ಶ್ರೀ ಅಖಿಲ ಹವ್ಯಕ ಮಹಾಸಭೆಯ ವತಿಯಿಂದ ಯಕ್ಷಗಾನ ತರಬೇತಿ ‘ಯಕ್ಷಸಂಸ್ಕಾರ’ ಉಚಿತವಾಗಿ ನಡೆಯಲಿದ್ದು, ನಾಳೆ (03.07.2022) ಉದ್ಘಾಟನಾ ಕಾರ್ಯಕ್ರಮ ಮಲ್ಲೇಶ್ವರದ ಹವ್ಯಕ ಭವನದಲ್ಲಿ ಸಂಜೆ 4 ಗಂಟೆಗೆ ನಡೆಯಲಿದೆ.
ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷರಾದ ಡಾ| ಜಿ.ಎಲ್. ಹೆಗಡೆ ಕಾರ್ಯವನ್ನು ಉದ್ಘಾಟಿಸಲಿದ್ದು, ಮಹಾಸಭೆಯ ಅಧ್ಯಕ್ಷರಾದ ಡಾ.ಗಿರಿಧರ ಕಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಶ್ರೀ ತೋಟಿಮನೆ ಗಣಪತಿ ಹೆಗಡೆಯವರು ಮುಖ್ಯ ಅಭ್ಯಾಗತರಾಗಿ ಆಗಮಿಸಲಿದ್ದು, ಇವರ ನಿರ್ದೇಶನದಲ್ಲಿ ಪ್ರತಿವಾರ ಉಚಿತ ತರಬೇತಿ ನಡೆಯಲಿದೆ. ಶ್ರೀ ಸೂರ್ಯ ಹೆಬ್ಬಾರ್ ಹಾಗೂ ಶ್ರೀ ಮಂಜು ಹವ್ಯಕ ಬಡಗುತ್ತಿಟ್ಟಿನ ಪ್ರಶಿಕ್ಷಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಎಲ್ಲಾ ಜಾತಿ ಜನಾಂಗದವರಿಗೂ ಮುಕ್ತವಾಗಿ ಹಾಗೂ ಉಚಿತವಾಗಿ ತರಬೇತಿ ಇರಲಿದ್ದು, ಆಸಕ್ತರು ಮಹಾಸಭೆಯಲ್ಲಿ ವಿಚಾರಿಸಿ (080-23348193) ಪ್ರತಿ ಭಾನುವಾರದ ತರಬೇತಿಯಲ್ಲಿ ಭಾಗವಹಿಸಬಹುದು.