ಶಿರಸಿ : ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಕರ್ನಾಟಕ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ, ತೋಟಗಾರಿಕಾ ಮಹಾವಿದ್ಯಾಲಯ, ಸಿಎಲ್‌ಪಿಎಸ್ ರೈತ ಉತ್ಪಾದಕ ಕಂಪನಿ ಯಡಳ್ಳಿ ಸಹಯೋಗದಲ್ಲಿ ನಗರದ ಟಿಆಕ್ಸಿಬ್ಯಾಂಕ್ ಸಭಾಭವನದಲ್ಲಿ ನಡೆದ ಸಾಂಬಾರು ಬೆಳೆಗಳ ಬೇಸಾಯ ತಂತ್ರಜ್ಞಾನ, ಸಂಸ್ಕರಣೆ ಹಾಗೂ ಮಾರುಕಟ್ಟೆ ಕುರಿತು ವಿಚಾರ ಸಂಕಿರಣ ಉದ್ಘಾಟಿಸಿದರು ಎಂದು ತಿಳಿದು ಬಂದಿದೆ.
ಜಿಲ್ಲೆಯಲ್ಲಿ ಸಾಂಬಾರ ಬೆಳೆ ಸಮೃದ್ಧಿಗೆ ಪಾರಂಪರಿಕ ಪದ್ಧತಿಯ ಜತೆಗೆ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು ಎನ್ನಲಾಗಿದೆ.
ಕಾಳುಮೆಣಸು ಸಂಸ್ಕರಣೆಗೆ ಯಂತ್ರಗಳು
ಬಂದಿವೆ.ಅದೇ ರೀತಿ ಸಾಂಬಾರ ಬೆಳೆಗಳ ಸಂಸ್ಕರಣೆಗೂ ಇಂತಹ ವಿಧಾನ ಅನುಸರಿಸಿಕೊಂಡು ಬೆಳೆ ಬೆಳೆಯುವುದಕ್ಕೆ
ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.
ರೈತರೇ ಬೆಳೆ ಸಂಸ್ಕರಿಸಿ: ರೈತರು ತಾವು ಬೆಳೆದ ಬೆಳೆಯನ್ನು ತಾವೇ ಪರಿಪೂರ್ಣ ತಂತ್ರಜ್ಞಾನದ ಮೂಲಕ ಸಂಸ್ಕರಿಸಿ ಮಾರಾಟ ಮಾಡುವಂತಾಗಬೇಕು ಎಂದು ಕಾಗೇರಿ ತಿಳಿಸಿದರು ಎನ್ನಲಾಗಿದೆ.
ಹಿರಿಯ ಸಹಾಯ ತೋಟಗಾರಿಕಾ ನಿರ್ದೇಶಕ ಸತೀಶ ಹೆಗಡೆ ಮಾತನಾಡಿ, 13ನೇ ಶತಮಾನದಲ್ಲೇ ಜಿಲ್ಲೆಯ ಸಾಂಬಾರ
ಬೆಳೆ ರಪ್ತಾಗುತ್ತಿರುವ ಬಗ್ಗೆ ದಾಖಲೆಯಿದೆ. ಆದರೆ ಇತ್ತೀಚ್ಚಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಸಾಂಬಾರ ಬೆಳೆ ಕೀಟ, ರೋಗಗಳಿಂದ ಕ್ಷೀಣಿಸುತ್ತಿದೆ. ಕೇವಲ 90-95ಹೆಕ್ಟೇರ್ ಪ್ರದೇಶದಲ್ಲಿ ವೆನಿಲ್ಲಾ, 5200ಹೆಕ್ಟೇರ್ ಪ್ರದೇಶದಲ್ಲಿ ಕಾಳುಮೆಣಸು ಬೆಳೆಯುತ್ತಿವೆ ಎಂದರು.ಯಾಲಕ್ಕಿಬೆಳೆ ಕಳೆದುಕೊಳ್ಳುವ ಹಂತಕ್ಕೆ ಬಂದಿದ್ದೇವೆ.ಇವುಗಳ ಪುನಶ್ವೇತನ ಮಾಡಬೇಕಿದೆ ಎಂದರು ಎಂದು ತಿಳಿದುಬಂದಿದೆ.
ತೋಟಗಾರಿಕಾ ಉಪನಿರ್ದೇಶಕ ಡಾ.ಬಿ.ಪಿ.ಸತೀಶ್, ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಜಿ.ಆರ್.ಹೆಗಡೆ ಬೆಳ್ಳೇಕೇರಿ, ಪ್ರಗತಿಪರ ಕೃಷಿಕ ಆರ್. ಎಂ.ಹೆಗಡೆ,ಸಾಲಣಿ ಶಂಭುಶಂಕರ ಶೆಟಿ.ಶಿವಾನಂದ ಹೊಂಗಲ್, ತಜ್ಞ ವಿ.ಎಂ.ಹೆಗಡೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ತೋಟಗಾರಿಕಾ ಮಾಹಿತಿಯ ಕಿರು ಹೊತ್ತಿಗೆ, ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು ಎಂದು ವರದಿಯಾಗಿದೆ.