ಕಾರವಾರ: ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಜುಲೈ 27ರಿಂದ ಪ್ರಾರಂಭವಾಗಲಿದ್ದು, ಜುಲೈ 4 ರವರೆಗೆ ನಡೆಯಲಿದೆ ಎಂದು ತಿಳಿದುಬಂದಿದೆ. ಜಿಲ್ಲೆಯಲ್ಲಿ ಒಟ್ಟು 2339 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಎದುರಿಸಲಿದ್ದಾರೆ ಎನ್ನಲಾಗಿದೆ. ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯಲ್ಲಿ ಭಟ್ಕಳ, ಹೊನ್ನಾವರ, ಕುಮಟಾ, ಕಾರವಾರದಲ್ಲಿ ಪರೀಕ್ಷಾ ಕೇಂದ್ರಗಳಿದ್ದು, ಒಟ್ಟು 952 ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಲಿದ್ದಾರೆ.

ಅಂಕೋಲಾದಲ್ಲಿ ಕೇವಲ 42 ವಿದ್ಯಾರ್ಥಿಗಳಿದ್ದಾರೆ, ಕಾರಣಕ್ಕೆ ಇಲ್ಲಿ ಯಾವುದೇ ಪರೀಕ್ಷಾ ಕೇಂದ್ರಗಳಿಲ್ಲ. ಅಂಕೋಲಾ-ಕಾರವಾರ ಸೇರಿಕಾರವಾರದಲ್ಲಿ ಪರೀಕ್ಷಾ ಕೇಂದ್ರ ಮಾಡಲಾಗಿದೆ.

ಕಾರವಾರದ ಹಿಂದು ಹೈಸ್ಕೂಲ್‌ನಲ್ಲಿ ರೆಗ್ಯುಲರ್‌ ರಿಪಿಟರ್‌ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದರೆ, ಸೆಂಟ್ ಮೈಕಲ್
ಶಾಲೆಯಲ್ಲಿ ಖಾಸಗಿ ರಿಪಿಟರ್ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.

RELATED ARTICLES  ಶಿರಸಿಯ ಶ್ರೀಮತಿ ದಿವ್ಯಾ ಹೆಗಡೆಗೆ ಒಲಿದ ಡಾಕ್ಟರ್ ಆಫ್ ಫಿಲಾಸಪಿ (ಪಿಎಚ್‍ಡಿ) ಪದವಿ.

ಭಟ್ಕಳದಲ್ಲಿ ಐಯುಎಚ್‌ಎಸ್‌, ಕುಮಟಾದಲ್ಲಿ ಗಿಬ್ ಹೈಸ್ಕೂಲ್, ಹೊನ್ನಾವರದಲ್ಲಿ ನ್ಯೂ ಇಂಗ್ಲೀಷ್ ಹೈಸ್ಕೂಲ್‌ನಲ್ಲಿ ಪರೀಕ್ಷೆ ನಡೆಯಲಿದೆ ಎಂದು ಎನ್ನಲಾಗಿದೆ.

ಶಿರಸಿ ಶೈಕ್ಷಣಿಕ ಜಿಲ್ಲೆಯ ಹಳಿಯಾಳದ ಶ್ರೀ
ಶಿವಾಜಿ ಸರಕಾರಿ ಪದವಿ ಪೂರ್ವ ಕಾಲೇಜು,
ಜೋಯಿಡಾದ ಸರಕಾರಿ ಶ್ರೀರಾಮ ಪ್ರೌಢಶಾಲೆ, ಮುಂಡಗೋಡದ ಸರಕಾರಿ ಪದವಿಪೂರ್ವ ಕಾಲೇಜು, ಸಿದ್ದಾಪುರ ಶ್ರೀ ಸಿದ್ಧಿವಿನಾಯಕ ಬಾಲಕರ ಪ್ರೌಢಶಾಲೆ, ಶಿರಸಿಯ ಆವಮರಿಯಾ ಪ್ರೌಢಶಾಲೆ ಹಾಗೂ ಖಾಸಗಿ ವಿದ್ಯಾರ್ಥಿಗಳಿಗೆ ಸೆಂಟ್ ಅಂಥೋನಿ ಪ್ರೌಢಶಾಲೆಯಲ್ಲಿ ಮತ್ತು ಯಲ್ಲಾಪುರದ ಸರಕಾರಿ ಪ್ರೌಢಶಾಲೆಯಲ್ಲಿ ಪರೀಕ್ಷಾ ಕೇಂದ್ರಗಳಿದ್ದು ಒಟ್ಟು 1387 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಎದುರಿಸಲಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES  ಶ್ರೀ ನಂದಿಕೇಶ್ವರ ಗ್ರಾಮ ಅರಣ್ಯ ಸಮಿತಿ ಬಂಗಣೆಯಿಂದ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣಾ ಕಾರ್ಯಕ್ರಮ.

ಪರೀಕ್ಷೆ ಬೆಳಗ್ಗೆ 10:30 ಯಿಂದ ಮದ್ಯಾಹ್ನ
1:45ರವರೆಗೆ ನಡೆಯಲಿದ್ದು, ಸೋಮವಾರ
ರಾಜ್ಯದಾದ್ಯಂತ ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ ಪರೀಕ್ಷೆ ನಡೆಯಲಿದೆ.ಪೂರಕ ಪರೀಕ್ಷೆಗೆ ಶಿಕ್ಷಣ ಇಲಾಖೆಯಿಂದ ಕೊರೋನಾ ನಿಯಂತ್ರಣ ಮಾರ್ಗಸೂಚಿ ಕ್ರಮಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ.