ಹೊನ್ನಾವರದ ಬೆಳಕೊಂಡ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರ ಮನವಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ ಅವರು ಸಮಸ್ಯೆಯನ್ನು ಆಲಿಸಿದರು. ಬೃಹತ್ ಗಾತ್ರದ ಮರವು ಶಾಲೆ ಕಟ್ಟಡದ ಮೇಲೆ ಬೀಳುವ ಸಾಧ್ಯತೆಯಿದ್ದು, ಟೊಂಗೆ ಬಿದ್ದರೂ ಕೆಳಗಡೆ ವಿದ್ಯುತ್ ತಂತಿಗಳು ಹಾದು ಹೋಗುವ ಕಾರಣ ಯಾವ ಕ್ಷಣದಲ್ಲೂ ಅಪಾಯ ಸಂಭವಿಸಬಹುದು ಎಂದು ಶಿಕ್ಷಕರು ವಿವರಿಸಿದರು. ಜೊತೆಗೆ ಚಿಕ್ಕದಿರುವ ಶಾಲಾ ಆವರಣಕ್ಕೆ ಇಂಟರ್ ಲಾಕ್ ಅಳವಡಿಕೆ ಮಾಡಿಕೊಡಬೇಕು, ಮಳೆಗಾಲದಲ್ಲಿ ಸ್ಲ್ಯಾಪ್ ಸೋರಿಕೆ, ಬಿಸಿಯೂಟದ ಕಟ್ಟಡ ರಸ್ತೆಯ ಆಚೆ ಇರುವುದು ಹೀಗೆ ಅನೇಕ ಸಮಸ್ಯೆಗಳನ್ನು ಶಾಸಕರ ಮುಂದಿಡಲಾಯಿತು.

RELATED ARTICLES  ಶಾಂತಾದುರ್ಗಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

ತಕ್ಷಣ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಅರಣ್ಯ ಇಲಾಖೆಯವರನ್ನು ಸ್ಥಳಕ್ಕೆ ಕರೆಸಿದ ಶಾಸಕ ದಿನಕರ ಶೆಟ್ಟಿ ಅವರು, ಶಾಲಾ ಸಮಸ್ಯೆಗಳನ್ನು ಮುತುವರ್ಜಿಯಿಂದ ಬಗೆಹರಿಸಬೇಕು ಎಂದು ಸೂಚನೆ ನೀಡಿದರು. ಶಿಕ್ಷಕಿಯರಾದ ಇಂದಿರಾ ನಾಯ್ಕ, ಮೇರಿ, ಪುಷ್ಪಾ, ನಾಗವೇಣಿ ಅವಧಾನಿ, ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ನಿಶಾ ಶೇಟ್, ನಾಗರತ್ನ ಕೊನೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ, ಪ.ಪಂ.ಸದಸ್ಯ ವಿಜು ಕಾಮತ್ ಮುಂತಾದವರು ಇದ್ದರು.

RELATED ARTICLES  ಯುವ ಜನತೆ ಹೆಚ್ಚು ಸಂಘಟಿತರಾಗಿ ಸಮಾಜವನ್ನು ಕಟ್ಟುವ ಕೆಲಸದಲ್ಲಿ ತೊಡಗಿಕೊಳ್ಳಬೇಕು- ನಾಗರಾಜ ನಾಯಕ ತೊರ್ಕೆ