ಮುಂಡಗೋಡ : ‘ಹಣತೆ’ ಸಾಹಿತ್ಯಕ, ಸಾಂಸ್ಕೃತಿಕ ಜಗಲಿ‌ ಉತ್ತರ ಕನ್ನಡ ಇದರ ಮುಂಡಗೋಡ ತಾಲೂಕು ಘಟಕದ ಕಾರ್ಯಕಾರಿ ಸಮಿತಿ ರಚನೆಯಾಗಿದ್ದು, ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಅವರ ಅನುಮೋದನೆಯೊಂದಿಗೆ ಸಮಿತಿಯ ಯಾದಿಯನ್ನು ತಾಲೂಕಾಧ್ಯಕ್ಷ ವಿನಯ ನಾಗೇಶ ಪಾಲನಕರ ಅವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

‘ಹಣತೆ’ ಮುಂಡಗೋಡ ಘಟಕದ ಅಧ್ಯಕ್ಷರಾಗಿ ವಿನಯ ನಾಗೇಶ ಪಾಲನಕರ, ಗೌರವ ಕಾರ್ಯದರ್ಶಿಗಳಾಗಿ ಸಂತೋಷ ಕುಸನೂರ, ಉಮಾ ಅಭಿನವ, ಗೌರವ ಕೋಶಾಧ್ಯಕ್ಷರಾಗಿ ರಾಧಾಕೃಷ್ಣ ಎನ್ ರೇವಣಕರ ನೇಮಕ ಗೊಂಡಿದ್ದಾರೆ.

RELATED ARTICLES  ಪ ಪೂ ಶ್ರೀ ಶ್ರೀ ಕವಿಸ್ವಾಮಿಗಳಿಗೆ ಗೋಕರ್ಣ ಗೌರವ

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆದರ್ಶ ಕುಲಿಗೋಡ, ದರ್ಶನ ಹಂಚಿನಮನಿ, ರಾಘವೇಂದ್ರ ಬೊಯಿಟೆ, ನಾರಾಯಣ ಬಡಿಗೇರ, ಸಚಿನಕುಮಾರ್ ಮಾದರ, ಮಾರುತಿ ಬೆಂಡ್ಲಗಟ್ಟಿ, ಪ್ರತಿಭಾ ಹೆಗಡೆ ಅವರನ್ನು ನೇಮಕ ಮಾಡಲಾಗಿದೆ.

RELATED ARTICLES  ಮಗಳ ಮನೆಗೆ ಬಂದಾತ ಅಪಘಾತದಲ್ಲಿ ಸಾವು.

ಗೌರವ ಸಲಹೆಗಾರರಾಗಿ ದಯಾನಂದ ನಾಯ್ಕ, ಬಾಕಚಂದ್ರ ಹೆಗಡೆ, ಸುಭಾಷ್ ಡೋರಿ, ಎಸ್.ಜಿ.ಹೂಗಾರ್, ನಾಗರಾಜ ನರೇರ, ಈರೇಶ, ರಮಾಬಾಯಿ ಕುದಳೆ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಮುಂಡಗೋಡದ ಅನ್ನಪೂರ್ಣೇಶ್ವರಿ ನಗರದ ಹಣತೆ ಕಾರ್ಯಾಲಯದಲ್ಲಿ ನಡೆದ ತಾಲೂಕು ಕಾರ್ಯಕಾರಿ ಸಮಿತಿ ರಚನಾ ಸಭೆಯ ಅಧ್ಯಕ್ಷತೆಯನ್ನು ವಿನಯ ಪಾಲನಕರ ವಹಿಸಿದ್ದರು.