ಆಧಾರರಹಿತವಾಗಿ ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳ ಕುರಿತು ವದಂತಿಗಳನ್ನು ಹಬ್ಬಿಸಿ; ಅವರ ತೇಜೋವಧೆ ಮಾಡುವ ಹಾಗೂ ಹೆಣ್ಣು ಮಕ್ಕಳಿಗೆ ಸಂಸ್ಕಾರವನ್ನು ನೀಡುವ ‘ಕನ್ಯಾಸಂಸ್ಕಾರ’ದ ಕುರಿತು ಕೀಳುಮಟ್ಟದ ಹೇಳಿಕೆಗಳನ್ನು ನೀಡಿ ಸಮಾಜದ ಧಾರ್ಮಿಕ ನಂಬಿಕೆಗಳನ್ನು ಘಾಸಿಗೊಳಿಸುವ ಪ್ರಯತ್ನಗಳನ್ನು ಪ್ರತಿಬಂಧಿಸಿ ಬೆಂಗಳೂರಿನ ಹೆಚ್ಚುವರಿ ಸಿವಿಲ್ ಹಾಗೂ ಸೆಷನ್ಸ್ ನ್ಯಾಯಾಲಯ ಆದೇಶ ನೀಡಿದೆ.

ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಶ್ರೀರಾಮಚಂದ್ರಾಪುರಮಠ ಹಾಗೂ ಶ್ರೀರಾಮಚಂದ್ರಾಪುರಮಠದ ಪೀಠಾಧಿಪತಿಗಳಾದ ಶ್ರೀಶ್ರೀರಾಘವೇಶ್ವರ ಭಾರತೀಮಹಾಸ್ವಾಮಿಗಳು ಸಮಾಜದಲ್ಲಿ ಧಾರ್ಮಿಕತೆಯನ್ನು ಬೆಳೆಸುವ ಜೊತೆಗೆ ಸರ್ವಸಮಾಜದ ಉನ್ನತಿಗೆ ಶ್ರಮಿಸುತ್ತಿದ್ದಾರೆ. ಯಾವುದೇ ಜಾತಿ ಲಿಂಗ ಬೇಧಮಾಡದೇ ಸರ್ವಸಮಾಜದ ಉನ್ನತಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಆದರೆ ಕೆಲವು ಪಟ್ಟಭದ್ರ ಸ್ವಹಿತಾಸಕ್ತಿಗಳು ಆಧಾರರಹಿತವಾಗಿ ಹಾಗೂ ಅಕಾರಣವಾಗಿ ಶ್ರೀಗಳ ತೇಜೋವಧೆಯನ್ನು ನಿರಂತರವಾಗಿ ಮಾಡುತ್ತಿದ್ದು, ಹೆಣ್ಣುಮಕ್ಕಳ ಉನ್ನತಿಗಾಗಿ ನೀಡುವ ಕನ್ಯಾಸಂಸ್ಕಾರದಂತಹ ಸನಾತನ ಧಾರ್ಮಿಕ ಕಾರ್ಯದ ಕುರಿತು ಕೀಳುಮಟ್ಟದ ಹೇಳಿಕೆಗಳನ್ನು ಸಾರ್ವಜನಿಕವಾಗಿ
ಪತ್ರಿಕೆ – ಸಾಮಾಜಿಕ ಜಾಲತಾಣ ಹಾಗೂ ಬಹಿರಂಗ ಸಮಾವೇಶಗಳ ಮೂಲಕ ನೀಡಿ ಸಮಾಜದ ನಂಬಿಕೆಗಳನ್ನು ಬುಡಮೇಲು ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಲಕ್ಷಾಂತರ ಜನರ ಧಾರ್ಮಿಕ ಭಾವನೆ ಹಾಗೂ ಸಾಮಾಜಿಕ ನಂಬಿಕೆಗಳಿಗೆ ಹಾನಿಯಾಗುವುದನ್ನು ತಪ್ಪಿಸುವ ಸಲುವಾಗಿ ಸದರಿ ಸಮಾಜ ವಿರೋಧಿ ಕೃತ್ಯಗಳನ್ನು ಪ್ರತಿಬಂಧಿಸಲು ಸಲ್ಲಿಸಿದ್ದ ಮನವಿಯನ್ನು ಮಾನ್ಯ ಮಾಡಿದ ಬೆಂಗಳೂರಿನ ಹೆಚ್ಚುವರಿ ಸಿವಿಲ್ ಹಾಗೂ ಸೆಷನ್ಸ್ ನ್ಯಾಯಾಲಯ ಆದೇಶ ನೀಡಿದೆ.

RELATED ARTICLES  ನಂತೂರು ಭಾರತೀ ಪ್ರೌಢಶಾಲೆ, ಪಿಯುಸಿ ವಿಭಾಗದ ಪ್ರವೇಶೋತ್ಸವ

ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡಲು, ಧಾರ್ಮಿಕ ಭಾವನೆ ಹಾಗೂ ನಂಬಿಕೆಗಳಿಗೆ ಆಗುತ್ತಿರುವ ಘಾಸಿಯನ್ನು ತಪ್ಪಿಸಲು ಸಿ ಪಿ ಸಿ ಆದೇಶ 39 ರ ಅನ್ವಯ ಈ ಆದೇಶ ನೀಡಿದೆ.

 

ದಲಿತ ಸಮುದಾಯಕ್ಕೆ ಸೇರಿದ ಹಿಂದು ಮುಕ್ರಿ ಸಮಾಜದ N R ಮುಕ್ರಿ, ಮಂಜುಳಾ ಮುಕ್ರಿ, ತಿಮ್ಮು ಎನ್ ಮುಕ್ರಿ, ನಾರಾಯಣ ಮುಕ್ರಿ, ಮಾರುತಿ ಮುಕ್ರಿ ಎಂಬುವರು ಸಲ್ಲಿಸಿದ್ದ ಮನವಿ ಹಾಗೂ ಪೂರಕ ದಾಖಲೆಗಳನ್ನು ಸಮಗ್ರವಾಗಿ ಗಮನಿಸಿ, ಪುರಸ್ಕರಿಸಿದ ನ್ಯಾಯಾಲಯ ರೇವತಿ ರಾಜ್ ಹಾಗೂ R M N ರಮೇಶ್ ಅವರಿಗೆ ಸಮನ್ಸ್ ಜಾರಿಗೊಳಿಸುವಂತೆ ಸೂಚಿಸಿ, ಸದರಿ ವ್ಯಕ್ತಿಗಳು ಸ್ವತಃ ಅಥವಾ ಅವರ ಪ್ರತಿನಿಧಿಗಳ ಮೂಲಕ ಶ್ರೀರಾಮಚಂದ್ರಾಪುರಮಠ ಹಾಗೂ ಶ್ರೀರಾಮಚಂದ್ರಾಪುರಮಠದ ಪೀಠಾಧಿಪತಿಗಳಾದ ಶ್ರೀಶ್ರೀರಾಘವೇಶ್ವರ ಭಾರತೀಮಹಾಸ್ವಾಮಿಗಳ ವಿರುದ್ಧ ಹಾಗೂ ಕನ್ಯಾಸಂಸ್ಕಾರದಂತಹ ಧಾರ್ಮಿಕ ಪ್ರಕ್ರಿಯೆಯ ಕುರಿತಾಗಿ ಮುದ್ರಣ ಮಾಧ್ಯಮ – ವಿದ್ಯುನ್ಮಾನ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣ ಹಾಗೂ ಸಾರ್ವಜನಿಕ ಸಮಾವೇಶ ಸೇರಿದಂತೆ, ಯಾವುದೇ ರೀತಿಯಿಂದಲೂ ಹೇಳಿಕೆ – ಸಂದೇಶಗಳನ್ನು ನೀಡದಂತೆ ಪ್ರತಿಬಂಧಿಸಿ ಆಜ್ಞೆ ಮಾಡಿದೆ. ಅರ್ಜಿದಾರರ ಪರವಾಗಿ ಶ್ರೀ ದಿನೇಶ್ ಹೊಡಬಟ್ಟೆ ಅವರು ವಾದಿಸಿದ್ದರು.

RELATED ARTICLES  ಹುತಾತ್ಮರಾದ ಭಾರತಾಂಬೆಯ ಮಕ್ಕಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಣಾ ಸಭೆ