ಅಂಕೋಲಾ: ತಾಲೂಕಿನ ಮಾದನಗೇರಿ ಬೊಳುಕುಂಟೆ ರೈಲ್ವೆ ಗೇಟ್ ಹತ್ತಿರ ಕುರುಚಲು ಗಿಡದ ಬಳಿ ಮಹಿಳೆಯ ಮೃತದೇಹಯೊಂದು ಪತ್ತೆಯಾಗಿದೆ. ಮಹಿಳೆಯು ಮಧ್ಯವಯಸ್ಕಳಾಗಿದ್ದು, ಸಂಚರಿಸುತ್ತಿರುವ ರೈಲಿನಿಂದ ಕೆಳಗೆ ಹಾರಿರಬಹುದೇ? ಅಥವಾ ಆಯ ತಪ್ಪಿ ಬಿದ್ದು ಮೃತ ಗೊಂಡಿರಬಹುದೇ? ಎನ್ನುವುದು ತಿಳಿಯಬೇಕಿದೆ. ಅಥವಾ ಯಾರೋ ಈಕೆಯನ್ನು ಇಲ್ಲಿ ತಂದು ಎಸೆದಿರಬಹುದೇ? ಎನ್ನುವುದು ತಿಳಿದು ಬರಬೇಕಿದೆ ಎನ್ನಲಾಗಿದೆ.
ಘಟನೆಯಿಂದಾಗಿ ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸುತ್ತಮುತ್ತಲಿನ ಜನ ಸುದ್ದಿ ತಿಳಿಯುತ್ತಿದ್ದಂತೆ ಘಟನೆ ಕುರಿತಾಗಿ ಕುತೂಹಲಗೊಂಡು ಹಾಗೂ ಭಯಗೊಂಡಿದ್ದು ಕಂಡು ಬಂತು.
ಕಾರವಾರದ ಜಿಲ್ಲಾಸ್ಪತ್ರೆಗೆ ಮಹಿಳೆಯ ಮೃತದೇಹವನ್ನು ಸಾಗಿಸಿ ಶೈತ್ಯಾಗಾರದಲ್ಲಿ ಇಡುವ ವ್ಯವಸ್ಥೆ ಮಾಡಲಾಗಿದ್ದು, ಮಹಿಳೆಯ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ
ಅಂಕೋಲಾ ಪೊಲೀಸ್ ಠಾಣೆ ಇಲ್ಲವೇ ತಮ್ಮಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ. ಸಿಪಿಐ ಸಂತೋಷ ಶೆಟ್ಟಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲಿನೆ ನಡೆಸಿ ತನಿಖೆ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.