ಹೊನ್ನಾವರ : ಹಳದೀಪುರ ಬಗ್ರಾಣಿ ಕ್ರಾಸ್ ಹತ್ತಿರ ಬೆಳ್ಳಂಬೆಳಿಗ್ಗೆ ಬೃಹತ್ ಗಾತ್ರ ಅಶ್ವತ ಮರವೊಂದು ಮನೆಯ ಮೇಲೆ ಬಿದ್ದ ಪರಿಣಾಮ ಮನೆಯು ಸಂಪೂರ್ಣ ಜಖಂ ಗೊಂಡಿದೆ ಎನ್ನಲಾಗಿದೆ. ಹಳದೀಪುರ ಬೈಗಾರಕೇರಿಯಲ್ಲಿ ಗಂಗಾಧರ ಶೇಟ್ ರವರ ಮನೆಯ ಮೇಲೆ ಮರ ಉರುಳಿ ಬಿದ್ದದ ಪರಿಣಾಮ ಮನೆಯು ಸಂಪೂರ್ಣ ಜಖಂ ಗೊಂಡಿದೆ.
ಈ ಮನೆಯಲ್ಲಿ ಬಾಡಿಗೆಗೆಂದು ವಾಸವಿದ್ದ ಆರು ಮಂದಿಗೆ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸುಂದರಿ ಪಿ.ಶೇಟ್(77), ಅಖಿಲೇಶ್ ಅರುಣ ಶೇಟ್(9), ರೂಪಾ ಶೇಟ್(49)ಇವರಿಗೆ ತಲೆಗೆ ಪೆಟ್ಟುಬಿದ್ದಿದೆ. ಯೋಗೇಶ(35) ಅನಿತಾ ಯೋಗೇಶ ಹರಿಕಾಂತ(28), ಅರುಣ್ ಯೋಗೇಶ (3)ಗೂ ಗಾಯಗೊಂಡವರು ಎಂದು ತಿಳಿದುಬಂದಿದೆ.
ಗಾಯಗೊಂಡವರೆಲ್ಲ ಗಂಗಾಧರ ಶೇಟ್‌ರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಮರ ಬಿದ್ದ ಪರಿಣಾಮ ಎಂಟು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ, ಇದರಿಂದಾಗಿ ವಿದ್ಯುತ್ ಸಂಪರ್ಕವು ಕಡಿತವಾಗಿದೆ.
ಇದರ ಸಮೀಪದಲ್ಲೆ ಇರುವ ಇನ್ನೊಂದು
ಮರವು ಅಪಾಯವನ್ನು ಉಂಟು ಮಾಡುವ
ಸಾಧ್ಯತೆ ಇರುದರಿಂದ ಇಲಾಖೆಯ ಅಧಿಕಾರಿಗಳು ಮುಂಜಾಗ್ರತೆಗಾಗಿ ಆ ಮರವನ್ನು ಕಟಾವು ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.