ಕುಮಟಾ: ತಾಲ್ಲೂಕಿನ ವಾಲಗಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಲಗೊಡ ಗ್ರಾಮಸ್ಥರ ಮನವಿಗೆ ಒಂದೇ ವಾರದೊಳಗೆ ಸ್ಪಂದಿಸಿದ ಶಾಸಕ ದಿನಕರ ಶೆಟ್ಟಿ ಅವರು ಇಲ್ಲಿಯ ಜಟಕೇಶ್ವರ ದೇವರ ಗುಡಿಗೆ ಹೋಗುವ ಮಾರ್ಗಕ್ಕೆ ಕಾಮಗಾರಿ ಕಲ್ಪಿಸಿದರು.

ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಒಂದೂವರೆ ತಾಸಿಗೂ ಹೆಚ್ಚು ಸಮಯ ಸ್ಥಳದಲ್ಲೇ ನಿಂತು ಕಾಮಗಾರಿ ವೀಕ್ಷಿಸಿದ ಅವರ ಕಾಳಜಿ, ಕಾರ್ಯತತ್ಪರತೆ ಕಂಡು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು. ವಾರದ ಹಿಂದಷ್ಟೇ ಸ್ಥಳೀಯ ಭಕ್ತಾದಿಗಳು ಇಲ್ಲಿನ ಸಮಸ್ಯೆ ಹೇಳಿಕೊಂಡಾಗ ದೇವರ ಗುಡಿ ಬಳಿ ಬಂದು ವಸ್ತುಸ್ಥಿತಿ ನೋಡಿದ್ದ ಅವರು ಪಾದಚಾರಿ ಮಾರ್ಗವೂ ಸಮರ್ಪಕವಾಗಿ ಇಲ್ಲದಿರುವುದನ್ನು ಗಮನಿಸಿದ್ದರು. ಜೊತೆಗೆ ಶೀಘ್ರವೇ ಎಲ್ಲಾ ಭಕ್ತರಿಗೆ ಅನುಕೂಲವಾಗುವಂತೆ ಮಾರ್ಗ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ್ದರು.

RELATED ARTICLES  ಹೊನ್ನಾವರದಲ್ಲಿ ನಡೆಯಿತು ಜನ ಸುರಕ್ಷಾ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ದ ಹರಿಹಾಯ್ದ ಅನಂತ್ ಕುಮಾರ್ ಹೆಗಡೆ

ಈ ಬಗ್ಗೆ ಗ್ರಾಮಸ್ಥ ಗಣಪತಿ ಪಟಗಾರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಶಾಸಕ ದಿನಕರ ಶೆಟ್ಟಿ ಅವರು ನಮ್ಮ ಭಾಗಕ್ಕೆ ಸಾಕಷ್ಟು ಕಾಮಗಾರಿಗಳನ್ನು ಮಾಡಿಕೊಟ್ಟಿದ್ದಾರೆ. ಜನರು ಏನೇ ಸಮಸ್ಯೆ ಹೇಳಿಕೊಂಡರೂ ತಕ್ಷಣ ಸ್ಪಂದಿಸುವ ಅವರ ಜನಪರ ಕಾಳಜಿ, ಕ್ರಿಯಾಶೀಲ ಗುಣ, ಪ್ರಾಮಾಣಿಕತೆ, ಭರವಸೆ ನೀಡಿ ತಕ್ಷಣವೇ ಬಗೆಹರಿಸುವ ಚುರುಕು ನಡೆ ಅಭಿನಂದನಾರ್ಹ. ಹಾಗಾಗಿಯೇ ಇವರು ಎತ್ತರ ಸ್ಥಾನದಲ್ಲಿದ್ದಾರೆ. ಜನರ ಮನಸ್ಸಿಗೆ ಹತ್ತಿರವೂ ಆಗಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

RELATED ARTICLES  ಬಸ್ ಡಿಕ್ಕಿ: ಪಾದಚಾರಿ ದೇಹ ಛಿದ್ರ ಛಿದ್ರ.

ಈ ಸಂದರ್ಭದಲ್ಲಿ ಪಂಚಾಯ್ತಿ ಸದಸ್ಯರಾದ ಗಣಪತಿ ಭಟ್ಟ, ಮಂಜುನಾಥ ನಾಯ್ಕ, ಗ್ರಾಮಸ್ಥರಾದ ನಾರಾಯಣ ಪಟಗಾರ, ಈಶ್ವರ ಗೌಡ, ನಾರಾಯಣ ಗೌಡ, ನಾಗಪ್ಪ ಗೌಡ, ಮಹಾದೇವ ಗೌಡ, ಮಾರು ಗೌಡ ಮುಂತಾದವರು ಇದ್ದರು.