ದಾಂಡೇಲಿ: ಹಣತೆ ಸಾಹಿತ್ಯಕ ಸಾಂಸ್ಕೃತಿಕ ಜಗಲಿ ಉತ್ತರ ಕನ್ನಡ ಇದರ ದಾಂಡೇಲಿ ತಾಲೂಕು ಘಟಕದ ಕಾರ್ಯಕಾರಿ ಸಮಿತಿ ರಚನೆಯಾಗಿದ್ದು ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಅವರ ಅನುಮೋದನೆಯೊಂದಿಗೆ ಸಮಿತಿಯ ಯಾದಿಯನ್ನು ತಾಲೂಕಾಧ್ಯಕ್ಷ ರಾಘವೇಂದ್ರ ವಿ. ಗಡೆಪ್ಪನವರ್ ಅವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಹಣತೆ ದಾಂಡೇಲಿ ಘಟಕದ ಅಧ್ಯಕ್ಷರಾಗಿ ನ್ಯಾಯವಾದಿ ರಾಘವೇಂದ್ರ ವಿ. ಗಡೆಪ್ಪನವರ್, ಗೌರವ ಕಾರ್ಯದರ್ಶಿಗಳಾಗಿ ಶಿಕ್ಷಣ ಸಂಯೋಜಕ ಅಬ್ದುಲ್ಲ ರೆಹಮಾನ್, ಕನ್ನಡಪರ ಹೋರಾಟಗಾರ ಮಂಜುನಾಥ ಪಂತೋಜಿ, ಗೌರವ ಕೋಶಾಧ್ಯಕ್ಷರಾಗಿ ನ್ಯಾಯವಾದಿ ಜಯಾ ಡಿ. ನಾಯ್ಕ ನೇಮಕ ಗೊಂಡಿದ್ದಾರೆ.

RELATED ARTICLES  ಆತ್ಮಹತ್ಯೆಗೆ ಶರಣಾದ ಯುವತಿ

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಾ. ಶ್ರೀಶೈಲ ಮಾದಣ್ಣನವರ್, ನಿವೃತ್ತ ಪ್ರಾಂಶುಪಾಲ ಡಾ.ಪಿ.ವಿ.ಶಾಮಭಾಗ್, ಸಾಮಾಜಿಕ ಹೋರಾಟಗಾರ ಅಕ್ರಂ ಖಾನ್, ಯಕ್ಷಗಾನ ಕಲಾವಿದ ವಿಷ್ಣುಮೂರ್ತಿ ರಾವ್, ನ್ಯಾಯವಾದಿ ರೂಪ ಕೇರವಾಡರ, ಕವಿ ಸೋಮಶೇಖರ್ ಅಂದಕಾರ, ದಾಂಡೇಲಿ ಐಟಿಐ ಕಾಲೇಜು ಪ್ರಾಂಶುಪಾಲ ನಾಗೇಶ ನಾಯ್ಕ ಅವರನ್ನು ನೇಮಕ ಮಾಡಲಾಗಿದೆ,

RELATED ARTICLES  ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಸ್ವಾತಿ ಉತ್ಸವ‌ ಸಂಪನ್ನ.

ರಾಘವೇಂದ್ರ ಗಡೆಪ್ಪನವರ್ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಕಾರ್ಯಕಾರಿ ಸಮಿತಿ ರಚನಾ ಸಮಿತಿ ಸಭೆಯಲ್ಲಿ ಹಣತೆ ಜಿಲ್ಲಾ ಪ್ರಧಾನ ಸಂಚಾಲಕ ಎನ್.ಜಯಚಂದ್ರನ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಉಪೇಂದ್ರ ಘೋರ್ಪಡೆ ಉಪಸ್ಥಿತರಿದ್ದರು.