ಡಾ. ಎ.ವಿ.ಬಾಳಿಗಾ ಕಾಲೇಜು ಆಪ್ ಆರ್ಟ್ಸ್ ಎಂಡ್ ಸಾಯನ್ಸ್ ಅಲ್ಯುಮಿನಿ ಟ್ರಸ್ಟದ ಆಶ್ರಯದಲ್ಲಿ ಡಾ. ಎ.ವಿ.ಬಾಳಿಗಾ ಪದವಿ ಪೂರ್ವ ಕಾಲೇಜಿನ ಕಲಾ, ವಿಜ್ಞಾನ, ವಾಣಿಜ್ಯ ಹಾಗೂ ವಿದ್ಯಾಧಿರಾಜ ಪಾಲಿಟೆಕ್ನಿಕ್‌ನ ಒಟ್ಟೂ ೧೦೧ ವಿದ್ಯಾರ್ಥಿಗಳನ್ನು ಅವರ ಶಿಕ್ಷಣವನ್ನು ಮುಂದುವರೆಸಲು, ದಾನಿಗಳ ಅಪೇಕ್ಷೆಯಂತೆ ಅವರ ವಾರ್ಷಿಕ ಒಟ್ಟೂ ಫೀ ಶುಲ್ಕವನ್ನು ನೀಡಲಾಯಿತು. ಕಳೆದ ಜೂನ್ ೨೫ ರಂದು ಭವ್ಯ ದಿವ್ಯ ವರ್ಣರಂಜಿತ ಕಾರ್ಯಕ್ರಮವು ನಭೂತೋ ಎಂಬAತೆ ಜರುಗಿತು. ಡಾ. ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಕಾಲೇಜಿನ ಸಭಾಗೃಹದಲ್ಲಿ ಜರುಗಿದ ಕಾರ್ಯಕ್ರಮಕ್ಕೆ ಅಲ್ಯುಮಿನಿ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಎಚ್.ಜಿ .ವಿಜಯಕುಮಾರರು ವಿಡಿಯೋ ಸಮ್ಮೇಳನ ಮೂಲಕ ಟ್ರಸ್ಟಿನ ಮುಂದಿನ ಯೊಜನೆಗಳನ್ನು ಪ್ರಕಟಿಸಿದರು. ಮುಂಬರುವ ದಿನಗಳಲ್ಲಿ ಇದೇ ರೀತಿಯ ದಾನಿಗಳ ಪ್ರೋತ್ಸಾಹ, ಸಹಾಯ, ಸಹಕಾರವು ಲಭಿಸಿದ್ದಲ್ಲಿ, ಕೆನರಾ ಕಾಲೇಜು ಸೊಸೈಟಿಯ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತ ಶಿಕ್ಷಣ, ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿಯನ್ನು ಕೊಡುವ ದೂರದರ್ಶಿತ್ವವನ್ನು ವ್ಯಕ್ತಪಡಿಸಿದರು.
ವೇದಿಕೆಯ ಮೇಲಿದ್ದ ಟ್ರಸ್ಟಿನ ಕಾರ್ಯನಿರ್ವಾಹಕರಲ್ಲಿ ಓರ್ವರಾದ, ಪ್ರೇರಣಾ ಟ್ರಸ್ಟಿನ ಅಧ್ಯಕ್ಷರೂ, ಆದ ಬೆಂಗಳೂರಿನ ಶ್ರೀ ವಸಂತ ಭಟ್ಟರು ಅಲ್ಯುಮಿನಿ ಟ್ರಸ್ಟಿನ ಧ್ಯೇಯೋದ್ದೇಶದಲ್ಲಿ ಒಂದಾದ ಈ ದತ್ತು ಸ್ವೀಕಾರದ ಮಹತ್ತತೆಯನ್ನು ವಿವರಿಸಿದರು. ಇಂದು ದಾನಿಗಳು ತಮ್ಮನ್ನು ದತ್ತು ಸ್ವೀಕಾರ ಮಾಡಿದವರು ಇನ್ನೂ ಮುಂದೆ ಫಲಾನುಭವಿಗಳು ತಮ್ಮ ಶೈಕ್ಷಣಿಕ ಪ್ರತಿಭೆಯನ್ನು ಪಡೆಯುವಂತಾಗಬೇಕು ಎಂದರು. ಕೆನರಾ ಕಾಲೇಜು ಸೊಸೈಟಿಯ ಕಾರ್ಯಾಧ್ಯಕ್ಷರಾದ ಶ್ರೀ ದಿನಕರ ಕಾಮತರು ಸಂಸ್ಥೆಯ ಪ್ರಾರಂಭಿಕ ದಿನಗಳನ್ನು, ಸಂಸ್ಥಾಪಕರ ತ್ಯಾಗ, ದೂರದರ್ಶಿತ್ವವನ್ನು ನೆನೆಯುತ್ತಾ ಕೆನರಾ ಕಾಲೇಜು ಸೊಸೈಟಿಯ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ದತ್ತು ಸ್ವೀಕಾರ ಮಾಡಿರುವುದು ಅನುಕರಣೀಯ, ಅನುಸರಣೀಯ, ಶ್ಲಾಘನೀಯ, ಉತ್ತರಕನ್ನಡ ಜಿಲ್ಲೆಯ ಪ್ರಪ್ರಥಮ ಈ ಶಿಕ್ಷಣ ಸಂಸ್ಥೆಗೆ, ವಿದ್ಯಾಕಾಂಕ್ಷಿಯಾಗಿ ಬಂದ ಪರಸ್ಥಳೀಯ ಮಕ್ಕಳಿಗೆ ಅಂದು ಊರಿನ ವಿದ್ಯಾಭಿಮಾನಿಗಳು ಆಶ್ರಯವನ್ನಷ್ಟೇ ಅಲ್ಲ, ವಾರಾನ್ನದ ಮೂಲಕ ಪೋಷಿಸಿದ ಹೃದಯವಂತಿಕೆಯನ್ನು ಮೆರೆದಿದ್ದು ವಂದನೀಯ.
ಕೆನರಾ ಕಾಲೇಜು ಸೊಸೈಟಿಯ ಕಾರ್ಯದರ್ಶಿಗಳಾದ ಶ್ರೀ ಹನುಮಂತ ಕೃಷ್ಣ ಶಾನಭಾಗರು ಟ್ರಸ್ಟಿನ ಕಾರ್ಯಚಟುವಟಿಕೆಯನ್ನು ಪ್ರಶಂಸಿದರು. ಪ್ರಾಚಾರ್ಯರಾದ ಶ್ರೀಮತಿ ವೀಣಾಕಾಮತರು ಸರ್ವರನ್ನು ಈ ಸಂಧರ್ಬದಲ್ಲಿ ಸ್ವಾಗತಿಸುತ್ತಾ ಪರಿಚಯಿಸಿದರು. ಪ್ರೊ. ಗಿರೀಶ ನಾಯ್ಕ ಮತ್ತು ಪ್ರೊ. ಗಣೇಶ ನಾಯ್ಕರವರು ಕಾರ್ಯಕ್ರಮದ ನಿರೂಪಣೆಯನ್ನು ಸುಯೋಜಿತವಾಗಿ ಮಾಡಿದರು. ಪ.ಪೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಎನ್.ಜಿ.ಹೆಗಡೆಯವರು ಸಭೆಯನ್ನು ಸುವ್ಯವಸ್ಥಿತವಾಗಿ ಸಂಘಟಿಸಿದರು.ವಿದ್ಯಾಥಿರಾಜ ಪೊಲಿಟೆಕ್ನಿಕ್ ಪ್ರಾಂಶುಪಾಲರಾದ ಪ್ರೊ. ಎಸ್.ಎನ್.ಹೆಗಡೆಯವರ ವಂದನಾರ್ಪಣೆಯೊAದಿಗೆ ಕಾರ್ಯಕ್ರಮವು ಸಂಪನ್ನಗೊAಡಿತು. ಕಾರ್ಯಕ್ರಮದ ರೂವಾರಿಗಳಾದ ಅಲ್ಯುಮಿನಿ ಟ್ರಸ್ಟಿನ ಕಾರ್ಯದರ್ಶಿಗಳಾದ ಶ್ರೀಮತಿ ಜ್ಯೋತಿ ಪೈ, ಸಹಕಾರ್ಯದರ್ಶಿಗಳಾದ ಶ್ರೀಮತಿ ಜಯಶ್ರೀ ಶಿವಕುಮಾರ, ಕೋಶಾಧ್ಯಕ್ಷರಾದ ಶ್ರೀ ವಾಯ್. ವಿ. ಶಾನಭಾಗರ ಮತ್ತು ಎಕ್ಸಿಕ್ಯೂಟಿವ್ ಮೆಂಬರಾದ ಶ್ರೀ ಮುರಲಿ ಮಾಸ್ತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ೧೦೧ ಫಲಾನುಭವಿಗಳಿಗೆ ಅಂದು ಅಂತೂ ರೂ. ೭ ಲಕ್ಷ ೨೫ಸಾವಿರವನ್ನು ವಿತರಿಸಲಾಯಿತು. ಸಭೆಗೆ ಆಹ್ವಾನಿಸಿದ ಫಲಾನುಭವಿಗಳ ಪಾಲಕರು ಮುಕ್ತಕಂಠದಿAದ ದಾನಿಗಳ ಆಶೋತ್ತರವನ್ನು ಶ್ಲಾಘಿಸಿದರು.
ಇದೇ ತಿಂಗಳ ಜೂನ್ ೧೧ ರಂದು ಬ್ರಹನ್ ನಗರಿ ಮುಂಬೈಯ ವಡಾಳಾದ ದ್ವಾರಕಾನಾಥ ಸಭಾಗೃಹದಲ್ಲಿ ಟ್ರಸ್ಟಿನ ಬ್ರಹತ್ ಸಮ್ಮೇಳನವು ಜರುಗಿತು. ಹಳೇ ವಿದ್ಯಾರ್ಥಿಗಳ ಪರಸ್ಪರ ಮಿಲನ ವಿದ್ಯಾರ್ಥಿ ಜೀವನದಲ್ಲಿಯ ಮೆಲುಕು ಅಲ್ಯುಮನಿಯ ಧ್ಯೇಯೋದ್ದೇಶಗಳ ಮುಕ್ತ ಸಂವಹನ ಚಿಂತನ ಮಂಥನವು ಜರುಗಿತು. ಟ್ರಸ್ಟಿನ ಅಧ್ಯಕ್ಷರಾದ ಶ್ರೀ ವಿಜಯಕುಮಾರರು ಇಲ್ಲಿಯ ತನಕ ಕೇವಲ ೧ ವರ್ಷದಲ್ಲಿ ಟ್ರಸ್ಟ್ ಮಾಡಿದ ಸಾಧನೆ, ಕಾರ್ಯಾಚರಣೆ ಹಾಗೂ ಮುಂಬರುವ ದಿನಗಳಲ್ಲಿ ಮಾಡಬೇಕಾದ ಕಾರ್ಯದ ಸ್ಥೂಲ ಪರಿಚಯವನ್ನು ನೀಡಿದರು. ಸಭೆಯಲ್ಲಿ ಕೆನರಾ ಕಾಲೇಜು ಸೊಸೈಟಿಯ ಕಾರ್ಯಾಧ್ಯಕ್ಷರಾದ ಶ್ರೀ ದಿನಕರ ಕಾಮತರು ಸಂದರ್ಭೋಚಿತವಾಗಿ ಮಾತನಾಡಿದರು. ಶ್ರೀಮೋಹನ ಬಿಕ್ಕು ಕಾಮತರು ಸ್ವಾಗತಿಸಿದರು. ಸಭೆಯಲ್ಲಿ ಅತ್ಯಂತ ಹಿರಿಯರೂ, ಖ್ಯಾತ ಎಂಜಿನಿಯರೂ, ದಾನಿಗಳೂ ಆದ ಕುಮಟಾದ ಶ್ರೀ ನಾರಾಯಣ ವ್ಹಿ ನಾಯಕ ಬೆಣ್ಣೆಯವರು ಟ್ರಸ್ಟಿನ ಪಾರದರ್ಶಕತೆ, ದೂರದರ್ಶಿತ್ವ, ಸಂಘಟನಾ ಚತುತರತೆಯನ್ನು ಮುಕ್ತ ಮನಸ್ಸಿನಿಂದ ಶ್ಲಾಘಿಸಿದರು. ಅಧ್ಯಕ್ಷರಾದ ಶ್ರೀ ವಿಜಯಕುಮಾರವರು ಸೇರಿದ ಸದಸ್ಯರಿಂದ ಬಂದ ಸಲಹೆ ಸೂಚನೆಗಳನ್ನು ಸ್ವೀಕರಿಸಿ ಜೊತೆಗೆ ಸರ್ವರ ಸಂಶಯಗಳನ್ನು ನಿವಾರಿಸಿದರು. ಸಂಘಟಕರಲ್ಲಿ ಓರ್ವರಾದ ಶ್ರೀ ಅರವಿಂದ ಕಾಮತರ ವಂದನಾರ್ಪಣೆಯೊAದಿಗೆ ಸಭೆಯು ಸಂಪನ್ನಗೊAಡಿತು. ವೇದಿಕೆಯ ಮೇಲೆ ಟ್ರಸ್ಟಿನ ಕಾರ್ಯದರ್ಶಿಗಳಾದ ಶ್ರೀಮತಿ ಜ್ಯೋತಿ ಪೈ ಹಾಗೂ ಶ್ರೀ ವಸಂತ ಭಟ್ಟರು ಇದ್ದರು.