ಗೋಕರ್ಣ: ಗೋಕರ್ಣ ಕಡಲತೀರದಲ್ಲಿ ಅದ್ಭುತ ಕೆತ್ತನೆಯ ದುರ್ಗಾದೇವಿ ಶಿಲಾ ಮೂರ್ತಿಯೊಂದು ದೊರೆಕಿದೆ ಎಂದು ತಿಳಿದುಬಂದಿದೆ. ಈ ಮೂರ್ತಿಯನ್ನು ಯಾರೋ ಸಮುದ್ರದಲ್ಲಿ ವಿರ್ಸಜನೆ ಮಾಡಿ ಹೋಗಿರಬಹುದು ಎಂದು ಅಂದಾಜಿಸಲಾಗಿದೆ.
ಸಮುದ್ರದ ನೀರಿನಲ್ಲಿ ಪ್ರವಾಸಿಗರು ಆಟವಾಡುತ್ತಿರುವ ಸಮಯದಲ್ಲಿ ಈ ಮೂರ್ತಿಯು ಕಾಲಿಗೆ ತಾಗಿದೆ. ತಕ್ಷಣವೇ ಈ ಮೂರ್ತಿಯನ್ನು ದಡಕ್ಕೆ ತಂದಿದ್ದಾರೆ ಎನ್ನಲಾಗಿದೆ. ಮೂಗಿಗೆ ಚಿನ್ನದ ಮೂಗುತಿ ಇರುವ ಬಹಳ ಆಕರ್ಷಕವಾದ ದೇವಿಯ
ವಿಗ್ರಹ ಇದಾಗಿದೆ.ವಿಗ್ರಹವನ್ನು ನೋಡಲು ಸ್ಥಳೀಯರು ಮತ್ತು ಪ್ರವಾಸಿಗರು ಮುಗಿಬಿದ್ದಿದರು ಎಂದು ವರದಿಯಾಗಿದೆ.
ಮೂರ್ತಿ ಭಿನ್ನವಾದಾಗ ನೂತನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹಳೆಯದನ್ನು ಸಮುದ್ರದಲ್ಲಿ ವಿಸರ್ಜಿಸುವುದು ವಾಡಿಕೆ ಹಾಗಾಗಿ ಈ ಮೂರ್ತಿ ಸಹ ಹೀಗೇ ವಿಸರ್ಜಸಿರಬಹುದು ಎಂದು ಅಂದಾಜಿಸಲಾಗಿದೆ.