ಹೊನ್ನಾವರ: ತನ್ನ ಹೆಂಡತಿ ಮೇಲೆ ಸಂಶಯ ಹಾಗೂ ದಿನನಿತ್ಯ ಕಿರುಕುಳ ನೀಡುತ್ತಿದ್ದ ಗಂಡ ಏಕಾಏಕಿ ಹೆಂಡಿತಿಗೆ ಕಂಡಕಂಡಲ್ಲಿ ಚಾಕುವಿನಿಂದ ಇರಿದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ತಾಲೂಕಿನ ಕಡತೋಕಾದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ ಎಂದು ವರದಿಯಾಗಿದೆ.
ಮಂಜುನಾಥ ವೆಂಕಟ್ರಮಣ ಶೆಟ್ಟಿ ತನ್ನ ಹೆಂಡಿತಿ ಮೇಲೆ ಹಲ್ಲೆ ನಡೆಸಿದ ಆರೋಪಿಯಾಗಿದ್ದಾನೆ. ಆಶಾ ಮಂಜುನಾಥ ಶೆಟ್ಟಿ (50) ಗಂಡನಿಂದ ಹಲ್ಲೆಗೊಳಗಾದ ಮಹಿಳೆ. ಗಂಡ ಮಂಜುನಾಥ ಶೆಟ್ಟಿ ಮೊದಲನಿಂದಲೂ ತನ್ನ ಹೆಂಡತಿ ಮೇಲೆ ಸಂಶಯದಿಂದ ನೋಡುವುದು, ವಿನಾಕಾರಣ ಅವಳಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಆತನ ಅಣ್ಣತಮ್ಮಂದಿರು ಬಹಳ ಸಲ ಅವನಿಗೆ ಬುದ್ದಿವಾದ ಹೇಳದ್ದರು. ಆದರೆ ಶುಕ್ರವಾರ ತಡರಾತ್ರಿ
ಮಂಜುನಾಥ ಶೆಟ್ಟಿ ಕೈಯಲ್ಲಿ ಚಾಕು ಹಿಡಿದು ತನ್ನ ಹೆಂಡತಿಗೆ ಅವಾಚ್ಯ ಶಬ್ದಗಳಿಂದ ಬೈದು, ನಿನ್ನನ್ನು ಕೊಲೆ ಮಾಡದೇ ಬಡುವುದಿಲ್ಲ ಎಂದು ಎರಡೂ ಕೈಗಳಿಗೆ ಸಿಕ್ಕಸಿಕ್ಕಲ್ಲಿ ಇರಿದು ಗಂಭೀರ ರಕ್ತಗಾಯಪಡಿಸಿದ್ದಾನೆ.
ಈ ವೇಳೆ ಕುಟುಂಬದ ಸದಸ್ಯರು ತಪ್ಪಿಸಿದ್ದು, ಆಶಾ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಮಂಜುನಾಥ ಶೆಟ್ಟಿ ಅವರ ಅಣ್ಣ ನರಸಿಂಹ ವೆಂಕಟ್ರಮಣ ಶೆಟ್ಟಿ ಅವರು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹೊನ್ನಾವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.