ಆಂಧ್ರ ಪ್ರದೇಶ: ಶ್ರೀ ಸತ್ಯಸಾಯಿ ಜಿಲ್ಲೆಯ ತಾಡಿಮರ್ರಿ ಮಂಡಲದ ಚಿಲ್ಲಕೊಂಡಯ್ಯಪಲ್ಲಿಯಲ್ಲಿ ಹೈಟೆನನ್ ವಿದ್ಯುತ್ ವೈರ್ ಆಟೋ ಮೇಲೆ ಬಿದ್ದ ಪರಿಣಾಮ 8 ಮಂದಿ ಸಜೀವ ದಹನವಾದ ಭೀಕರ ದುರ್ಘಟನೆಯೊಂದು ನಡೆದಿದೆ ಎಂದು ತಿಳಿದುಬಂದಿದೆ.
ಕೃಷಿ ಕೆಲಸಕ್ಕಾಗಿ ತೆರಳುತ್ತಿದ್ದ ವೇಳೆ ಆಟೋಮೇಲೆ ಮೇಲೆ ಹೈಟೆನ್ಶನ್ ವೈರ್ ಬಿದ್ದ ಪರಿಣಾಮ ಆಟೋ ಸ್ಫೋಟಗೊಂಡಿದೆ. ಬೆಂಕಿ ಹೊತ್ತಿಕೊಂಡು ಆಟೋ ಧಗಧಗ ಉರಿದಿದೆ.ಇದರಿಂದ ಕಾರ್ಮಿಕರು ಸಜೀವ ದಹನವಾಗಿದ್ದಾರೆ ಎನ್ನಲಾಗಿದೆ.
ಮೃತರನ್ನು ಗುಡಂಪಲ್ಲಿ ನಿವಾಸಿಗಳು ಎಂದು
ಗುರುತಿಸಲಾಗಿದೆ. ಇವರೆಲ್ಲರೂ ಕೃಷಿ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಆಟೋದಲ್ಲಿ10ಕ್ಕೂ ಹೆಚ್ಚು ಮಂದಿ ಇದ್ದರು ಎಂದು ವರದಿಯಾಗಿದೆ.
ಈ ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳೀಯರ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.