ಕುಮಟಾ : ತಲೆಮಾರುಗಳಿಂದ ಸಂಪ್ರದಾಯಗಳಿಗೆ ಕಟ್ಟುಬಿದ್ದು ಅದರ ವಿರುದ್ದ ಈಜಲಾರದೆ ತುಳಿತಕ್ಕೊಳಗಾದ ಬುಡಕಟ್ಟು ಜನಾಂಗದ ಪ್ರತೀಕವಾಗಿ ಮೂಡಿಬಂದ ಹಾಲಕ್ಕಿ ರಾಕು ಆ ಜನಾಂಗದ ನೋವು, ಕಟ್ಟುಕಟ್ಟಳೆಗಳ ಚಿತ್ರಣ ಅನಾವರಣಗೊಳಿಸಿದೆ ಎಂದು ಸಾಹಿತಿ ಡಾ.ಸೈಯದ್ ಜಮೀರುಲ್ಲಾ ಷರೀಫ್ ಅಭಿಪ್ರಾಯ ಪಟ್ಟರು. ಅವರು ಕುಮಟಾದ ನಾದಶ್ರೀ ಕಲಾಕೇಂದ್ರದಲ್ಲಿ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಡಾ.ಶ್ರೀಧರ ಗೌಡ ಉಪ್ಪಿನಗಣಪತಿಯವರ ಹಾಲಕ್ಕಿ ರಾಕು ಕಥಾಸಂಕಲನವನ್ನು ಬಿಡುಗಡೆಗೊಳಿಸಿ ವರ್ಣಸಂಘರ್ಷ ಮತ್ತು ವರ್ಗಸಂಘರ್ಷಗಳಿAದಾಗಿ ಬುಡಕಟ್ಟು ಸಮುದಾಯ ಮುನ್ನೆಲೆಗೆ ಬರುವಲ್ಲಿ ಇನ್ನೂ ಕೂಡ ಎಡವಿರುವುದು ವಿಷಾದದ ಸಂಗತಿ. ಈ ಕಥಾಸಂಕಲನದಲ್ಲಿ ಕಥೆಗಾರ ಶ್ರೀಧರ ಗೌಡರು ಕಟ್ಟಿಕೊಟ್ಟ ಒಂದೊAದು ಕಥೆಯು ಕೇವಲ ಹಾಲಕ್ಕಿ ಜನಾಂಗದ ಒಡಲ ನೋವು, ಸಾಂಸ್ಕೃತಿಕ ತಲ್ಲಣಗಳ ವ್ಯಥೆಯಾಗಿರದೆ ಎಲ್ಲಾ ಬುಡಕಟ್ಟು ಜನಾಂಗದ ಬದುಕಿನ ಚಿತ್ರಣವಾಗಿದೆ. ಸಂಕಲನದ ಕಥೆಗಳು ಹಾಲಕ್ಕಿಗರ ಬದುಕಿನ ವಿವಿಧ ಮುಖಗಳ ದರ್ಶನ ಮಾಡಿಸುತ್ತವೆ. ತಮ್ಮ ಸಂಸ್ಕೃತಿ ಸಮ್ಮಿಶ್ರಣಗೊಳ್ಳದಂತೆ ರಕ್ಷಿಸುವ ಹಿರಿಯರ ಪ್ರಯತ್ನಗಳು ಮತ್ತು ತಮ್ಮನ್ನು ತಳವರ್ಗಕ್ಕೆ ತಳ್ಳಿರುವ ಸಂಪ್ರದಾಯಗಳಿAದ ಮುಕ್ತಗೊಳಿಸುವ ಯುವಶಕ್ತಿಯ ಹೋರಾಟಗಳನ್ನು ಮುಖಾಮುಖಿಯಾಗಿಸಿವೆ. ಸಂಕಲನದ ಕಥಾ ನಾಯಕ ರಾಕುವನ್ನು ಸಮಾನತೆಗಾಗಿ ಸಾಂಪ್ರದಾಯಿಕ ಕಟ್ಟುಕಟ್ಟಳೆಗಳನ್ನು ಕಿತ್ತೊಗೆಯುವ ಕ್ರಾಂತಿಕಾರಿಯಾಗಿ ಚಿತ್ರಿಸಿದ್ದು ಸಮುದಾಯದ ವಾಸ್ತವಿಕ ಚಿತ್ರಣ ಓದುಗರ ಮನತಟ್ಟುತ್ತದೆ ಎಂದು ಅಭಿಪ್ರಾಯ ಪಟ್ಟರು.


ಮುಖ್ಯ ಅತಿಥಿಗಳಾದ ಮಹಾಬಲಮೂರ್ತಿ ಕೊಡ್ಲೆಕೆರೆಯವರು ಹಾಲಕ್ಕಿ ರಾಕುವಿನ ಮೂಲಕ ಡಾ.ಶ್ರೀಧರ ಗೌಡರು ತಮ್ಮ ಸಮಾಜವನ್ನು ತುಳಿತದಿಂದ ಎದ್ದೇಳಿಸಲು ನೇರವಾಗಿ ಸಂಘರ್ಷಕ್ಕೆ ಇಳಿಯದೇ ಸೌಮ್ಯ ಪ್ರತಿಭಟನೆಯ ಮಾರ್ಗಕಂಡುಕೊAಡAತೆ ಭಾಸವಾಗುತ್ತದೆ. ಜಾತಿ ಜಾತಿಗಳ ನಡುವಿನ, ಕೋಮು ಕೋಮುಗಳ ನಡುವಿನ ಸಂಘರ್ಷಗಳು ಉಸಿರುಗಟ್ಟುವ ವಾತಾವರಣ ಸಮಾಜದ ನಡುವೆ ಬಿರುಕು ಸೃಷ್ಟಿಸುತ್ತವೆ. ಕಥೆಗಾರ ಈ ಎಲ್ಲಾ ಸೂಕ್ಷö್ಮಗಳನ್ನು ಅಪ್ಪಟ ಹಾಲಕ್ಕಿ ಭಾಷೆಯಲ್ಲಿಯೇ ಕಟ್ಟಿಕೊಟ್ಟಿದ್ದು ಬುಡಕಟ್ಟು ಭಾಷೆಯ ಹೆಗ್ಗಳಿಕೆ. ಇಲ್ಲಿರುವ ಹನ್ನೊಂದು ಕಥೆಗಳೂ ವಿಭಿನ್ನ ಕಥಾ ಹಂದರ ಹೊಂದಿರುವ ಆದರೆ ವಾಸ್ತವಿಕ ನೆಲೆಗಟ್ಟಿನಲ್ಲಿ ಮೂಡಿಬಂದಿರುವ ಕಥೆಗಳಾಗಿವೆ. ನನ್ನ ಊರಿನ ಗೋಕರ್ಣದ ಸುತ್ತ ಮುತ್ತ ಹಾಲಕ್ಕಿಗರ ಹಾಡಿಗಳನ್ನ, ಮಹಿಳೆಯರನ್ನ, ಗಂಡಸರನ್ನ ಅವರಾಡುವ ಭಾಷೆಯನ್ನು ಹತ್ತಿರದಿಂದ ಗಮನಿಸಿರುವ ನನಗೆ ಇಲ್ಲಿನ ಕಥೆಗಳ ಪಾತ್ರಗಳು, ಪರಿಸರ ಎಲ್ಲವೂ ಕಣ್ಣಿಗೆ ಕಟ್ಟಿದಂತೆ ಭಾಷವಾಗುತ್ತವೆ. ಕಥೆ ಓದಿಸಿಕೊಂಡು ಹೋಗುತ್ತದೆ ಎಂಬುದರಲ್ಲಿ ಕಥೆಗಾರನ ವಾಸ್ತವಿಕತೆಯ ಕಲ್ಪನಾ ಲಹರಿ ಕಥಾ ಹಂದರ ತೆರೆದಿಡುವಲ್ಲಿ ಯಶಸ್ವಿಯಾಗಿದೆ. ಹತಾಸೆ, ಪ್ರತಿರೋದಗಳು ಸಿದ್ದಲಿಂಗಯ್ಯನವರ ಇಕ್ರಲ್ಲಾ, ಒದೆರಲ್ಲಾ ಸಾಲುಗಳನ್ನು ನೆನಪಿಸಿದರೂ ತೀವ್ರತೆಯನ್ನು ಹತ್ತಿಕ್ಕುವಲ್ಲಿ ಕಥೆಗಾರ ಭಾಷಾ ಚೌಕಟ್ಟನ್ನು ಮೀರದೆ ಪ್ರತಿರೋಧ ವ್ಯಕ್ತಪಡಿಸಿರುವುದು ಭಾಷೆಯ ಹಿಡಿತದ ಜೊತೆಗೆ ಹಾಲಕ್ಕಿ ಸಂಸ್ಕೃತಿಯ ಕುರುಹು ಆಗಿದೆ ಎಂದು ಅಭಿಪ್ರಾಯ ಪಟ್ಟರು.

RELATED ARTICLES  ಗೋಕರ್ಣದಲ್ಲಿ ಶಿವಗಂಗಾ ವಿವಾಹ ನಿಶ್ಚಿತಾರ್ಥ ತಾಂಬೂಲೋತ್ಸವ ಸಂಪನ್ನ


ವಿ.ಗ.ನಾಯಕರು ಜಿಲ್ಲೆಯ ಕಥೆಗಾರರ ಸಿಂಹಾವಲೋಕನದೊAದಿಗೆ ಶ್ರೀಧರ ಗೌಡರ ಕಥಾಪ್ರವೇಶವನ್ನು ಮಾರ್ಮಿಕವಾಗಿ ನುಡಿದರು. ಒಬ್ಬ ಕಥೆಗಾರನಿಗೆ ಇರಬೇಕಾದ ಬದ್ದತೆ, ಭಾಷೆಯ ಬಳಕೆ ಗಟ್ಟಿಯಾಗಿಸಿಕೊಂಡೇ ತಮ್ಮ ಚೊಚ್ಚಲಕೃತಿ ಅನಾವರಣಗೊಳಿಸಿರುವುದು ಒಳ್ಳೆಯ ಬೆಳವಣಿಗೆ. ಇವರ ಕಥೆಗಳಲ್ಲಿ ಅನನ್ಯತೆಯ ಭಾವ ತುಂಬಿರುವುದು, ಬುಡಕಟ್ಟು ಭಾಷೆಯ ಮೇಲೆ ಶಿಷ್ಟ ಭಾಷೆ ಸವಾರಿ ಮಾಡಿರುವುದು ಖಾರವಾಗಿಯೇ ಪ್ರತಿರೋಧಿಸಿರುವುದು ಹೆಗ್ಗಳಿಕೆ ಎಂದರು.


ಕ್ಷೇತ್ರಶಿಕ್ಷಣಾಧಿಕಾರಿ ಆರ್.ಎಲ್.ಭಟ್ ರವರು ಶ್ರೀಧರ ಗೌಡರವರಲ್ಲಿ ಒಬ್ಬ ಉತ್ತಮ ಶಿಕ್ಷಕನ ಜೊತೆಜೊತೆಗೆ ಒಬ್ಬ ಉತ್ತಮ ಕಥೆಗಾರ ಇರುವುದು ಶಿಕ್ಷಣ ಇಲಾಖೆಗೆ ಒಂದು ಹೆಮ್ಮೆ. ಅವರ ಸಂಶೋಧನಾತ್ಮಕ ಮಹಾಪ್ರಬಂಧ ಕೃತಿರೂಪದಲ್ಲಿ ಓದುಗರ ಕೈ ಸೇರಿದ್ದು ಇದೀಗ ಹಾಲಕ್ಕಿರಾಕು ಕಥಾಸಂಕಲನ ಸೇರ್ಪಡೆಗೊಂಡಿದೆ. ಇದು ಹಾಲಕ್ಕಿ ಜನರ ನಾಡಿಮಿಡಿತದ ಕಥಾಹಂದರವೆAದು ನಾನು ಭಾವಿಸಿಕೊಂಡಿದ್ದೇನೆ ಎಂಬ ಅಭಿಪ್ರಾಯ ಪಟ್ಟರು. ಜಿಲ್ಲಾ ಶಿಕ್ಷಕ ಸಂಘದ ಅಧ್ಯಕ್ಷ ಆನಂದು ಗಾಂವಕರ ಶಿಕ್ಷಕನಿಗೆ ಸಾಹಿತ್ಯದ ಪ್ರೀತಿ ಬೆಳೆದರೆ ಭಾಷೆಯ ಮೇಲಿನ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ ಎಂಬುದನ್ನು ಶ್ರೀಧರ ಗೌಡರು ತೋರಿಸಿಕೊಟ್ಟಿದ್ದಾರೆ ಎಂದರು.

RELATED ARTICLES  ಸಭಾ ಭವನದ ಸನಿಹವೇ ಪಲ್ಟಿಯಾಯ್ತು ಮದುವೆ ಟೆಂಪೋ..!


ಅಧ್ಯಕ್ಷತೆ ವಹಿಸಿದ್ದ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ವಾಸರೆ ಡಾ. ಶ್ರೀಧರ ಗೌಡ ರ ಕಥೆಗಳಲ್ಲಿ ಬಂಡಾಯದ ಧ್ವನಿ ಇದೆ. ಹೇಳ ಬೇಕಾದುದ್ದನ್ನು ಯಾವುದೇ ಮುಲಾಜಿಗೆ ಒಳಗಾಗದೆ ನೇರವಾಗಿಯೇ ಅಕ್ಷರಗಳ ಮೂಲಕ ಹೊರಹಾಕಿದ್ದಾರೆ. ಇಲ್ಲಿನ ತೇರು ಕಥೆಯಲ್ಲಿನ ಸಂಭಾಷಣೆಗಳು ಎರಡು ಮನಸ್ಥಿತಿಗಳ ನಡುವಿನ ಸಂಘರ್ಷವೆAಬAತೆ ಭಾಷವಾಗುತ್ತದೆ. ತಮ್ಮ ಮೂಲಭಾಷೆಯನ್ನೇ ಕಥೆಗಳ ಪಾತ್ರಗಳ ಮೂಲಕ ಹೇಳಿಸಿದ್ದು ತಮ್ಮತನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಪಿ. ಆರ್.ನಾಯ್ಕ ಹಾಲಕ್ಕಿ ರಾಕು ಪುಸ್ತಕ ಪರಿಚಯಿಸಿದರು. ಎಲ್ಲಾ ಕಥೆಗಳ ಮೇಲೆ ಸಿಂಹಾವಲೋಕನ ಮಾಡುತ್ತಾ ಎಲ್ಲಾ ಕಥೆಗಳು ಬುಡಕಟ್ಟುವಾಸನೆಯ ಸೊಗಡಿನಲ್ಲಿ ತಮ್ಮ ಮೂಲ ಸಂಸ್ಕೃತಿ, ಅಸಹಾಯಕತೆ ಜೊತೆ ಸಂಪ್ರದಾಯಗಳ ಸಂಕೋಲೆಯಿAದ ಹೊರಬರಲು ರಾಕು ಪಾತ್ರ ಚಿತ್ರಿತವಾಗಿಸುವಲ್ಲಿ ಕಥೆಗಾರರು ಯಶಸ್ವಿಯಾಗಿದ್ದಾರೆ ಎಂದು ಅಭಿಪ್ರಾಯ ಪಟ್ಟರು. ವೇದಿಕೆಯಲ್ಲಿದ್ದ ಕ.ಸಾ.ಪ. ತಾಲೂಕಾಧ್ಯಕ್ಷ ಸುಬ್ಬಯ್ಯ ನಾಯ್ಕ, ಕೃತಿಕಾರ ಡಾ.ಶ್ರೀಧರ ಗೌಡ ಉಪ್ಪಿನಗಣಪತಿ ಮಾತನ್ನಾಡಿದರು. ಪಿ.ಎಂ.ಮುಕ್ರಿ ಸ್ವಾಗತಿಸಿದರು. ಎಂ.ಎA. ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಪ್ರಮೋದ ನಾಯ್ಕ ವಂದನಾರ್ಪಣೆ ಮಾಡಿದರು.