ಹೊನ್ನಾವರ: ತಾಲೂಕಿನಲ್ಲಿ ಧಾರಾಕಾವಾಗಿ ಮಳೆ ಸುರಿಯುತ್ತಿದ್ದು, ವಿವಿಧೆಡೆ ಹಾನಿ ಸಂಭವಿಸಿದೆ ಎನ್ನಲಾಗಿದೆ. ಕರ್ಕಿ ಗ್ರಾಮದ ರಾಮಚಂದ್ರ ನಾಯ್ಕ ಇವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಹಾನಿ ಉಂಟಾಗಿದೆ. ಚಿತ್ತಾರ ಪಂಚಾಯತಿ ವ್ಯಾಪ್ತಿಯ ರಸ್ತೆಗೆ ಅಡ್ಡಲಾಗಿ ಮರ ಬಿದ್ದು, ಕೆಲ ಕಾಲ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಗೇರುಸೊಪ್ಪಾ ಖರ್ವಾ ರಾಷ್ಟ್ರೀಯ ಹೆದ್ದಾರಿಯ ಖರ್ವಾ ಕ್ರಾಸ್ ಬಳಿ ಗುಡ್ಡ ಕುಸಿತದಿಂದಾಗಿ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು ಎಂದು ತಿಳಿದು ಬಂದಿದೆ.

RELATED ARTICLES  ರಸ್ತೆಯ ಮೇಲೆ ಹರಿದ ನೀರು : ಅವೈಜ್ಞಾನಿಕ ಕಾಮಗಾರಿ ವಿರುದ್ಧ ಪ್ರತಿಭಟನೆ

ಪಟ್ಟಣ ವ್ಯಾಪ್ತಿಯ ಸಫ್ರಿ ಸೆಂಟರ್ ಬಳಿ ಚರಂಡಿಯಲ್ಲಿ ನೀರು ತುಂಬಿದ ಪರಿಣಾಮ ಸಮೀಪದ ತೋಟ ಹಾಗೂ ಮನೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿತ್ತು ಎನ್ನಲಾಗಿದೆ.

ತಕ್ಷಣ ಅಧಿಕಾರಿಗಳು ಭೇಟಿ ನೀಡಿ ರಸ್ತೆಯಲ್ಲಿ ಬಿದ್ದ ಮರ ಹಾಗೂ ಮಣ್ಣುಗಳನ್ನು ತೆರವು ಮಾಡಿದ್ದು, ಮನೆ ಹಾನಿ ಪ್ರದೇಶದ ಪಂಚನಾಮೆ ನಡೆಸಲಾಗಿದೆ. ಮಳೆ ಹಾನಿ ಅಥವಾ ಇತರೆ ಸಮಸ್ಯೆಗಳು ಉಂಟಾದಲ್ಲಿ ಅಧಿಕಾರಿಗಳು ತಕ್ಷಣ ಸ್ಪಂದಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

RELATED ARTICLES  ವೀರ ಯೋಧ ಕುಮಟಾದ ಕೂಜಳ್ಳಿಯ ಅಶೋಕ ಹೆಗಡೆ ಅಕಾಲಿಕ ಮರಣ.

ಗ್ರಾಮೀಣ ಭಾಗದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಪಟ್ಟಣ ವ್ಯಾಪ್ತಿಯಲ್ಲಿ ಮೂಖ್ಯಾಧಿಕಾರಿಗಳ ಗಮನಕ್ಕೆ ತರುವಂತೆ ತಹಶೀಲ್ದಾರ ನಾಗರಾಜ ನಾಯ್ಕಡ್ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.