ನವದೆಹಲಿ: ಭಾರತದ ಶಕ್ತಿ ಪ್ರದರ್ಶಿಸಲು ‘ಮನ್ ಕಿ ಬಾತ್’ ಕಾರ್ಯಕ್ರಮದ ಪರಿಣಾಮಕಾರಿ ಮಾರ್ಗವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ.
36ನೇ ಮನ್ ಕಿ ಬಾತ್ ರೇಡಿಯೋ ಭಾಷಣದಲ್ಲಿ ದೇಶದ ಜನತೆಯನ್ನುದ್ದೇಶಿ ಮಾತನಾಡಿರುವ ಅವರು, ಭಾರತದ ಶಕ್ತಿ ಪ್ರದರ್ಶಿಸಲು ‘ಮನ್ ಕಿ ಬಾತ್’ ಪರಿಣಾಮಕಾರಿ ಮಾರ್ಗವಾಗಿದೆ. ನವಭಾರತ ನಿರ್ಮಾಣ ಮಾಡುವ ಪೈಕಿ ಸರ್ಕಾರ ಹಮ್ಮಿಕೊಂಡಿರುವ ಕಾರ್ಯಕ್ರಮಗಳಲ್ಲಿ ‘ಮನ್ ಕಿ ಬಾತ್’ ಕೂಡ ಒಂದಾಗಿದೆ. ರಾಜಕೀಯದಿಂದ ‘ಮನ್ ಕಿ ಬಾತ್’ ಕಾರ್ಯಕ್ರಮವನ್ನು ದೂರವಿಡಲು ಯತ್ನ ನಡೆಸಿದ್ದೇನೆಂದು ಹೇಳಿದ್ದಾರೆ.
ಜನರ ಕುಶಲೋಪರಿ ನಡೆಸಬೇಕೆಂಬ ಉದ್ದೇಶದಿಂದ ಆರಂಭಿಸಲಾದ ಮನ್ ಕಿ ಬಾತ್ ಈಗ 3 ವರ್ಷಗಳನ್ನು ಪೂರೈಸಿದೆ. ಮನ್ ಕಿ ಬಾತ್ ಇಂದು ಅತ್ಯುತ್ತಮ ಮಾಧ್ಯಮವಾಗಿ ಹೊರಹೊಮ್ಮಿದೆ. ಅಭಿವೃದ್ಧಿ, ಸದೃಢ ಹಾಗೂ ನವ ಭಾರತ ನಿರ್ಮಾಣ ಮಾಡಲು ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರಲ್ಲಿ ಮನ್ ಕಿ ಬಾತ್ ಕಾರ್ಯಕ್ರಮ ಕೂಡ ಒಂದಾಗಿದೆ.
ಕೋಟ್ಯಾಂತರ ಜನರು ತಮ್ಮ ಅಭಿಪ್ರಾಯಗಳನ್ನು ಈ ಮೂರು ವರ್ಷಗಳಲ್ಲಿ ನನ್ನೊಂದಿಗೆ ಹಂಚಿಕೊಂಡಿದ್ದಾರೆ. ಮನ್ ಕಿ ಬಾತ್ ಯಶಶ್ವಿಯಾಗಿದೆಯೋ, ಇಲ್ಲವೋ ಎಂಬುದು ಇದೇ ನಿರ್ಧರಿಸಲಿದೆ. ಜನರ ಅನಿಸಿಕೆ, ಅಭಿಪ್ರಾಯ, ಸಲಹೆಗಳು ಹಲವಾರು ರೀತಿಯಲ್ಲಿ ಹರಿದುಬರುತ್ತಿವೆ. ಅವುಗಳನ್ನು ಹಲವು ಬಾರಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದೇನೆ. ಇಡೀ ದೇಶದ ನಾಗರೀಕರ ಜತೆ ಬೆರೆಯಲು ಇದೊಂದು ಅದ್ಭುತ ಅವಕಾಶವಾಗಿದ್ದು, ನಾಗರೀಕರಿಗೂ ಇದೊಂದು ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಖಾದಿ ಕೇವಲ ಬಟ್ಟೆಲಯಲ್ಲ. ಅದೊಂದು ಆಂದೋಲನವಾಗಿದೆ. ಖಾದಿ ಅಭಿಯಾನದಂತೆ ಸಾಗಬೇಕಿದೆ. ಜನರದಲ್ಲಿ ಖಾದಿ ಕುರಿತು ಆಸಕ್ತಿ ಹೆಚ್ಚಿದ್ದು, ಖಾದಿ ಬಟ್ಟೆಗಳ ಮಾರಾಟ ಹೆಚ್ಚಿರುವುದರಿಂದ ಬಡ ಜನತೆಗೆ ಉದ್ಯೋಗ ದೊರಕಿದಂತಾಗಿದೆ. ಖಾದಿ ಉದ್ಯಮದಲ್ಲಿ ತೊಡಗಿರುವವರ ಮನೆಮನೆಗಳಲ್ಲಿ ಈ ದೀಪಾವಳಿ ಬೆಳಕು ನೀಡುವಂತಾಗಬೇಕು ಎಂದಿದ್ದಾರೆ.