ಕಾರವಾರ: ಕಾರು ಚಲಾಯಿಸುವಾಗಲೇ ಹೃದಯಾಘಾತದಿಂದ ಚಾಲಕನೋರ್ವ ಮೃತಪಟ್ಟ ಘಟನೆ ನಗರದ ಹಬ್ಬುವಾಡ ರಸ್ತೆಯ ವರ್ಚುವಲ್ ಪ್ಯಾರಡೈಸ್ ಅಪಾರ್ಟಮೆಂಟ್ ಬಳಿ ನಡೆದಿದೆ. ಗಜಾ ಬಾಂದೇಕರ ಮೃತಪಟ್ಟ ಕಾರು ಚಾಲಕನಾಗಿದ್ದಾನೆ. ನಗರದ ಪ್ರಸಿದ್ದ ವೈದ್ಯ ಡಾ. ಅನ್ವಿತ್ ನಾಯಕ ಅವರ ಮನೆಯಲ್ಲಿ ಕಾರು ಚಾಲಕನಾಗಿ ಗಜಾ ಬಾಂದೇಕರ ಕೆಲಸ ನಿರ್ವಹಿಸುತ್ತಿದ್ದು, ಕೆಲ ದಿನಗಳ ಹಿಂದೆ ಬೈಪಾಸ್ ಸರ್ಜರಿ ಸಹ ಆಗಿತ್ತು ಎನ್ನಲಾಗಿದೆ.

RELATED ARTICLES  ‘ಕರ್ಕಿ ಗ್ರಾಮದ ಅಸ್ತಿತ್ವಕ್ಕಾಗಿ ಹೋರಾಟ’ ಡಿಸೆಂಬರ್ 23 ಕ್ಕೆ

ಗುರುವಾರ ಮಧ್ಯಾಹ್ನದ ವೇಳೆಯಲ್ಲಿ ಕಾರು ಚಲಾಯಿಸಿಕೊಂಡು ಹಬ್ಬುವಾಡ ರಸ್ತೆಯಲ್ಲಿ ಸಾಗುವಾಗ ಹೃದಯಾಘಾತವಾಗಿದೆ. ಹೃದಯಾಘಾತದಿಂದ ಪಕ್ಕದಲ್ಲೇ ಇದ್ದ ಕಂಪೌಂಡ್ ಗೆ ಕಾರನ್ನ ಚಾಲಕ ಗುದ್ದಿದ್ದಾನೆ. ತಕ್ಷಣ ಸ್ಥಳೀಯರು ಕಾರನ್ನ ತೆಗೆದು ಗಮನಿಸಿದಾಗ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕಾರವಾರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಮನೆಯಂಗಳಕ್ಕೆ ಬಿತ್ತು ಬೃಹತ್ ಬಂಡೆ : ಹೊನ್ನಾವರದ ಕಾವೂರಿನಲ್ಲಿ ಘಟನೆ