ಕುಮಟಾ: ಜೂನ್ 21 ನೇ ತಾರೀಖಿನಂದು ತಾಲೂಕಿನ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವ ವೇಳೆ ಅವರ ಬ್ಯಾಗಿನ ಜಿಪ್ ತೆರೆದು ಅದರಲ್ಲಿದ್ದ ಸುಮಾರು 124 ಗ್ರಾಂ ತೂಕದ ಬಂಗಾರದ ಆಭರಣಗಳು ಮತ್ತು 50 ಸಾವಿರ ರೂಪಾಯಿ ನಗದನ್ನು ಎಗರಿಸಿದ್ದ ಮೂವರು ಮಹಿಳಾ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿದ ಕಳ್ಳತನವಾದ ಎಲ್ಲಾ ಬಂಗಾರದ ಆಭರಣಗಳನ್ನು ಮತ್ತು 6030 ರೂ. ನಗದನ್ನು ಜಪ್ತು ಮಾಡಿದ್ದಾರೆ.
ಬೆಂಗಳೂರಿನ ಅತ್ತಿಬೆಲೆ ನಿವಾಸಿಗಳಾದ ಆದಿಯಮ್ಮ ತಿರುಪತಿ, ವೆಂಕ್ಟಮ್ಮ ತಿರುಪತಿ ಹಾಗೂ ಲಲಿತಾ ನಾಗರಾಜ ಇವರುಗಳನ್ನು ಕುಮಟಾ ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ಎಲ್ಲಾ ಅಧಿಕಾರಿ, ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಶ್ರೀ ತಿಮ್ಮಪ್ಪ ನಾಯ್ಕ, ಪೊಲೀಸ್ ನಿರೀಕ್ಷಕರು ಕುಮಟಾ ಪೊಲೀಸ ಠಾಣೆ ಇವರೊಂದಿಗೆ ಕುಮಟಾ ಪೊಲೀಸ ಠಾಣೆಯ ಅಧಿಕಾರಿಗಳಾದ ಶ್ರೀಮತಿ ಪದ್ಮಾ ದೇವಳ ಪಿ.ಎಸ್.ಐ, ನವೀನ ಎಸ್. ನಾಯ್ಕ ಪಿ.ಎಸ್.ಐ ಹಾಗೂ ಸಿಬ್ಬಂದಿಗಳಾದ ದಯಾನಂದ ನಾಯ್ಕ ಗಣೇಶ ನಾಯ್ಕ ರಾಜು ನಾಯ್ಕ, ಸಂತೋಷ ಬಾಳೇರ, ಬಸವರಾಜ ಜಾಡರ್, ಕೃಷ್ಣ ಎನ್.ಜಿ, ದುರ್ಗಪ್ಪ ಕಲಘಟಗಿ ಎ.ಎಸ್.ಐ, ಗುರು ನಾಯಕ, ಶಿವಾನಂದ ಜಾಡರ್, ಅಶ್ವಿನಿ ಹರಿಕಂತ್ರ, ಅರ್ಚನಾ ಪಟಗಾರ, ಮಾದೇವಿ ಗೌಡ, ರೂಪಾ ನಾಯಕ, ವಿದ್ಯಾ ನಾಯ್ಕ, ಸಾಧನಾ ನಾಯಕ, ರಾಧಾ ಗೌಡ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ಸಿ.ಡಿ.ಆರ್ ಟೆಕ್ನಿಕಲ್ ವಿಭಾಗದ ಸಿಬ್ಬಂದಿಗಳು ಇವರುಗಳು ಸಹಕರಿಸಿರುತ್ತಾರೆ.