ಶಿರಸಿ: ತಾಲೂಕಿನ ಬೆಂಗಳೆ ಗ್ರಾಮದ ಹಾಡಲಗಿಯವರ ಮನೆಯ ಗಣೇಶ ಹೆಗಡೆ ಹಾಗೂ ಜಯಾ ಹೆಗಡೆ ಪುತ್ರಿ ಕು॥ ಅಭಿಜ್ಞಾ ಹೆಗಡೆ ಇವಳು ಆರ್ಮ್ಡ ಫೋರ್ಸಸ್ ಮೆಡಿಕಲ್ ಕಾಲೇಜ್ (AFMC), ಪುಣೆಯಿಂದ ಡಾಕ್ಟರ್ (MBBS) ಪದವಿಯಲ್ಲಿ ವರ್ಗಕ್ಕೇ ಪ್ರಥಮ ಸ್ಥಾನ ಪಡೆದು, ಭಾರತೀಯ ವಾಯು ಸೇನೆಯಲ್ಲಿ (Indian Air Force) ಫ್ಲೈಯಿಂಗ್ ಆಫಿಸರ್ (Flying Officer) ಆಗಿ ನೇಮಕಗೊಂಡಿದ್ದಾಳೆ.
ಸದ್ಯ ಉತ್ತರ ಪ್ರದೇಶದ ಕಾನ್ಪುರ ವಾಯು ನೆಲೆಯ ಕಮಾಂಡ್ ಹಾಸ್ಪಿಟಲ್ ನಲ್ಲಿ ಕಾರ್ಯನಿರತಳಾಗಿದ್ದು ,ಪಾಲಕರು,ಪೋಷಕರು, ಊರ ಜನರು ಹಾಗೂ ಗುರು ಹಿರಿಯರು ಅಭಿನಂದಿಸಿ ಹಾರೈಸಿದ್ದಾರೆ. ಗ್ರಾಮೀಣ ಕ್ಷೇತ್ರದ ಮಕ್ಕಳಿಗೆ ಇದೊಂದು ಪ್ರೇರಣಾದಾಯಕವಾಗಲೆಂದು ಆಶಿಸಿದ್ದಾರೆ.

RELATED ARTICLES  ಮಂಗಳಮುಖಿಯಂತೆ ಬಟ್ಟೆತೊಟ್ಟು ಹಣ ಪಡೆಯುತ್ತಿದ್ದ ಪುರುಷನಿಗೆ ಬಿತ್ತು ಗೂಸಾ