ಕುಮಟಾ: ಉದ್ಯೋಗ ಮೇಳದಲ್ಲಿ ಭಾಗವಹಿಸಿದ ಯುವಕರಿಗೆ ಮರ್ಚೆಂಟ್ಸ್‌ ನೇವಿಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಒಬ್ಬೊಬ್ಬರಿಂದ 2.5 ಲಕ್ಷ ರೂ.ವಸೂಲಿ ಮಾಡಿ, ಪಂಗನಾಮ ಹಾಕಿದ ಘಟನೆಯೊಂದು ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ. ಬೇರೆ ಬೇರೆ ಜಿಲ್ಲೆಯ ನೂರಾರು ಯುವಕರಿಗೆ ಮರ್ಚೆಂಟ್ಸ್ ನೇವಿಯಲ್ಲಿ ಉದ್ಯೋಗವನ್ನು ಕೊಡಿಸುವುದಾಗಿ ಭರವಸೆ ನೀಡಿ ಹಣವನ್ನು ಪಡೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಸಹ 10-15 ಯುವಕರು ಹಣವನ್ನು ನೀಡಿದ್ದಾರೆ ಎನ್ನಲಾಗಿದೆ.

ಆದರೆ ಇದರಲ್ಲಿ 3 ಯುವಕರು ಮಾತ್ರ ತಮ್ಮ ಹಠ ಬಿಡದೇ ಈ ಖದೀಮರಿಂದ ತಲಾ 2.5 ಲಕ್ಷದಂತೆ ಒಟ್ಟು 7.5 ಲಕ್ಷ ಹಣವನ್ನು ವಾಪಸ್ಸು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ.

6-8 ತಿಂಗಳ ಹಿಂದೆ ಉದ್ಯೋಗ ಮೇಳ ನಡೆದಿದ್ದ ಸಂದರ್ಭದಲ್ಲಿಯೂ ಒಂದು ತಂಡವು ಸಾಕಷ್ಟು ಜನರನ್ನು ಆಯ್ಕೆ ಮಾಡಿಕೊಂಡಿದೆ. ಮರ್ಚೆಂಟ್ಸ್ ನೇವಿಗೆ ಸೇರುವ ಪೂರ್ವದಲ್ಲಿ ಯುವಕರಿಗೆ ತರಬೇತಿಯ ಅವಶ್ಯಕತೆಯಿದೆ.
ಹಾಗಾಗಿ ಶಿಫ್‌ನಲ್ಲಿ ಇವರಿಗೆ 6 ತಿಂಗಳ ಕಾಲ ತರಬೇತಿ ನೀಡಲಾಗುವುದು. ಈ ತರಬೇತಿಗೆ 2.5 ಲಕ್ಷ ರೂ.ಖರ್ಚು ಬರಲಿದೆ ಎಂದಿದ್ದಾರೆ.

RELATED ARTICLES  ಉತ್ತರಕನ್ನಡದ ಹಲವೆಡೆ ಮಳೆ.

ಟ್ರೇನಿಂಗ್ ಮುಗಿದ ತಕ್ಷಣವೇ ಮರ್ಚೆಂಟ್ಸ್
ನೇವಿಯಲ್ಲಿ ಉದ್ಯೋಗವಿದೆ. ನಂತರ ತಿಂಗಳಿಗೆ ಲಕ್ಷಾಂತರ ರೂ. ಸಂಬಳ ದೊರೆಯಲಿದೆ ಎಂದಾಗ, ಈ ಯುವಕರು ಹಣವನ್ನು ಸಂಗ್ರಹಿಸಿ 2.5 ಲಕ್ಷ ರೂ.ವನ್ನು ಈ ವಂಚಕರ ಕೈಗೆ ಇಟ್ಟಿದ್ದಾರೆ ಎನ್ನಲಾಗಿದೆ.

2.5 ಲಕ್ಷ ರೂ. ಹಣ ನೀಡಿದ ಯುವಕರಿಗೆ ಚೆನೈ ರೈಲ್ವೆ ಸ್ಟೇಷನ್ ಬಂದಿಳಿಯಲು ತಿಳಿಸಿದ್ದರು. ಚೆನೈ ಕಾಲೇಜ್ ಒಂದರಲ್ಲಿ ಇವರಿಗೆ ಟ್ರೇನಿಂಗ್ ಪ್ರಾರಂಭಿಸಿದ್ದರು. ಆದರೆ ಕಾಲೇಜ್‌ಗೆ ಹಣವನ್ನು ಕಟ್ಟದ ಕಾರಣದಿಂದ ಈ ಎಲ್ಲಾ ಯುವಕರಿಗೂ ಅಲ್ಲಿಯ ಮ್ಯಾನೇಜ್ ಮೆಂಟ್ ಕೆಲವು ದಿನದ ನಂತರ ತರಗತಿಗೆ ಕೂಡಲು ಅವಕಾಶ ಕಲ್ಪಿಸಲಿಲ್ಲ. ಟ್ರೇನಿಂಗ್‌ಗೆ ಅಂತ ಹೇಳಿ ಕರೆದುಕೊಂಡ ಭೂಪರು ನಾಪತ್ತೆಯಾಗಿದ್ದರು.

RELATED ARTICLES  ಶಾಂತಾದುರ್ಗಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

ಹಣವನ್ನು ನೀಡಿ ಮರ್ಚೆಂಟ್ಸ್ ನೇವಿಯ
ಉದ್ಯೋಗಿಗಳಾಗಲು ಹೊರಟಿದ್ದ ಯುವಕರ ಕನಸು ನುಚ್ಚುನೂರಾಗಿದ್ದವು. ಕೈಯಲ್ಲಿ ಹಣವಿರಲಿಲ್ಲ.ಬಹಳಷ್ಟು ಜನರಿಗೆ ಚೆನೈಯಲ್ಲಿ ಅಲ್ಲಿಯ ಭಾಷೆಗಳೂ ಕೂಡ ಬರುತ್ತಿರಲಿಲ್ಲ. ಸರಿಯಾದ ಊಟವೂ ಕೂಡ ಸಿಗದೇ ಪರಿತಪಿಸಿದ್ದರು. ಹೇಗೋ ಯಾರಾರದೋ ಸಹಾಯ ಬೇಡಿ ಮನೆಗೆ ಬಂದು ತಲುಪಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತೆ ವೀಣಾ ನಾಯಕ ಪೋಲಿಸ್ ಸಹಾಯವನ್ನು ಪಡೆದಿದ್ದರು. ಯುವಕರ ದೂರಿನ ಮೇಲೆ ಕುಮಟಾ ಪಿಎಸ್‌ಐ ನವೀನ ನಾಯ್ಕ
ಆರೋಪಿಗಳನ್ನು ಹೆಡೆಮುರಿ ಕಟ್ಟಿ ತಂದಿದ್ದರು. ಕೊನೆಗೂ ಅಭಿಷೇಕ ನಾಗರಾಜ ನಾಯಕ ಕುಮಟಾ, ಕಾರ್ತಿಕ ಗಾವಡಿ, ಹೊನ್ನಾಂವ್ ಕುಮಟಾ, ಕೈಲಾಸ ಸಣ್ಣಪ್ಪಗಜಕೋಲ್
ಮುಂಡಗೋಡ ಇವರು ಮೂವರಿಗೆ ತಲಾ 2.5 ಲಕ್ಷ ರೂ.ವನ್ನು ಆರೋಪಿಗಳು ವಾಪಸ್ಸು ಮಾಡಿದ್ದಾರೆ ವರದಿಯಾಗಿದೆ.