ಗೋಕರ್ಣ: ಕಡಲತೀರದ ರುದ್ರಪಾದ ಕಲಿಯಪ್ಪನ ಕಟ್ಟೆ ಹತ್ತಿರ ಇರುವ ಹೊಟೇಲ್ ಅಗ್ನಿಗೆ ಆಹುತಿ ಆಗಿರುವ ಘಟನೆ ನಡೆದಿದೆ ಎನ್ನಲಾಗಿದೆ.ನಿನ್ನೆ ಬೆಳಗಿನ ಜಾವದಲ್ಲಿ ಹೊಟೇಲ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ವಸತಿ ಮತ್ತು ಹೊಟೇಲ್ ಕಟ್ಟಡಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಅದೃಷ್ಟ ವಶಾತ್ ಯಾವುದೇ ಜೀವಾಪಾಯವಿಲ್ಲ ಎಂದು ತಿಳಿದು ಬಂದಿದೆ.
ಈ ಹೊಟೇಲ್ ನ್ನು ಮಂಗಳೂರು ಮೂಲದವರು ನಡೆಸುತ್ತಿದ್ದರು. ಯಾರು ಇಲ್ಲದ ಸಮಯದಲ್ಲಿ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ಈ ಅವಘಡವೂ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ನಂತರ ಸ್ಥಳಕ್ಕೆ ಆಗಮಿಸಿದ ಗೋಕರ್ಣ ಪೊಲೀಸ್‌ರು ಈ ಘಟನೆಯನ್ನು ಪರಿಶೀಲಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.