ಯಲ್ಲಾಪುರ: ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕ ಬಾಳಗಿಮನೆಯಲ್ಲಿ ವಿಶ್ವದರ್ಶನ ಸ್ಕೂಲ್ ಎದುರಿನ ಪಂಚರ ಅಂಗಡಿಯ ಮುಂದೆ ನಿಲ್ಲಿಸಿಟ್ಟ ಅಂದಾಜು 50 ಸಾವಿರ ರೂ. ಮೌಲ್ಯದ ಕಪ್ಪು ಮತ್ತು ನೀಲಿ ಬಣ್ಣದ ಪಲ್ಸರ್ ಮೋಟಾರ ಸೈಕಲ್‌ನ್ನು ಕದ್ದೊಯ್ದಿರುವ ಕುರಿತು ಸಂತೋಷ ಕೈತಾನ್ ಲೊಪೀಸ್(32) ಎಂಬುವರು ಯಲ್ಲಾಪುರ ಠಾಣೆಯಲ್ಲಿ ದೂರು ನೀಡಿದ್ದರು ಎಂದು ತಿಳಿದುಬಂದಿದೆ.
ಈ ಕುರಿತಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಆರೋಪಿತರಾದ ಬೆಳಗಾವಿಯ ನೇಸರಗಿ ಗಜಮಿನಹಾಳ ಗ್ರಾಮದ ಚಾಲಕ ವೃತ್ತಿಯ ಬಸವರಾಜ ರಮೇಶ ಕೂಗುನವರ್ (18), ರಾಜೀವ ಯಲ್ಲಪ್ಪಾ ಮಾಡಮ್‌ಗೇರಿ(21), ಲಕ್ಷ್ಮಪ್ಪ ಮಲ್ಲಪ್ಪ ಬಸರಿಮಠದ ಪ್ರಾಯ (22), ಇವರುಗಳನ್ನು ಹುಬ್ಬಳ್ಳಿ ರಸ್ತೆಯಲ್ಲಿ ನ್ಯೂ ಮಲಬಾರ್ ಹೊಟೇಲ್ ಹತ್ತಿರ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದು ಆರೋಪಿತರಿಂದ ಮೋಟಾರ ಪಲ್ಸರ್ ಸೈಕಲ್‌ನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎನ್ನಲಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ|| ಸುಮನ
ಪೆನ್ನೇಕರ ಐ.ಪಿ.ಎಸ್, ಹೆಚ್ಚುವರಿ ಪೊಲೀಸ
ಅಧೀಕ್ಷಕ ಎಸ್. ಬದರಿನಾಥ, ಶಿರಸಿ ಪೊಲೀಸ ಉಪಾಧೀಕ್ಷಕ ರವಿ ನಾಯ್ಕರ ಮಾರ್ಗದರ್ಶನದಲ್ಲಿ, ಯಲ್ಲಾಪುರ ಪಿಐ ಸುರೇಶ ಯಳ್ಳೂರ, ನೇತೃತ್ವದಲ್ಲಿ ಪಿ.ಎಸ್.ಐ
ಅಮೀನಸಾಬ್ ಎಮ್, ಅತ್ತಾರ, ಪಿ.ಎಸ್.ಐ. ಮಂಜುನಾಥ ಗೌಡರ, ಹಾಗೂ ಸಿಬ್ಬಂದಿಯವರಾದ, ಬಸವರಾಜ, ಮಹ್ಮದ ಶಫಿ, ಗಜಾನನ, ಮಹಾಂತೇಶ, ಶೋಭಾ,
ನಾಯ್ಕ ಇವರು ಆರೋಪಿತರನ್ನು ದಸ್ತಗಿರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ವರದಿಯಾಗಿದೆ.