ಕುಮಟಾ: ತಾಲ್ಲೂಕಿನ ಗುಡೆಅಂಗಡಿಯಲ್ಲಿ ಗಾಳಿ ಮಳೆಯಿಂದ ಮುಳುಗಿ ಹಾನಿಗೊಳಗಾಗಿದ್ದ ಬೋಟ್ ನಿಂದ ಮೀನುಗಾರ ಬೀರಪ್ಪ ಮಾಸ್ತಿ ಹರಿಕಂತ್ರ ಅವರಿಗೆ 20 ಲಕ್ಷ ರೂ. ನಷ್ಟವಾಗಿದ್ದು ಶಾಸಕ ದಿನಕರ ಶೆಟ್ಟಿ ಅವರ ಪ್ರಯತ್ನದಿಂದ ಪರಿಹಾರ ಧನ ದೊರೆತಿದೆ.

ಶ್ರೀ ಕಾಂಚಿಕಪ್ರಸಾದ್ ಹೆಸರಿನ ಫಿಶಿಂಗ್ ಬೋಟ್ ಹಾನಿಗೀಡಾಗಿದ್ದು ಬೋಟ್ ಮಾಲೀಕ ಬೀರಪ್ಪ ಅವರು ಶಾಸಕರ ಬಳಿ ಪರಿಹಾರಕ್ಕಾಗಿ ಮನವಿ ಮಾಡಿದ್ದರು. ಭರವಸೆ ನೀಡಿದ್ದ ಶಾಸಕರು ಇದೀಗ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 5 ಲಕ್ಷ ರೂಪಾಯಿ ಪರಿಹಾರ ಒದಗಿಸಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗೋಕರ್ಣ ಭಾಗದ ಏಳು ಮೀನುಗಾರರ ಬಲೆಗಳು ಬೆಂಕಿ ತಗುಲಿ ಹಾನಿಯಾಗಿದ್ದವು. ಅವರಿಗೆ ಕೂಡ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ಸಿಗುವಂತೆ ಮಾಡುವಲ್ಲಿ ಶಾಸಕ ದಿನಕರ ಶೆಟ್ಟಿ ಅವರು ಮುತುವರ್ಜಿ ವಹಿಸಿದ್ದರು ಎಂಬುದನ್ನು ಇಲ್ಲಿ ಮೆಲುಕು ಹಾಕಬಹುದಾಗಿದೆ.

RELATED ARTICLES  ಸಿ.ಎ./ಸಿ.ಎಸ್. ಫೌಂಡೇಶನ್ ಪರೀಕ್ಷೆಯಲ್ಲಿ ಸರಸ್ವತಿ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಸಾಧನೆ