ಹೊನ್ನಾವರ: ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣವು ಹೊನ್ನಾವರ ಪಟ್ಟಣದ ಲಯನ್ಸ್ ಸಭಾಭವನದಲ್ಲಿ ನಡೆಯಿತು ಎಂದು ತಿಳಿದು ಬಂದಿದೆ. ಅಧ್ಯಕ್ಷರಾಗಿ ಕೆ.ಸಿ.ವರ್ಗೀಸ್, ಕಾರ್ಯದರ್ಶಿಯಾಗಿ ರಾಜೇಶ ಸಾಳೇಹಿತ್ತಲ, ಖಜಾಂಚಿಯಾಗಿ ರೋಶನ್ ಶೇಟ್ ಪ್ರಮಾಣವಚನ ಸ್ವೀಕರಿಸಿದರು ಎನ್ನಲಾಗಿದೆ. ಪದಗ್ರಹಣ ಅಧಿಕಾರಿ ಎಮ್ ಜೆ ಎಫ್ ಲಯನ್ ನೀಲಕಂಠ ಹೆಗಡೆಯವರು ಮಾತನಾಡಿ, ಲಯನ್ಸ್ ಸಂಸ್ಥೆ ಸಮಾಜದಲ್ಲಿ ಒಂದು ಶ್ರೇಷ್ಠತೆಯಿಂದ ಕೂಡಿದ್ದು,ತನ್ನ ಗುಣಮಟ್ಟದಿಂದ ತನ್ನ ಸದಸ್ಯರನ್ನು ರೂಪಿಸುತ್ತಿದೆ ಎಂದರು.
ಒಂದು ಸಂಸ್ಥೆಯ ಸಾಧನೆಯನ್ನು ಒಂದೂಗೂಡಿಸಿ ಯಶಸ್ಸನ್ನು ಕಂಡುಕೊಳ್ಳಬೇಕಾದರೆ ಎಲ್ಲ ರೀತಿಯ ವಾತಾವರಣ ನಿರ್ಮಾಣ ಮಾಡಬೇಕು. ನಮ್ಮಬದುಕಿನಲ್ಲಿ ನಾವು ಅತ್ಯಂತ
ಸಮರ್ಥವಾದಂತ ಒಂದು ಸಂಸ್ಥೆಯನ್ನ ನಿರ್ಮಾಣ ಮಾಡಬೇಕು ಎಂದರು.
ನಂತರ ಮಾತನಾಡಿದ ಪಿಎಮ್ ಜೆ ಎಫ್ ಲಯನ್ ಡಾ.ಕೀರ್ತಿ ನಾಯ್ಕರವರು, ನಾವು ನೀಡುವ ದಾನ ಯಾರಿಗೆ ತಲುಪುತ್ತದೆ ಮತ್ತು ಅದನ್ನು ಪಡೆದವರಿಗೆ ಇದು ಯಾರು ನೀಡಿದ್ದು ಎಂದು ತಿಳಿಯದು. ಆದರು ಇಲ್ಲಿ ನಮ್ಮಸೇವೆ ನಿರಂತರವಾಗಿರುತ್ತದೆ ಎಂದರು ಎಂದು ತಿಳಿದುಬಂದಿದೆ.
ನಂತರ ಸಾಧಕರನ್ನು ಸನ್ಮಾನಿಸಲಾಯಿತು. ಪದಗ್ರಹಣ ನಂತರ ನೂತನ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಸಿ ವರ್ಗಿಸ್ ಮಾತನಾಡಿ, ನಾನು ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವುದರಿಂದ, ಈ ಬಾರಿಯ ನನ್ನ ಸೇವೆ ಹೆಚ್ಚಾಗಿ ಇದೇ ಕ್ಷೇತ್ರಕ್ಕಾಗಿದೆ ಎಂದರು. ನನಗೆ ಎಲ್ಲರೂ ಸಹಾಯ, ಸಹಕಾರ ನೀಡಿದರೆ ಉತ್ತಮವಾಗಿ ಸೇವೆ ನೀಡಲು ಸಾಧ್ಯ ಎಂದರು. ಈ ಕ್ಲಬ್ ಮೂಲಕ ಸೇವೆ ಸಲ್ಲಿಸುವುದೇ ನನ್ನ
ಭಾಗ್ಯ ಎಂದರು ಎನ್ನಲಾಗಿದೆ.
ಲಿಯೋ ಕ್ಲಬ್ ನ ನೂತನ ಅಧ್ಯಕ್ಷರಾಗಿ ಧನ್ಯಾಭಟ್, ಕಾರ್ಯದರ್ಶಿಯಾಗಿ ಸಂದೇಶ ಸದಾನಂದ ನಾಯ್ಕ, ಖಜಾಂಚಿಯಾಗಿ ಚೈತ್ರಾ ಬೆಳಕೊಂಡ ಪ್ರಮಾಣ ವಚನ ಸ್ವೀಕರಿಸಿದರು ಎಂದು ತಿಳಿದು ಬಂದಿದೆ.
ಈ ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ರಾಜೇಶ್ ಸಾಳೆ ಹಿತ್ತಲ್, ಖಜಾಂಚಿ ರೋಷನ್ ಶೇಟ್, ಮಾಜಿ ಲಯನ್ಸ್ ಕ್ಲಬ್ ಅಧ್ಯಕ್ಷ ವಿನೋದ್ ನಾಯ್ಕ, ಲಯನ್ ನಾಗರಾಜ ಭಟ್
ಉಪಸ್ಥಿತರಿದ್ದರು ಎಂದು ವರದಿಯಾಗಿದೆ.