ಶ್ರೀ ರಾಮಚಂದ್ರಾಪುರ ಮಠ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯಾಶೀರ್ವಾದ ಮತ್ತು ಆದೇಶದ ಮೇರೆಗೆ ಕಾರ್ಯವೆಸಗುತ್ತಿರುವ ಹವ್ಯಕ ಮಹಾಮಂಡಲ ಮುಳ್ಳೇರಿಯ ಮಂಡಲಾಂತರ್ಗತ ಕಾಸರಗೋಡು ವಲಯದ ಆಶ್ರಯದಲ್ಲಿ ಕಾಸರಗೋಡು ನಗರದ ಹವ್ಯಕ ಸಭಾಭವನದಲ್ಲಿ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಸಾಹಿತ್ಯ ಕಮ್ಮಟ ಮತ್ತು ಮೋಜಿನ ಚಟುವಟಿಕೆ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ಜರಗಿತು.

ದೀಪ ಪ್ರಜ್ವಲನ, ಧ್ವಜಾರೋಹಣ, ಶಂಖನಾದ, ಗುರುವಂದನೆ ಹಾಗೂ ಶಿವಪಂಚಾಕ್ಷರಿ ಸ್ತೋತ್ರ ಪಠಣದ ಅನಂತರ ಔಪಚಾರಿಕ ಉದ್ಘಾಟನ ಸಮಾರಂಭ ಜರಗಿತು. ಕಾರ್ಯಕ್ರಮವನ್ನು ಶ್ರೀ ಬೆದ್ರಡಿ ಶಂಕರನಾರಾಯಣ ಭಟ್ಟರು ಉದ್ಘಾಟಿಸಿದರು. ಕಾಸರಗೋಡು ವಲಯ ಅಧ್ಯಕ್ಷರಾದ ಶ್ರೀ ವೈವಿ ರಮೇಶ ಭಟ್ಟರು ಅಧ್ಯಕ್ಷತೆ ವಹಿಸಿದರು. ಮುಳ್ಳೇರಿಯ ಮಂಡಲ ವಿದ್ಯಾರ್ಥಿ ವಾಹಿನಿ ಪ್ರಧಾನ ಶ್ರೀ ಕೇಶವ ಪ್ರಸಾದ ಎಡಕ್ಕಾನ, ವೃತ್ತಿಪರ ವಿಭಾಗದ ಪ್ರಧಾನ ಶ್ರೀ ವೈ ಕೆ ಗೋವಿಂದ ಭಟ್ಟ, ಮಾತೃ ವಿಭಾಗ ಪ್ರಧಾನ ಶ್ರೀಮತಿ ಕುಸುಮ ಪೆರುಮುಖ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾಸರಗೋಡು ವಲಯ ವಿದ್ಯಾರ್ಥಿ ವಾಹಿನಿ ಪ್ರಧಾನ ಶ್ರೀಮತಿ ಪುಷ್ಟಲತ ಕಾರ್ಯಕ್ರಮದ ರೂಪುರೇಷೆಯನ್ನು ಸಭೆಯ ಮುಂದಿಟ್ಟು ಪ್ರಸ್ತಾವನೆಗೈದು ಎಲ್ಲರನ್ನೂ ಸ್ವಾಗತಿಸಿದರು.

RELATED ARTICLES  ಬೆಳೆ ಸಮೀಕ್ಷೆ ಅರ್ಧಕ್ಕಿಂತ ಹೆಚ್ಚು ಮುಗಿದಿದೆ. ಇಲಾಖೆಯಿಂದ ಮಾಹಿತಿ

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪ್ರಸಿದ್ಧ ಚಿತ್ರ ಕಲಾವಿದ, ಕವಿ, ಕಥೆಗಾರ, ಅನುವಾದಕ, ನಿವೃತ್ತ ಅಧ್ಯಾಪಕ ಶ್ರೀ ಬಾಲಸುಬ್ರಹ್ಮಣ್ಯ ಮಧುರಕಾನನ ವ್ಯಂಗ್ಯಚಿತ್ರ ರಚನೆಯ ಕುರಿತಾದ ತರಗತಿ ನಡೆಸಿದರು. ಕಲ್ಲಕಟ್ಟ ಶಾಲಾ ಮುಖ್ಯೋಪಾಧ್ಯಾಯ ಸಾಹಿತಿ, ಅಧ್ಯಾಪಕ ತರಬೇತುದಾರ ಶ್ರೀ ಶ್ಯಾಮಪ್ರಸಾದ ಕುಳಮರ್ವ ಕಥಾ ರಚನೆಯ ಕುರಿತಾದ ತರಗತಿ ನಡೆಸಿಕೊಟ್ಟರು. ಕವಿ, ಸಾಹಿತಿ, ಕೊಡ್ಲಮೊಗರು ಶ್ರೀ ವಾಣಿವಿಜಯ ಶಾಲಾ ಅಧ್ಯಾಪಕ ಶ್ರೀ ಸೇರಾಜೆ ಶ್ರೀನಿವಾಸ ಭಟ್ಟ ಕವಿತಾ ರಚನಾ ಕಮ್ಮಟವನ್ನು ನಡೆಸಿಕೊಟ್ಟರು. ಗುರುಮೂರ್ತಿ ನಾಯ್ಕಾಪು ಅವರ ನೇತೃತ್ವದಲ್ಲಿ ವಿವಿಧ ಮೋಜನ ಆಟಗಳನ್ನು ನಡೆಸಲಾಯಿತು.

ಸಾಯಾಹ್ನ ನಡೆದ ಸಮಾರೋಪ ಸಮಾರಂಭವನ್ನು ಹವ್ಯಕ ಮಹಾಮಂಡಲ ಉಲ್ಲೇಖ ವಿಭಾಗ ಪ್ರಧಾನ ಶ್ರೀ ಗೋವಿಂದ ಭಟ್ಟ ಬಳ್ಳಮೂಲೆ ಉದ್ಘಾಟಿಸಿದರು. ಮುಳ್ಳೇರಿಯ ಮಂಡಲ ಕಾರ್ಯದರ್ಶಿ ಶ್ರೀ ಬಾಲಸುಬ್ರಹ್ಮಣ್ಯ ಭಟ್ಟ ಸರ್ಪಮಲೆ, ಮುಳ್ಳೇರಿಯ ಮಂಡಲ ಶಿಷ್ಯಮಾಧ್ಯಮ ವಿಭಾಗ ಪ್ರಧಾನ ಶ್ರೀ ಮಹೇಶ ಸರಳಿ ಶುಭ ಹಾರೈಸಿದರು.

RELATED ARTICLES  ಮಹಾಶಿವರಾತ್ರಿ ಉತ್ಸವ ಹಿನ್ನೆಲೆ ಗೋಕರ್ಣದಲ್ಲಿ ಮಾ.11 ರಿಂದ ಮದ್ಯ ನಿಷೇಧ

* ಕಥೆ, ಕವನ ರಚನೆಯಲ್ಲಿ ಮತ್ತು ಮೋಜಿನ ಆಟಗಳಲ್ಲಿ ಪ್ರಥಮ ಸ್ಥಾನ ಮತ್ತು ದ್ವಿತೀಯ ಸ್ಥಾನ ಗಳಿಸಿದವರಿಗೆ ಬಹುಮಾನ ವಿತರಣೆ, ಭಾಗವಹಿಸಿದ ಎಲ್ಲ ಮಕ್ಕಳಿಗೆ ಪ್ರಮಾಣ ಪತ್ರ ಮತ್ತು ನೆನಪಿನ ಕಾಣಿಕೆ ನೀಡಲಾಯಿತು.

* ಈ ವರ್ಷದ ವಲಯ ಮಟ್ಟದ ಪ್ರತಿಭಾ ಪುರಸ್ಕಾರ, ಶ್ರೀ ಮಠದಿಂದ ಮಂಜೂರು ಮಾಡಲಾದ ವಿದ್ಯಾರ್ಥಿ ಸಹಾಯ ನಿಧಿ ವಿತರಣೆ ಕಾರ್ಯಕ್ರವನ್ನುೂ ನಡೆಸಲಾಯಿತು.ಒಟ್ಟು ಐದು ವಲಯಗಳಿಂದ ಹದಿನೈದು ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ ಕಾರ್ಯಕ್ರಮದ ಕೊನೆಯಲ್ಲಿ ವಲಯ ಕಾರ್ಯದರ್ಶಿ ಶ್ರೀ ಉಳುವಾನ ಈಶ್ವರ ಭಟ್ಟ ಧನ್ಯವಾದ ಸಮರ್ಪಣೆ ಮಾಡಿದರು.

* ವಲಯದ ಮಾತೃಮಂಡಳಿಯ ಸದಸ್ಯರು ಸ್ವತಃ ಸಾವಯವ ಅಕ್ಕಿ ಅನ್ನ ಮತ್ತು ಪಾಯಸ ಸಹಿತ ರುಚಿಕಟ್ಟಾದ ಭೋಜನ ತಯಾರಿ ಮಾಡಿ ಬಡಿಸಿದ್ದುೂ ಎಲ್ಲ ಖರ್ಚನ್ನು ವಿದ್ಯಾರ್ಥಿ ವಾಹಿನಿ ಪ್ರಧಾನ ಶ್ರೀಮತಿ ಪುಷ್ಟಲತ ಅವರ ಮನೆಯವರು ವಹಿಸಿದ್ದು ವಿಶೇಷವಾಗಿ ಕಂಡುಬಂದಿತು.