ಕುಮಟಾ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದ ಚುಕ್ಕಣಿ ಹಿಡಿಯಲು ಎಲ್ಲಾ ಪಕ್ಷಗಳು ಒಂದಲ ಒಂದು ಚಕ್ರವ್ಯೂಹವನ್ನು ರಚಿಸುತ್ತಾ ಬಂದಿದೆ. ನಮ್ಮ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೇಸ್ ಸರಕರಾ ತಮ್ಮ ಅಧಿಕಾರವನ್ನು ಮುಂದುವರಿಸಲು ಅನೇಕ ಕಸರತ್ತು ಕೂಡ ನಡೆಸುತ್ತಿದೆ. ಅತಂಹ ಯೋಜನೆಯಲ್ಲಿ ಒಂದಾದ ಮನೆ ಮನೆಗೆ ಕಾಂಗ್ರೆಸ್ ಎನ್ನುವ ಯೋಜನೆಯಾಗಿದೆ. ಈ ಉದ್ದೆಶದಿಂದ ರಾಜ್ಯ ನಾಯಕರ ಮಾರ್ಗದರ್ಶನದಲ್ಲಿ ಎಲ್ಲಾ ಜಿಲ್ಲೆಯ ಬ್ಲಾಕ್ ಮಟ್ಟದ ಮನೆ ಮನೆಗಳಿಗೆ ಕಾಂಗ್ರೆಸ್ ಕಾರ್ಯಕರ್ತರು,ಮುಖಂಡರು ಬೇಟಿ ನೀಡಿ ತಮ್ಮ ಸರಕಾರದ ಹಾಗೂ ಮುಖ್ಯಮಂತ್ರಿಗಳ ಸಾಧನೆಯ ಬಗ್ಗೆ ತಿಳಿಸುವ ಕೆಲಸವಾಗುತ್ತಿದೆ. ಹೌದು ಈ ಯೋಜನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕುಮಟಾ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರುಗಳು ಮುಂದಾಗಿದ್ದಾರೆ.  ಈ ಯೋಜನೆಯನ್ನು ತಾಲೂಕಿನ ಹೆಗಡೆ ಬ್ಲಾಕ್ ಮಟ್ಟದಲ್ಲಿ ಕುಮಟಾ ಹೊನ್ನಾವರ ಕ್ಷೇತ್ರದ ಶಾಸಕರು ಮತ್ತು ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಶಾರದಾ ಮೋಹನ ಶೆಟ್ಟಿಯವರು ಚಾಲನೆ ನೀಡಿದ್ದಾರೆ. ನಂತರ ಕಾಂಗ್ರಸಿಗರು  ಮನೆ ಮನೆಗೆ ತೆರಳಿ ತಮ್ಮ ಸರಕಾರದ ಹಾಗೂ ಮುಖ್ಯಮಂತ್ರಿಗಳ ಮತ್ತು  ತಮ್ಮ ಪಕ್ಷದ ಸ್ಥಳೀಯ ಶಾಸಕರ ಕಾರ್ಯ ವೈಕರಿಯನ್ನು ತಿಳಿಸಿ ಮುಂಬರುವ ಚುನಾವಣೆಯಲ್ಲಿ ಮತದಾರ ಪ್ರಭುಗಳು ತಮ್ಮ ಕೈಹಿಡಿಯುವಂತೆ ಹೇಳಿದ್ರು.
 ಈ ಬಗ್ಗೆ ಜಿ,ಪಂಚಾಯತ ಸದಸ್ಯರಾದ ರತ್ನಾಕರ ನಾಯ್ಕ ಮಾತನಾಡಿ ನಮ್ಮ ಸರಕಾರ ಬಂದು ನಾಲ್ಕೂವರೆ ವರ್ಷ ಆಗಿದೆ. ನಮ್ಮ ಮುಖ್ಯಮಂತ್ರಿಗಳು ಹೇಳಿದಂತೆ ನಡೆದುಕೊಂಡಿದ್ದಾರೆ. ಹಲವು ಯೋನಜೆಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಎಲ್ಲಾ ಸಾಧನೆಯನ್ನು ಇಟ್ಟುಕೊಂಡು ನಾವು ದಿನಕ್ಕೆ  ಕನಿಷ್ಟ 20 ಮನೆಗಳನ್ನು ತಲುಪಿ ಸರಕಾರದ ಸಾಧನೆ ತಿಳಿಸುತ್ತೆವೆ ಜೊತೆಗೆ ಜನರ ಅಭಿಪ್ರಾಯವನ್ನು ಸಂಗ್ರಹಿಸುತ್ತೆವೆ. ಇದು ಅಕ್ಟೋಬರ 15ರವರೆಗೆ ಸಂಪೂರ್ಣ ಎಲ್ಲಾರ ಮನೆ ತಲುಪಿ ಯಶಸ್ವಿಯಾಗುತ್ತೆ ಎಂದರು.
ನಮ್ಮ ರಾಜ್ಯದಲ್ಲಿ ಕೆಲವು ಜನರಲ್ಲಿ ನಮ್ಮ ಮುಖ್ಯಮಂತ್ರಿಗಳು ಜಾರಿ ಮಾಡಿರುವ ಅನ್ನಭಾಗ್ಯ ಯೋಜನೆಗಳು ಬಿ.ಜೆ.ಪಿಯ ಯಡಿಯೂರಪ್ಪನವರು ಮಾಡಿರುವದು ಎನ್ನುವ ತಪ್ಪು ಮಾಹಿತಿ ಇದೆ. ಅಲ್ಲದೆ ಎಷ್ಟೋ ಯೋಜನೆಗಳನ್ನು ತಮ್ಮ ಸರಕಾರದಿಂದ ಬಿಡುಗಡೆಯಾಗಿದ್ರು ಕೆಲವರು ನಾವು ಮಾಡಿದ್ದು ಎನ್ನುವದನ್ನು ಹೇಳಿ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ನಮ್ಮ ಸರಕಾರದ ಹಲವು ಉತ್ತಮ ಯೋಜನೆಗಳು ಜನರಿಗೆ ತಲುಪುತ್ತಿಲ್ಲ. ಇದನ್ನೆಲ್ಲ ಅರಿತು ನಾವು ಬ್ಲಾಕ್ ಮಟ್ಟದಲ್ಲಿ ಎಲ್ಲಾರ ಮನೆ ಮನೆಗೆ ತೆರಳಿ ಸರಕಾರದ ಕಾರ್ಯಕ್ರಮವನ್ನು ತಿಳಿ ಹೇಳುತ್ತಿದ್ದೆವೆ ಈ ಮೂಲಕ ಪಕ್ಷ ಸಂಘಟನೆ ಮಾಡುತ್ತಿದ್ದೆವೆ ಎಂದು ಕುಮಟಾ ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ವಿ.ಎಲ್.ನಾಯ್ಕ ಹೇಳಿದ್ರು .
RELATED ARTICLES  ಹಣತೆ’ ಹಳಿಯಾಳ ತಾಲೂಕು ಘಟಕ ಉದ್ಘಾಟನೆ