ಅಂಕೋಲಾ : ಹೊಸಕಂಬಿ ಕ್ರಾಸ್ ಹತ್ತಿರ ಒಬ್ಬ ವ್ಯಕ್ತಿಯು ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಬಗ್ಗೆ ಡಾ || ಸುಮನ ಪೇನ್ನೇಕರ ಮಾನ್ಯ ಪೊಲೀಸ್ ಅಧೀಕ್ಷಕರು ಕಾರವಾರ ರವರಿಗೆ ಮಾಹಿತಿ ಬಂದ ಮೇರೆಗೆ ಮಾನ್ಯ ಎಸ್.ಪಿ. ಕಾರವಾರ ಹಾಗೂ ಶ್ರೀ ಎಸ್ ಬದರಿನಾಥ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು , ಕಾರವಾರ ರವರ ಮಾರ್ಗದರ್ಶನದಲ್ಲಿ ಜಿಲ್ಲಾ ವಿಶೇಷ ವಿಭಾಗದ ಶ್ರೀ ಪ್ರೇಮನಗೌಡ ಪಾಟೀಲ್ ಪಿ.ಎಸ್.ಐ. ಎಚ್.ಸಿ- ರಾಘವೇಂದ್ರ ಜಿ, ಪಿ.ಸಿ. ಭಗವಾನ ಗಾಂವಕರ , ವೀರೇಶ್ ನಾಯ್ಕ್ ತಂಡವು ಹೊಸಕಂಬಿ ಕ್ರಾಸ್ ಹತ್ತಿರ ಅನುಮಾನಾಸ್ಪದವಾಗಿ ನಿಂತಿದ್ದ ವ್ಯಕ್ತಿಯನ್ನು ದಸ್ತಗಿರ ಮಾಡಿದ್ದಲ್ಲಿ ವಾಡಗರ ಅಚುವೇ ಗ್ರಾಮದ ವಿಷ್ಣು ದೇವಾಗ್ಯ ಮರಾಠಿ ಪ್ರಾಯ 34,ಈತನು ಯಾವುದೇ ಪಾಸ ಅಥವಾ ಪರ್ಮಿಷನ್ ಇಲ್ಲದೆ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಸುಮಾರು 55,000 ರೂಪಾಯಿ ಮೌಲ್ಯದ 905 ಗ್ರಾಂ ಗಾಂಜಾ ದೊರೆತಿದ್ದು ಸ್ವತ್ತುಗಳನ್ನು ವಶಪಡಿಸಿಕೊಂಡು ಆರೋಪಿತನಿಗೆ ದಸ್ತಗಿರಿ ಮಾಡಿ ಮುಂದಿನ ಕ್ರಮಕ್ಕಾಗಿ ಅಂಕೋಲಾ ಪೊಲೀಸ್ ರಾಣೆಯವರ ತಾಬಾಕ್ಕೆ ಆರೋಪಿ ಹಾಗೂ ಸ್ವತ್ತುಗಳೊಂದಿಗೆ ನೀಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಕಾರವಾರ ರವರು ಶ್ಲಾಘನೆ ವ್ಯಕ್ತಪಡಿಸಿರುತ್ತೇನೆ.

RELATED ARTICLES  ಶ್ರೀ ರಾಘವೇಶ್ವರ ಭಾರತೀ ಶಾಲೆಯಲ್ಲಿ ಗೋಕರ್ಣ ಪಿ.ಎಸ್.ಐ ಅವರಿಂದ ಉಪನ್ಯಾಸ