ಗೋಕರ್ಣ: ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಗೋಕರ್ಣದ ಕೊಟ್ಟಿ ತೀರ್ಥ ತುಂಬಿತುಳುಕುತ್ತಿದೆ. ಅದಲ್ಲದೆ ಕೋಟಿ ತೀರ್ಥವು ಈಗ ನವೀಕರಣಗೊಂಡದ್ದು, ಸ್ವಚ್ಛ ನೀರಿನಿಂದ ಕಂಗೊಳಿಸುತ್ತಿದ್ದು, ಹೆಚ್ಚೆಚ್ಚು ಜನರನ್ನು ಆಕರ್ಷಿಸುತ್ತಿದೆ. ಆದರೆ ಇದರ ಬೆನ್ನಲ್ಲೆ ದುರಂತವೊಂದು ನಡೆದಿದ್ದು, ಗೋಕರ್ಣದ ಮೇಲಿನಕೇರಿ ನಿವಾಸಿ ಸಂತೋಷ ರೆಬೆಲೋ ಕೋಟಿ ತೀರ್ಥದಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ಗುರುತಿಸಲಾಗಿದೆ.

RELATED ARTICLES  ಸರ್ಕಾರಿ ಭೂ ಒತ್ತುವರಿ ನಿಲ್ಲಲಿ ; ಶಾಸಕ ಮಂಕಾಳ ವೈದ್ಯ

ಕೋಟಿ ತೀರ್ಥಕ್ಕೆ ತೆರಳಿದ ಸಂದರ್ಭದಲ್ಲಿ ಕಾಲುಜಾರಿಬಿದ್ದು ಅವಘಡ ಸಂಭವಿಸಿದೆ ಎನ್ನಲಾಗಿದೆ. ಈ ಕುರಿತಾಗಿ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.

RELATED ARTICLES  ವಾಲ್ಗಳ್ಳಿ, ಕೂಜಳ್ಳಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪ್ರಚಾರ ಭರಾಟೆ: ನಡೆಯಿತು ಕಾರ್ಯಕರ್ತರ ಸಭೆ.