ಶಿರಸಿ: ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ಅತೀ ವೇಗವಾಗಿ ಬಂದು ಎದುರಿನಿಂದ ಬರುತ್ತಿದ್ದ, ಬೊಲೆರೊ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಬೊಲೆರೊ ವಾಹನದಲ್ಲಿದ್ದ ಇಬ್ಬರಿಗೆ ತೀವ್ರವಾದ ಗಾಯಗೊಂಡಿರುವ ಘಟನೆಯೊಂದು ಶಿರಸಿ-ಹುಬ್ಬಳ್ಳಿ ರಸ್ತೆಯ ಸಣ್ಣಕೇರಿ ಸಮೀಪ ಸಂಭವಿಸಿದೆ ಎಂದು ತಿಳಿದುಬಂದಿದೆ.

RELATED ARTICLES  ಹೆಚ್ಚಿತು ಆರ್.ಬಿ.ಐ ಬಡ್ಡಿದರ: ಸಾಲವಿನ್ನು ದುಬಾರಿ!

ಹುಬ್ಬಳ್ಳಿ ಕಡೆಗೆ ಬೊಲೆರೊ ವಾಹನವು ಹೋಗುತ್ತಿದ್ದು, ಇದೇ ಸಮಯದಲ್ಲಿ ಹುಬ್ಬಳ್ಳಿಯಿಂದ ಶಿರಸಿಗೆ ಬರುತ್ತಿದ್ದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ
ಬಸ್ಸು ಚಾಲಕನ ಅತಿ ವೇಗದ ಚಾಲನೆಯಿಂದಾಗಿ ಸಣ್ಣಕೇರಿ ಹತ್ತಿರ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಬೊಲೆರೊ ವಾಹನದಲ್ಲಿದ್ದ ರವೀಶ ಭಟ್ಟ ಯಲ್ಲಾಪುರ ಹಾಗೂ ಕೇಶವ ನಾಯ್ಕ ಸಾಗರ ಎಂಬುವವರೇ ತೀವ್ರವಾಗಿ ಗಾಯಗೊಂಡವರಾಗಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES  ಕುಮಟಾದ ಹೊಲನಗದ್ದೆಯಲ್ಲಿ ಆರಂಭಗೊಂಡಿತು ನಗೆ ಕೂಟ.

ಈ ಕುರಿತಾಗಿ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಾಗಿದ್ದು, ಪಿ.ಎಸ್.ಐ. ಈರಯ್ಯ ತನಿಖೆ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.