ಶಿರಸಿ: ತಾಲೂಕಿನ ಭೈರುಂಬೆ ಸಮೀಪ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಲಾರಿಯನ್ನು ತಡೆದು 5250 ಲೀಟರ್ ಮದ್ಯಸಾರ ವಶಪಡಿಸಿಕೊಂಡ ಘಟನೆ ನಡೆದಿದೆ. ಶಿರಸಿ ಅಬಕಾರಿ ಇಲಾಖೆಯವರು ಈ ಲಾರಿಯನ್ನು ವಶಪಡಿಸಿಕೊಂಡ ಬಗ್ಗೆ ವರದಿ ಲಭ್ಯವಾಗಿದೆ.

ಕೇರಳ ರಾಜ್ಯದ ಪರಾಂಬಿಲ್ ನಿವಾಸಿ ಮಹಮದ್ ನಿಟ್ಟೂಕರನ್ ಬಂಧಿತ ಆರೋಪಿ. ಈತ ಅಧಿಕೃತ ರಹದಾರಿ ಪತ್ರದೊಂದಿಗೆ ಗೋವಾದಿಂದ ಕೇರಳಕ್ಕೆ 525 ಬಾಕ್ಸ್ ಗೋವಾ ಮದ್ಯಸಾಗಿಸುತ್ತಿದ್ದು, ಇದರ ನಡುವೆ ಅನಧಿಕೃತವಾಗಿ 35 ಲೀಟರ್ ಗಾತ್ರದ 150 ಕ್ಯಾನ್ ಗಳಲ್ಲಿದ್ದ 3.04 ಲಕ್ಷ ರೂ.ಮೌಲ್ಯದ 5250 ಲೀಟರ್ ಮದ್ಯಸಾರವನ್ನು ಸಾಗಿಸುತ್ತಿದ್ದ ಬಗ್ಗೆ ಅಧಿಕೃತ ಮಾಹಿತಿ ಆಧರಿಸಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

RELATED ARTICLES  ಕ್ರೀಡಾ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಸಮಾಜದ ಸಾಮರಸ್ಯತೆಯ ಕೊಂಡಿ-ನಾಗರಾಜ ನಾಯಕ ತೊರ್ಕೆ

ಅಬಕಾರಿ ಡಿ.ಎಸ್.ಪಿ.ಎಚ್,ಎಸ್, ಶಿವಪ್ಪ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕ ಮಹೇಂದ್ರ ನಾಯ್ಕ ಹಾಗೂ ಸಿಬ್ಬಂದಿ ದಾಳಿ ಮಾಡಿ ಗೋವಾ ಮದ್ಯ, ಮದ್ಯಸಾರ
ಹಾಗೂ ಈ ಕೃತ್ಯಕ್ಕೆ ಬಳಸಿದ ಲಾರಿಯನ್ನು ವಶ ಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

RELATED ARTICLES  ಸ್ವರ್ಣವಲ್ಲಿ ಶ್ರೀಗಳಿಂದ ಅಭಯಾಕ್ಷರಕ್ಕೆ ಸಹಿ.