ಕುಮಟಾ : ಬೂತ್ ಸಶಕ್ತೀಕರಣದ ಅಂಗವಾಗಿ ಇಂದು ಕುಮಟಾ ಮಂಡಲದ ಬೂತ ‌ನಂ.೧ ರಲ್ಲಿ (ಗಂಗೆಕೋಡ್ಲಾ) ಬೂತ್ ಅಧ್ಯಕ್ಷರ ಮನೆಯಲ್ಲಿ ಪ್ರಧಾನಿ ಮೋದಿಜಿ ಯವರ ಮನಕಿ ಬಾತನ್ನು ಆಲಿಸಿ, ತದನಂತರ ಬೂತ ಕಮಿಟಿ ಸಭೆ ನಡೆಸಲಾಯಿತು. ಬೂತ ಸಭೆಗೆ ಜಿಲ್ಲಾ ಅಧ್ಯಕ್ಷರಾದ ಶ್ರೀ ವೆಂಕಟೇಶ್ ನಾಯಕ್, ಮಹಾ ಶಕ್ತಿಕೇಂದ್ರ ಅಧ್ಯಕ್ಷರಾದ ಚಂದ್ರಶೇಖರ ನಾಯ್ಕ, ಬೂತ್ ಅಧ್ಯಕ್ಷರಾದ ದಶರತ ಕೇರಶ, ಪ್ರಭಾರಿ ನಾಗರಾಜ ಹಿತ್ತಲಮಕ್ಕಿ, ಗಣೇಶ ಪಂಡಿತ್, ಪಂಚಾಯತ್ ಅಧ್ಯಕ್ಷ ಮತ್ತು ಸದಸ್ಯರು ಉಪಸ್ಥಿತರಿದ್ದರು.

RELATED ARTICLES  ಭಟ್ಕಳ ನ್ಯಾಯಾಲಯ ಕಟ್ಟಡದಲ್ಲಿ ಬೆಂಕಿ ಅವಘಡ

ವೆಂಕಟೇಶ್ ನಾಯಕರು ಬೂತ ಸಶಕ್ತೀಕರಣದ ಬಗ್ಗೆ ಮತ್ತು ಅಗತ್ಯತೆ ಬಗ್ಗೆ ವಿವರಿಸಿದರು.

ನಾಗರಾಜ್ ನಾಯಕ್ ತೊರ್ಕೆ ಮಾತನಾಡಿ ಮೋದಿಜಿಯವರ ೮ ವರ್ಷದ ಸಾಧನೆ ಬಗ್ಗೆ ತಿಳಿಸಿದರು. ಮಹೇಶ್ ಶೆಟ್ಟಿ ಮತ್ತು ರಾಜೇಶ್ ನಾಯಕರು ಸದ್ರಿ ಪಂಚಾಯತ್ ನಲ್ಲಿ ಆದ ಅಭಿವೃದ್ಧಿ ಬಗ್ಗೆ ವಿವರಿಸಿದರು. ಸಾಂಕೇತಿಕವಾಗಿ ಸಸಿ ನೆಟ್ಟು ಮನೆಗಳಿಗೆ ಕರ ಪತ್ರ ಹಂಚಿ ಮೋದಿಜಿಯವರ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲಾಯಿತು.

RELATED ARTICLES  ಪಾಕಿಸ್ತಾನದಿಂದ ನಿರಾಶ್ರಿತರಾಗಿ ಭಾರತಕ್ಕೆ ಬಂದಿರುವ ಹಿಂದೂಗಳಿಗೆ ಭಾರತದ ನಾಗರಿಕತ್ವವನ್ನು ನೀಡಿರಿ ಎಂದು ಹೊನ್ನಾವರದಲ್ಲಿ ಮನವಿ ಸಲ್ಲಿಕೆ.