ಶಿರಸಿ :ನಗರದ ಪಿ ಎಲ್ಡಿ ಬ್ಯಾಂಕ್ ಕಟ್ಟಡದಲ್ಲಿ ಆಯೋಜಿಸಲಾಗಿದ್ದ ತರಕಾರಿ ಬೀಜದ ಮೇಳವನ್ನು ಪರಿಸರ ಬರಹಗಾರ‌ ಶಿವಾನಂದ ಕಳವೆಯವರು ಉದ್ಘಾಟಿಸಿದರು ಎಂದು ತಿಳಿದುಬಂದಿದೆ. ನಂತರ ಮಾತನಾಡಿದ ಅವರು ಸಾಂಪ್ರದಾಯಿಕ ತರಕಾರಿ ತಳಿಗಳ ರಕ್ಷಣೆಗೆ ಆಯಾ ತರಕಾರಿ ಬೀಜಗಳ ವಿನಿಮಯ ಸಂಸ್ಕೃತಿ ಹೆಚ್ಚಬೇಕು ಎಂದು ಹೇಳಿದರು. ಕರ್ನಾಟಕ ತರಕಾರಿ ತಳಿಗಳ ತವರಾಗಿದೆ. ಆದರೆ ಅವುಗಳ ಹಂಚಿಕೆಯಾಗದ ಕಾರಣ ತಳಿಗಳ ವಿಸ್ತರಣೆ ಆಗುತ್ತಿಲ್ಲ. ಈ ಕಾರಣ ಬೀಜಗಳ ವಿನಿಮಯ ಹೆಚ್ಚಬೇಕು.ಮಾಲ್ ಸಂಸ್ಕೃತಿಯಿಂದ ದೂರವಾಗಿ ಹಿತ್ತಲ ಸಂಪರ್ಕ ಹೆಚ್ಚಿಸಿಕೊಳ್ಳಬೇಕು ಮತ್ತು ಅನುಭವ ಜ್ಞಾನದ ಹಂಚಿಕೆ ಆಗಬೇಕು ಎಂದರು.

ತರಕಾರಿ ಆರ್ಥಿಕವಾಗಿ ವ್ಯಕ್ತಿಯನ್ನು ಸದೃಢವಾಗಿಸುತ್ತದೆ. ಹೊಸ ಬೆಳೆಗಳು ಎಷ್ಟೇ ಬಂದರೂ ತರಕಾರಿಗಿರುವ ಶಕ್ತಿ ಬೇರ ಯಾವುದಕ್ಕೂ ಇಲ್ಲ. ಆದರೆ ಕೃಷಿ ಸೂಕ್ಷ್ಮತೆಗಳೇ ತರಕಾರಿ ಕೃಷಿಯನ್ನು ಗೆಲ್ಲಿಸುತ್ತವೆ. ಗಿಡಗಳ ಗುಣ ಅರ್ಥಮಾಡಿಕೊಳ್ಳಬೇಕು ಎಂದರು. ವಿಶ್ವವಿದ್ಯಾನಿಲಯದ ಮಣ್ಣುಮುಟ್ಟದ ಪಾಠಗಳ ಬದಲು ಮಕ್ಕಳು ಕ್ಷೇತ್ರ ತಜ್ಞತೆಗೆ ಹೆಚ್ಚಿನ ಆದ್ಯತೆ ನೀಡಿದರೆ ಕೃಷಿ ಒಲಿಯುತ್ತದೆ ಎಂದು ಹೇಳಿದರು ಎನ್ನಲಾಗಿದೆ.

RELATED ARTICLES  ಸೋಮವಾರದಂದು ಸಿ ವಿ ಎಸ್ ಕೆ ಪ್ರೌಢಶಾಲೆಯಲ್ಲಿ ತಾಲೂಕಾ ಮಟ್ಟದ ವಿಜ್ಞಾನ ಮಾದರಿಗಳ ಪ್ರದರ್ಶನ ಕಾರ್ಯಕ್ರಮ.

ಉತ್ತರ ಕನ್ನಡ ಸಾವಯವ ಒಕ್ಕೂಟ ಮುಖ್ಯಸ್ಥವಿಶ್ವೇಶ್ವರ ಭಟ್ಟ ಪ್ರಾಸ್ತಾವಿಕ ಮಾತನಾಡಿ, ಸಾಂಪ್ರದಾಯಿಕ ಬೀಜ, ಗುಣಮಟ್ಟದ ಬೀಜ ಲಭ್ಯತೆಯ ಕೊರತೆ ಇಂದು
ಎದುರಾಗುತ್ತಿದೆ. ನಶಿಸಿ ಹೋಗುತ್ತಿರುವ ಬೀಜ ಗುರುತಿಸಿ ಜನರಿಗೆ ತಲುಪಿಸಲು ಹಾಗೂ ಗುಣಮಟ್ಟದ ಬೀಜಕ್ಕೆ ಉತ್ತಮವಾದ ಮಾರುಕಟ್ಟೆ ಕಲ್ಪಿಸಲು ಆರಂಭಿಕ ಹೆಜ್ಜೆಯಾಗಿ ಬೀಜ ಮೇಳವನ್ನು ಆಯೋಜಿಸಲಾಗಿದೆ ಎಂದರು.

RELATED ARTICLES  ಸ್ಕೊಡ್ ವೆಸ್‌ ಸಂಸ್ಥೆಯ ಬಗ್ಗೆ ಸುಳ್ಳು ಸುದ್ಧಿ ಪ್ರಕಟಿಸಿದ ಫೇಸ್‌ಬುಕ್‌ ಪೇಜ್‌ ಮೇಲೆ ಕಾನೂನು ಕ್ರಮ

ಸಾವಯವ ತರಕಾರಿಗೆ ಹೆಚ್ಚಿನ ಬೇಡಿಕೆಯಿದೆ.
ಆದರೆ ಗುಣಮಟ್ಟದ ಬೀಜಗಳ ಲಭ್ಯತೆ ಇಲ್ಲ. ಆದಕಾರಣ ಸಾಂಪ್ರದಾಯಿಕ ತಳಿಗಳ ಬೀಜಗಳನ್ನು ರಕ್ಷಿಸಲು ಈ ರೀತಿಯ ಪ್ರಯತ್ನನಡೆಸಲಾಗಿದೆ ಎಂದು ತಿಳಿಸಿದರು.

ಒಕ್ಕೂಟದ ನಿರ್ದೇಶಕ ಗುರುಪಾದ ಹೆಗಡೆ, ಕೃಷಿ ಇಲಾಖೆ ಉಪನಿರ್ದೇಶಕ ಎಚ್.ನಟರಾಜ, ವನಸ್ತ್ರೀ ಸಂಘಟನೆಯ ವಿನೋದಾ ಹೆಗಡೆ, ಕೃಷಿ ವಿಜ್ಞಾನ ಕೇಂದ್ರದ ಹೀನಾ ಎಂ.ಎಸ್.
ಇತರರಿದ್ದರು ಎನ್ನಲಾಗಿದೆ. ಈ ಮೇಳದಲ್ಲಿ ವಿವಿಧ ತಳಿಗಳ ತರಕಾರಿ ಬೀಜಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು ಎಂದು ವರದಿಯಾಗಿದೆ.