ಬೆಂಗಳೂರು: ಕರ್ನಾಟಕ ಶಿಕ್ಷಣ ಇಲಾಖೆಯು
15,000 ಶಿಕ್ಷಕರ ನೇಮಕಾತಿಗಾಗಿ ಸಿಇಟಿ 2022
ಪರೀಕ್ಷೆಯನ್ನು ನಡೆಸಿದ್ದು,ಸಿಇಟಿಯ ಪರೀಕ್ಷೆ
ಫಲಿತಾಂಶ ಅಂದರೆ ಆಯ್ಕೆ ಪಟ್ಟಿಯನ್ನು ಜುಲೈ ಕೊನೆಯ ವಾರದಲ್ಲಿ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆವೆಂದು ತಿಳಿದು ಬಂದಿದೆ.

ಸಿಇಟಿ ಪರೀಕ್ಷೆಯ ಮೌಲ್ಯಮಾಪನದ ಕಾರ್ಯ ನಡೆಯುತ್ತಿದ್ದು, ಈಗಾಗಲೇ ಎರಡು ಪತ್ರಿಕೆಯ ಮೌಲ್ಯ ಮಾಪನ ಮುಗಿದಿದೆ. ಜುಲೈ ಕೊನೆಯ ವಾರದಲ್ಲಿ ಮೌಲ್ಯಮಾಪನ ಕಾರ್ಯವನ್ನು
ಪೂರ್ಣಗೊಳಿಸಿ ಕಟ್ ಆಫ್ ಪರ್ಸೆಂಜೇಜ್ ಮತ್ತು ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡುವ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಸಚಿವ ಬಿಸಿ ನಾಗೇಶ್ ಮಾಹಿತಿಯನ್ನು
ನೀಡಿದ್ದಾರೆ ಎನ್ನಲಾಗಿದೆ.

ಶಿಕ್ಷಕರ ಹುದ್ದೆ ನೇಮಕಾತಿ 2022ರ ಪರೀಕ್ಷೆಯು ಮೇ21 ಮತ್ತು ಮೇ22 ನಡೆದಿದೆ. ಕರ್ನಾಟಕ ಶಿಕ್ಷಕರ ನೇಮಕಾತಿ ಹುದ್ದೆ 2022ರ ಪರೀಕ್ಷೆಗೆ 106083 ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿದ್ದು,ಈ ಪೈಕಿ ಬೇರೆ ಬೇರೆ ವಿಷಯಕ್ಕೆ
ಸಂಬಂಧಿಸಿದಂತೆ ಅರ್ಜಿಯನ್ನು ಸಲ್ಲಿದ್ದವರು 31967 ಅಭ್ಯರ್ಥಿಗಳು, ಶಿಕ್ಷಕ ಹುದ್ದೆಗೆ ಅರ್ಜಿಗಳ ಪರಿಗಣನೆ ಆಗಿರುವುದು 74116 ಮಂದಿ ಅಭ್ಯರ್ಥಿಗಳದ್ದು, ಪರೀಕ್ಷೆಗೆ ಹಾಜರಾದವರ ಸಂಖ್ಯೆ 69159 ಅಭ್ಯರ್ಥಿಗಳು, ಪರೀಕ್ಷೆಗೆ ಗೈರಾದವರು 4957 ಅಭ್ಯರ್ಥಿಗಳು.

RELATED ARTICLES  ನಾಳೆ ಶಿರಸಿಯಲ್ಲಿ ವಿದ್ಯುತ್ ವ್ಯತ್ಯಯ: ಸಹಕರಿಸಲು ಮನವಿ

6 ರಿಂದ 8 ನೇ ತರಗತಿಗೆ ಪದವೀಧರ
ಶಿಕ್ಷಕರ ನೇಮಕಾತಿಗಾಗಿ ಆಯ್ಕೆ ಪ್ರಾಧಿಕಾರವು
ವಿಷಯವಾರು ಮತ್ತು ಮಾಧ್ಯಮವಾರು ಪ್ರವರ್ಗವಾರು ಅಧಿಸೂಚನೆಯಂತೆ ಸ್ಪರ್ಧಾತ್ಮಕ ಪರೀಕ್ಷೆ, ಶಿಕ್ಷಕರ ಅರ್ಹತಾ
ಪರೀಕ್ಷೆ , ಪದವಿ ಶಿಕ್ಷಣ ಮತ್ತು ಶಿಕ್ಷಕರರ ಶಿಕ್ಷಣ (B.ed) ಕೋರ್ಸ್ ಗಳಲ್ಲಿ ಪಡೆದಿರುವ ಶೇಕಡವಾರು ಅಂಕಗಳನ್ನು ಪರಿಗಣಿಸಿ ವೆಸ್ಟೇಜ್
ಉಪಯೋಗಿಸಿ ಲೆಕ್ಕಹಾಕಿ ಡಿವೈಡ್ ಪರ್ಸೆಂಟೇಜ್ ಲೆಕ್ಕಹಾಕಿ ಅದರ ಆಧಾರದಲ್ಲಿ ಶಿಕ್ಷಕರನ್ನು ಆಯ್ಕೆ ಮಾಡಲಾಗುತ್ತದೆ.

ಶಿಕ್ಷಕರ ಕೋರ್ಸ್ ಎರಡು ವರ್ಷ ವ್ಯಾಸಂಗ
ಮಾಡಿದವರ ಆಯ್ಕೆಯ ಹೀಗೆ ಮಾಡುತ್ತಾರೆ.
*ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕ 50%
*ಟಿಇಟಿಯಲ್ಲಿ ಪಡೆದ ಅಂಕ 20%
*ಪದವಿಯಲ್ಲಿ ಪಡೆದದ ಅಂಕ 20%
*ಶಿಕ್ಷಕರ ಕೋರ್ಸ್ ನಲ್ಲಿ ಪಡೆದ ಅಂಕ 10%, ಎಲ್ಲಾ
ಶೇಕಡವಾರು ಅಂಕಗಳನ್ನು ಪರಿಗಣಿಸಿ 100% ಗೆ ಲೆಕ್ಕಹಾಕಿ ಆಯ್ಕೆ ಪಟ್ಟಿಯನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಲಿದೆ.

RELATED ARTICLES  ಕುಮಟಾದಲ್ಲಿ ವಿದ್ಯುತ್ ವ್ಯತ್ಯಯ : ಪ್ರಕಟಣೆ

ನಾಲ್ಕು ವರ್ಷದ ಕೋರ್ಸ್ ಮಾಡಿರುವ
ಅಭ್ಯರ್ಥಿಗಳು ಶಿಕ್ಷಕರ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿದ್ದರೇ
ಅವರ ಆಯ್ಕೆ ಹೀಗೆ ನಿರ್ಧರಿಸುತ್ತಾರೆ.
*ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕ 50%
*ಟಿಇಟಿಯಲ್ಲಿ ಪಡೆದ ಅಂಕ 20%
*ನಾಲ್ಕು ವರ್ಷದ ಶಿಕ್ಷಣ ಕೋರ್ಸ್ ಮಾಡಿದವರು 30%
ಹೀಗೆ ಅಭ್ಯರ್ಥಿಗಳ ಶೇಕಡಾವಾರು ಅಂಕಗಳನ್ನು ಲೆಕ್ಕಹಾಕಿ
100% ಆಗಿ ಪರಿಗಣಿಸಿ ಶಿಕ್ಷಕರನ್ನು ಆಯ್ಕೆ
ಮಾಡಲಾಗುತ್ತದೆ.
ಶಿಕ್ಷಕರು ಪದವಿಯಲ್ಲಿ ಪಡೆದ ಅಂಕ ಶೇಕಡವಾರು,
ಬಿ.ಇಡಿಯಲ್ಲಿ ಪಡೆದಿರುವ ಅಂಕ ಶೇಖಡವಾರು,
ಟಿಇಟಿಯಲ್ಲಿ ಪಡೆದ ಅಂಕ ಶೇಕಡವಾರು, ಮತ್ತು ಸಿಇಟಿಯಲ್ಲಿ ಪಡೆದ ಶೇಖಡ 50ರಷ್ಟು ಲೆಕ್ಕವನ್ನು ಹಾಕಿ ಕಟ್ ಆಫ್ ಪರ್ಸೆಂಟೇಜ್ ಮತ್ತು ಆಯ್ಕೆ ಪಟ್ಟಿಯನ್ನು ಬಿಡುಗಡೆ
ಮಾಡಲಾಗುತ್ತದೆ ಎಂದು ವರದಿಯಾಗಿದೆ.