳು ಅಗತ್ಯ: ರೋಹಿದಾಸ್.ಎಸ್.ಗಾಂವಕರ್

ಸಂಸ್ಕೃತದಲ್ಲಿ ೧೨,ಗಣಿತ ೧೦, ರಸಾಯನಶಾಸ್ತ್ರ ೦೨,ಗಣಕವಿಜ್ಞಾನ ೦೨, ಭೌತಶಾಸ್ತ್ರ ೦೧,ಲೆಕ್ಕಶಾಸ್ತ್ರ ೦೧,ಕನ್ನಡ ೦೧ ಹೀಗೆ ೨೯ ವಿದ್ಯಾರ್ಥಿಗಳು ೧೦೦ ಕ್ಕೆ ೧೦೦ ಅಂಕಗಳಿಸಿರುತ್ತಾರೆ.ಉತ್ತಮ ಫಲಿತಾಂಶಕ್ಕಾಗಿ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು,ಶಾಸಕರೂ ಆದ ಶ್ರೀ ದಿನಕರ ಕೆ ಶೆಟ್ಟಿ ಯವರು,ಪ್ರಾಂಶುಪಾಲರಾದ ಶ್ರೀ ಸತೀಶ್ ಬಿ ನಾಯ್ಕ ಹಾಗೂ ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳನ್ನು ಆಭಿನಂದಿಸಿದ್ದಾರೆ.

RELATED ARTICLES  ಕಲಿಕೆ ಜ್ಞಾನಮಯ, ಆನಂದಮಯವಾದರೆ ವಿದ್ಯೆ ಸಾರ್ಥಕ: ರಾಘವೇಶ್ವರ ಶ್ರೀ