ಯಲ್ಲಾಪುರ: ಕಾಡಿನಲ್ಲಿ ಕಾಡುಕುರಿ ಬೇಟೆಯಾಡಿ ಮನೆಯಲ್ಲಿ ಕುರಿ ಮಾಂಸವನ್ನು ಬೇಯಿಸುತ್ತಿದ್ದ ವ್ಯಕ್ತಿಯೋರ್ವನನ್ನು ಮಂಚಿಕೇರಿ ಅರಣ್ಯ ವಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬಂಧಿಸಿದ್ದಾರೆ. ಕೆರೆಹೊಸಳ್ಳಿ ನಿವಾಸಿ ವಾಸುದೇವ ಸಿದ್ದಿ ಬಂಧಿತ ಆರೋಪಿಯಾಗಿದ್ದು, ಈತ ಬೇಟೆಯಾಡಿ ಕಾಡು ಕುರಿಯ ಮಾಂಸವನ್ನು ಮನೆಯಲ್ಲಿ ಬೇಯಿಸುತ್ತಿದ್ದಾಗ ಮಂಚಿಕೇರಿ ಆರ್‌ಎಫ್‌ಓ ಅಮಿತಕುಮಾರ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಪವನ ಲೋಕುರು, ಸಂಗೂರ ಅಂಗಡಿ, ಅರಣ್ಯ ರಕ್ಷಕರಾದ ವಿಷ್ಣು ಪೂಜಾರಿ, ಪ್ರಶಾಂತ ಅಜರೆಡ್ಡಿ, ವಾಹನ ಚಾಲಕರಾದ ಮಾದೇವ ಸಿದ್ದಿ ಹಾಗೂ ಗಂಗಾಧರ ರೆಡ್ಡಿ, ಯಲ್ಲಾಪುರ ಡಿಸಿಎಫ್ ಎಸ್.ಜಿ.ಭಟ್ಟ ಹಾಗೂ ಮಂಚಿಕೇರಿ ಎಸಿಎಫ್ ಹಿಮವತಿ ಭಟ್ಟ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ್ದರು.

RELATED ARTICLES  ಜು.14 ಕ್ಕೆ ದ್ವಿತೀಯ PUC ರಿಸಲ್ಟ್; ಸಚಿವ ಸುರೇಶಕುಮಾರ್

ಆರೋಪಿಯ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.