ಶಿರಸಿ: ತಾಲೂಕಿನ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘ ಅಡಿಕೆ ಕೊಳೆ ರೋಗಕ್ಕೆ ಮದ್ದು ಸಿಂಪಡಣೆ ದೋಟಿಯ ಮೂಲಕ ರೈತರ ತೋಟಗಳಲ್ಲಿ ಮಾಡಿಸಿಕೊಡುತ್ತಿದ್ದು, ಹೆಗಡೆಕಟ್ಟಾ ಭಾಗದ ರೈತರಿಂದ ವ್ಯಾಪಕ ಪ್ರಶಂಸೆಗೆ ಒಳಗಾಗಿದೆ. ಮಳೆಗಾಲ ಪೂರ್ವ ಮದ್ದು ಸಿಂಪಡಣೆ ಹಾಗೂ ಮಳೆಗಾಲ ಆರಂಭದಲ್ಲಿ ಬೋರ್ಡೋ ಸಿಂಪಡಣೆಯ ಕಾರ್ಯವನ್ನು ಸೊಸೈಟಿ ಯೋಗ್ಯ ದರದಲ್ಲಿ ನಡೆಸಿಕೊಡುತ್ತಿದೆ. ಮಳೆಗಾಲ ಆರಂಭವಾದ ಕೂಡಲೇ ಒಂದೇ ಬಾರಿ ಕುಶಲಕರ್ಮಿಗಳ ತುಟಾಗ್ರತೆ ಉಂಟಾಗುತ್ತಿದ್ದು, ಈ ಕೊರತೆಯನ್ನು ನೀಗಿಸಲು ಸಂಘವು ಈ ತಂತ್ರಜ್ಙಾನದ ಮೊರೆ ಹೋಗಿದೆ ಇದರಿಂದ ಸಂಘದ ರೈತರಿಗೆ ಹಾಗೂ ಹೆಗಡೆಕಟ್ಟಾ ಭಾಗದ ರೈತರಿಗೆ ಅನುಕೂಲವಾಗುತ್ತಿದೆ ಎಂದು ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಪಿ.ಹೆಗಡೆ ಕೊಟ್ಟೆಗದ್ದೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಂಘವು ಗ್ರಾಮೀಣ ಭಾಗದಲ್ಲಿ ಇಂತಹ ಹಲವು ರೈತ ಉಪಯೋಗಿ ಯೋಜನೆ, ಯೋಚನೆ ಕಾರ್ಯಗತ ಗೊಳಿಸುವತ್ತ ಮುಂದುವರಿಯುತ್ತಿದೆ ಎಂದಿದ್ದಾರೆ.

RELATED ARTICLES  ಕಷ್ಟವಾಗುತ್ತಿದೆ ಜೀವನ ನಿರ್ವಹಣೆ; ಭಟ್ಕಳದಲ್ಲಿ ಅಕ್ಷರ ದಾಸೋಹ ನೌಕರರ ಅಳಲು


ಮದ್ದು ಸಿಂಪಡಣೆ ಯನ್ನು ಹೆಗಡೆಕಟ್ಟಾ ಸೊಸೈಟಿ ರೈತರಷ್ಟೇ ಅಲ್ಲದೆ ಹೆಗಡೆಕಟ್ಟಾ ಭಾಗದ ರೈತರು ಸಂಘದ ವತಿಯಿಂದ ಮಾಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಸಾಂಪ್ರದಾಯಿಕವಾಗಿ ಕಳೆದ ವರ್ಷಗಳಿಂದ ಬರುತ್ತಿದ್ದ ಖರ್ಚು ಕೂಡ ಕಡಿಮೆಯಾಗಿ ಉಳಿತಾಯವಾಗುತ್ತಿದೆ, ಅಡಿಕೆ ಗೊನೆಯ ನಾಲ್ಕೂ ಭಾಗಕ್ಕೆ ಮದ್ದು ಸಿಂಪಡಣೆ ಆಗುತ್ತದೆ ಮುಂದಿನ ದಿನಗಳಲ್ಲಿ ಇದೇ ಉಪಯುಕ್ತ ವಿಧಾನ ಎನಿಸಲಿದೆ ಎಂದು ರೈತರಾದ ಶ್ರೀಧರ ಹೆಗಡೆ ಮರಿಯಜ್ಜನಮನೆ, ಸುಬ್ರಾಯ ಹೆಗಡೆ ಮೂಡ್ಗಾರ, ಮಾಬ್ಲೇಶ್ವರ ಹೆಗಡೆ ಕರಡಿಕೈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತೀಯ ವಿಜ್ಙಾನ ಸಂಸ್ಥೆಯಲ್ಲಿ ಭೌತ ವಿಜ್ಙಾನಿ ಆಗಿರುವ ಕಲ್ಲಗದ್ದೆಯ ಡಾ. ಗೋಪಾಲಕೃಷ್ಣ ಹೆಗಡೆ ಸಮಯಕ್ಕೆ ಸರಿಯಾಗಿ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ರೈತಪರ ಈ ಮದ್ದು ಸಿಂಪಡಣೆಯ ಕಾರ್ಯವನ್ನು ಶ್ಲಾಘಿಸಿದ್ದಾರೆ.

RELATED ARTICLES  ಭಟ್ಕಳದಲ್ಲಿ ಮತ್ತೋರ್ವ ಮಹಿಳೆಗೆ ಕೊರೋನಾ ಪಾಸಿಟೀವ್..! 8ಕ್ಕೆ ಏರಿದ ಇಂದಿನ ಸೋಂಕಿತರ ಸಂಖ್ಯೆ.



ಮಳೆಗಾಲದಲ್ಲಿ ಏಕ ಕಾಲದಲ್ಲಿ ಆಗುವ ಕುಶಲಕಾರ್ಮಿಕರ ಕೊರತೆ ನೀಗಿಸಲು ಸಂಘವು ಮದ್ದು ಸಿಂಪಡಣೆ ಕಾರ್ಯವನ್ನು ಕಳೆದ ವರ್ಷದಿಂದಲೇ ನಡೆಸಿಕೊಂಡು ಬಂದಿದೆ – ಎಂ.ಪಿ.ಹೆಗಡೆ ಕೊಟ್ಟೆಗದ್ದೆ ಅಧ್ಯಕ್ಷ


ಮದ್ದು ಸಿಂಪಡಣೆ ಮಾಡಿಸಿಕೊಡುತ್ತಿರುವ ಹೆಗಡೆಕಟ್ಟಾ ಸೊಸೈಟಿ ಕಾರ್ಯ ರೈತರಿಗೆ ಮತ್ತು ಬೆಂಗಳೂರು ಸೇರಿದಂತೆ ಹೊರಗೆ ವಾಸಿಸಿ ಜಮೀನು ಹೊಂದಿರುವವರಿಗೆ ತುಂಬಾ ಅನುಕೂಲವೆನಿಸಿದೆ.
ಡಾ. ಗೋಪಾಲಕೃಷ್ಣ ಹೆಗಡೆ ವಿಜ್ಙಾನಿ ಭಾರತೀಯ ವಿಜ್ಙಾನ ಸಂಸ್ಥೆ