ಕುಮಟಾ: ತಾಲೂಕಿನ ಬಾಡದಲ್ಲಿ ಸಮುದ್ರ ಪಾಲಾದ ಬೆಂಗಳೂರಿನ ಇನ್ನಿಬ್ಬರು ಪ್ರವಾಸಿಗರ ಶವ ಮೂರನೇ ದಿನ ಪತ್ತೆಯಾಗಿದೆ. ಬೆಂಗಳೂರಿನ ಖಾಸಗಿ ಕಂಪನಿಯ 89 ಸಿಬ್ಬಂದಿಯ ಜೊತೆಗೆ ಕೆಲ ವಿದ್ಯಾರ್ಥಿಗಳು ಕೂಡ ಪ್ರವಾಸಕ್ಕೆಂದು ಕುಮಟಾ ತಾಲೂಕಿನ ಬಾಡದ ಕಡಲತೀರಕ್ಕೆ ಆಗಮಿಸಿದ್ದರು.ಸಮುದ್ರಕ್ಕಿಳಿದ ಕೆಲ ಪ್ರವಾಸಿಗರ ಪೈಕಿ ನಾಲ್ವರು ಪ್ರವಾಸಿಗರು ಸಮುದ್ರ ಪಾಲಾಗಿದ್ದರು. ಅದರಲ್ಲಿ ಬೆಂಗಳೂರು ಬೈಪಾಸ್ ರಸ್ತೆಯ ಕಸ್ತೂರಿನಗರ ನಿವಾಸಿ ಸಿಎ ಫಾರ್ಮ್ ನೌಕರ ಅರ್ಜುನ್ ವಾಸುದೇವ ಮತ್ತು ಬೆಂಗಳೂರಿನ ಪೀಣ್ಯ 2ನೇ ಕ್ರಾಸ್‌ನ ಸಿಎ ವಿದ್ಯಾರ್ಥಿನಿ ಚೈತ್ರಶ್ರೀ ಗೋಪಾಲ್ ಶವ ಪತ್ತೆಯಾಗಿತ್ತು.

RELATED ARTICLES  ಹೊನ್ನಾವರದಲ್ಲಿ ವಿಕಲ ಚೇತನ ಮಕ್ಕಳ ಜಿಲ್ಲಾ ಮಟ್ಟದ ಕ್ರೀಡಾಕೂಟ.

ಇನ್ನೀರ್ವರ ಶವ ಪತ್ತೆ ಹಚ್ಚಲು ಸಮುದ್ರದಲ್ಲಿ ಶೋಧ ಕಾರ್ಯ ಮುಂದುವರೆದಿತ್ತು. ಮೂರು ದಿನದ ನಂತರ ಸಮುದ್ರದ ಅರ್ಧ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ರಾಜಾಜಿನಗರ ಹಾಲಿ ಜೆಪಿ ನಗರದ ಸಿಎ ವಿದ್ಯಾರ್ಥಿ ತೇಜಸ್ ದಾಮೋದರ ಮತ್ತು ಬೆಂಗಳೂರಿನ ಕನಕಪುರ ರಸ್ತೆಯ ಸಿಎ ಫಾರ್ಮ್ ನೌಕರ ಕಿರಣಕುಮಾರ್ ಮರಿರಾಜ ಜಿ ಶವ ಪತ್ತೆಯಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಶವವನ್ನು ತಾಲೂಕು ಆಸ್ಪತ್ರೆಗೆ ಸಾಗಿಸಿ, ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ

RELATED ARTICLES  "ಗೋಕರ್ಣ ಗೌರವ" ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀ ವೀರೇಶ್ವರ ಶಿವಯೋಗಿ ಸ್ವಾಮಿಗಳು.