ನ್ಯೂಯಾರ್ಕ್‌: ವಿಶ್ವಸಂಸ್ಥೆ ವೇದಿಕೆಯಲ್ಲಿ ಭಾರತದ  ಏಟುಗಳಿಗೆ ಉತ್ತರ ನೀಡಲು ಸಾಧ್ಯವಾಗದೆ ಪರದಾಡುತ್ತಿರುವ ನರಿ ಬುದ್ದಿಯ ಪಾಕ್‌ ಏನೋ ಮಾಡಲು ಹೋಗಿ ಪೇಚಿಗೆ ಸಿಲುಕಿ ಇದ್ದ ಸ್ವಲ್ಪ  ಮರ್ಯಾದೆಯನ್ನೂ ಕಳೆದುಕೊಂಡಿದೆ.

ವಿಶ್ವಸಂಸ್ಥೆಯ ಪಾಕ್‌ನ ಖಾಯಂ ಪ್ರತಿನಿಧಿಯಾಗಿರುವ ಮಲೀಹಾ ಲೋಧಿ ಗಾಜಾ ಸಂತ್ರಸ್ಥೆಯ ಫೋಟೋ ಪ್ರದರ್ಶಿಸಿ ಇದು ಕಾಶ್ಮೀರದ ಪರಿಸ್ಥಿತಿ, ಭಾರತದ ಪ್ರಜಾಪ್ರಭುತ್ವದ ಸ್ಥಿತಿ ಎಂದಿದ್ದಾರೆ. ಅಸಲಿಗೆ ಇದು 2014 ರ ಗಾಜಾ ಯುದ್ಧ ಸಂತ್ರಸ್ಥೆ 17 ರ ಹರೆಯದ ರಾವ್ಯಾ ಅಬು ಜೋಮ್‌ಳ ಚಿತ್ರವಾಗಿತ್ತು.

ಮೋದಿ ಅವರ ಮೇಲೂ ಲೋಧಿ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದು ಗುಜರಾತ್‌ನಲ್ಲಿ ಮುಸ್ಲಿಮರನ್ನು ಹತ್ಯೆಗೈಯುತ್ತಿದ್ದಾರೆ.ಭಾರತ ಮುಸ್ಲಿಮರಿಗೆ ಸುರಕ್ಷಿತವಲ್ಲ ಎಂದು ಆರೋಪಿಸಿರುವುದಾಗಿ ವರದಿಯಾಗಿದೆ.

ಈ ವಿಚಾರ ವಿಶ್ವಾದ್ಯಂತ ಸುದ್ದಿಯಾಗಿದ್ದು ಪಾಕ್‌ ಭಾರಿ ಮುಖಭಂಗ ಅನುಭವಿಸಿದೆ.