ಹೊನ್ನಾವರ : ಕರ್ಕಿ ಗ್ರಾಮದಲ್ಲಿ ಐಆರ್‌ಬಿ ಅವೈಜ್ಞಾನಿಕ ಕಾಮಗಾರಿ ವಿರೋಧಿಸಿ ಸಾರ್ವಜನಿಕರ ಜೊತೆ ಗ್ರಾಮ ಪಂಚಾಯತಿ ಸದಸ್ಯರು ಒಗ್ಗಟ್ಟಾಗಿ ಹೆದ್ದಾರಿ ತಡೆದು
ಪ್ರತಿಭಟನೆ ನಡೆಸಿದ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಕರ್ಕಿನಾಕ ಬಳಿ ಹೆದ್ದಾರಿ ಅಗಲೀಕರಣದ ವೇಳೆ ಈ ಹಿಂದೆ ಇದ್ದ ಚರಂಡಿಮುಚ್ಚಲಾಗಿತ್ತು. ರಸ್ತೆ ಕಾಮಗಾರಿ ಆ ಭಾಗದಲ್ಲಿ ಭಾಗಶಃ ಪೂರ್ಣಗೊಂಡಿದ್ದರೂ ಮಳೆ ನೀರು

ಸರಾಗವಾಗಿ ಹೋಗಲು ಸೂಕ್ತ ರೀತಿಯ ವ್ಯವಸ್ಥೆ ಕಲ್ಪಿಸಿರಲಿಲ್ಲ. ಕಳೆದ ಬಾರಿ ಮಳೆಗಾಲದಲ್ಲಿ ಸಮಸ್ಯೆ ಉಂಟಾದರೂ ಮಳೆ ಮುಕ್ತಾಯದ ಬಳಿಕ ಸಮಸ್ಯೆ ಬಗೆಹರಿಸುದಾಗಿ ಅಧಿಕಾರಿಗಳು ಆಶ್ವಾಸನೆ ನೀಡಿದ್ದರು ಎನ್ನಲಾಗಿದೆ.

RELATED ARTICLES  ಜ್ವರವೆಂದು ಆಸ್ಪತ್ರೆಗೆ ತೆರಳಿದ ನವ ವಿವಾಹಿತೆ ಸಾವು : ಕುಟುಂಬದವರ ಆಕೃಂದನ.

ಇದರ ಬಗ್ಗೆ ಈ ಹಿಂದೆ ಸಾರ್ವಜನಿಕರು ಗ್ರಾ.ಪಂ.ಹಾಗೂ ಸಂಬಂದಿಸಿದ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಆದರೂ ಐ.ಆರ್.ಬಿ ಕಂಪನಿಯ ಅಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಳ್ಳದೇ ಸಮಸ್ಯೆ ಪರಿಹರಿಸುವ ಗೋಜಿಗೆ ಹೋಗಿಲ್ಲ. ಮಂಗಳವಾರ ತಡುರಾತ್ರಿಯಿಂದ ಸುರಿದ ಮಳೆಯಿಂದಾಗಿ
ಗ್ರಾಮದ ಉಳವಿ ನಾರಾಯಣ ಗೌಡ ಇವರ ಮನೆಗೆ ನೀರು ನುಗ್ಗಿತ್ತು. ಅಲ್ಲದೆ ಈ ಭಾಗದ ಅಂಗಡಿ, ಮನೆ, ಹಾಗೂ ದೇವಾಲಯಕ್ಕೆ ನೀರು ನುಗ್ಗುವ ಆತಂಕ ಎದುರಾಗಿತ್ತು ಎನ್ನಲಾಗಿದೆ.

ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಪಂಚಾಯತಿ
ಪ್ರತಿನಿಧಿಗಳ ಗಮನಕ್ಕೆ ತಂದಾಗ ಎಲ್ಲರೂ ಒಗ್ಗಟ್ಟಾಗಿ ಸೇರಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ವಿಷಯ ಗಮನಕ್ಕೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಅಧಿಕಾರಿಗಳು ಕೂಡಲೇ
ಸ್ಥಳಕ್ಕಾಗಮಿಸಿ, ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿದರು ಎಂದು ತಿಳಿದುಬಂದಿದೆ. ಪ್ರತಿಭಟನಾಗಾರರು ಸಮಸ್ಯೆ ಬಗೆಹರಿಸುವಂತೆ ಪಟ್ಟು ಹಿಡಿದಾಗ ಐಆರ್‌ಬಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸೂಚಿಸಿ ಜೆ.ಸಿ.ಬಿ. ಯಂತ್ರದಿಂದ ಕಾಮಗಾರಿ ನಡೆಸುವ ಭರವಸೆಯ ಬಳಿಕ ಪ್ರತಿಭಟನೆಯನ್ನು
ವಾಪಸ್ಸು ಪಡೆದರು ಎನ್ನಲಾಗಿದೆ.

RELATED ARTICLES  ಹೋರಾಟದ ಮೂಲಕ ಹೆಸರಾದ ನಾರಾಯಣ ಶಿರೂರು ನಿಧನ.

ಗ್ರಾ.ಪಂ.ಅಧ್ಯಕ್ಷೆ ಕಲ್ಪನಾ ಪ್ಲೋರಾ, ಉಪಾಧ್ಯಕ್ಷೆ ಪೂರ್ಣಿಮಾ ಹೆಗಡೆ, ಸದಸ್ಯರಾದ ಶ್ರೀಕಾಂತ ಮೊಗೇರ, ಹರಿಶ್ಚಂದ್ರ ನಾಯ್ಕ, ವಿನೋದ ನಾಯ್ಕ, ನಾಗರಾಜ ನಾಯ್ಕ ಸೇರಿದಂತೆ ಸಾರ್ವಜನಿಕರು ಈ ವೇಳೆ ಹಾಜರಿದ್ದರು ಎಂದು ವರದಿಯಾಗಿದೆ.