ಶಿರಸಿ: ಮನೆಯ ಹತ್ತಿರ ಅಡಿಕೆ ತೋಟದಲ್ಲಿ ಮರಕ್ಕೆ ಔಷಧಿ ಸಿಂಪಡಿಸುತ್ತಿರುವಾಗ ಮರದ ಮೇಲ್ಗಡೆ ಇದ್ದ ವಿದ್ಯುತ್ ಲೈನ್‌ಗೆ ದೋಟಿ ತಗುಲಿ ವ್ಯಕ್ತಿಯೋರ್ವ ಸಾವು ಕಂಡ ಘಟನೆ ತಾಲೂಕಿನ ರಾಗಿಹೊಸಳ್ಳಿಯಲ್ಲಿ ಸಂಭವಿಸಿದೆ.
ಶ್ರೀಧರ ವಿಷ್ಣು ಗೌಡ (45) ಎಂಬಾತನೇ ಸಾವು ಕಂಡ ವ್ಯಕ್ತಿಯಾಗಿದ್ದಾನೆ. ಈತ ಬೆಳಿಗ್ಗೆ 11 ಗಂಟೆ ಸುಮಾರಿಗೆ ಮನೆಯ ತೋಟಕ್ಕೆ ಔಷಧಿ ಸಿಂಪಡಿಸುತ್ತಿರುವಾಗ ಆಕಸ್ಮಿಕವಾಗಿ ದೋಟಿ ವಿದ್ಯುತ್ ಲೈನ್‌ಗೆ ತಗುಲಿ ವಿದ್ಯುತ್ ಸ್ಪರ್ಶದಿಂದ ಸಾವು ಕಂಡಿದ್ದಾನೆ. ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿ.ಎಸ್.ಐ. ಈರಯ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.