ಕುಮಟಾದ ಕೊಂಕಣ ಎಜ್ಯುಕೇಶ್ಯನ್ ಟ್ರಸ್ಟನ ವಿಧಾತ್ರಿ ಅಕಾಡೆಮಿ ಸಂಯೋಗದೊಂದಿಗೆ ಬಿ.ಕೆ. ಭಂಡಾರ‍್ಕರ್ ಸರಸ್ವತಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಪ್ರಸಕ್ತ IMU CET ರಾಷ್ಟ್ರೀಯ ಮಟ್ಟದ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆದು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

RELATED ARTICLES  ಕುಷ್ಠ ರೋಗ: ರಾಜ್ಯದಲ್ಲಿಯೇ ಉತ್ತರಕನ್ನಡ ಜಿಲ್ಲೆಗೆ 4ನೇ ಸ್ಥಾನ!

ವಿದ್ಯಾರ್ಥಿಗಳಾದ ಖುಷಿ ಸಿ ಎಚ್ AIR ೨೧೯೭ , ಸುಜಲ್ ಶ್ರೀರಾಮ್ ಕವರಿ AIR ೬೭೩೬, ಕೋಮಲ್ ನಾಯ್ಕ AIR ೯೪೪೮ , ಪ್ರತೀಕ ಗೌಡ್ AIR-೯೬೭೭ ರ‍್ಯಾಂಕ್ ಪಡೆದು ಅತ್ಯುತ್ತಮ ಸಾಧನೆ ಮಾಡಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಈ ಅತ್ಯುತ್ತಮ ಸಾಧನೆಗೆ ಆಡಳಿತ ಮಂಡಳಿಯವರು, ವಿಧಾತ್ರಿ ಅಕಾಡೆಮಿಯ ಶ್ರೀ ಗುರುರಾಜ ಶೆಟ್ಟಿ. ಹಾಗೂ ಪ್ರಾಚಾರ್ಯರಾದ
ಶ್ರೀ ಕಿರಣ ಭಟ್ಟರವರು ಹಾಗೂ ಉಪನ್ಯಾಸಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

RELATED ARTICLES  ರಾಷ್ಟ್ರಮಟ್ಟದ ಅಬಾಕಸ್ ನಲ್ಲಿ ಬಹುಮಾನ ಪಡೆದ ಶ್ರೀನಂದಾ ದಿಂಡೆ.