ದಾಂಡೇಲಿ: ಪ್ರವಾಸಿಗರನ್ನು ಹೊತ್ತು ತಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿರುವ ಹೊಂಡಕ್ಕಿಳಿದ ಘಟನೆ ತಾಲ್ಲೂಕಿನ ಕೋಗಿಲಬನ ರಸ್ತೆಯಲ್ಲಿ ನಡೆದಿದೆ.

ಬೆಂಗಳೂರಿನಿಂದ ಬಡಕಾನಶಿರಡಾದಲ್ಲಿರುವ ರೆಸಾರ್ಟಿಗೆ ಪ್ರವಾಸಿಗರನ್ನು ಹೊತ್ತುಕೊಂಡು ತೆರಳುತ್ತಿದ್ದ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹೊಂಡಕ್ಕಿಳಿದಿದೆ. ಪರಿಣಾಮವಾಗಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ ಯಾವುದೇ ಪ್ರಾಣಾಪಾಯವಾಗಿಲ್ಲ.

RELATED ARTICLES  ರಂಗೇರುತ್ತಿದೆ ಚುನಾವಣಾ ಕಣ: ಅಬಕಾರಿ ಅಕ್ರಮ ತಡೆಯಲು ರಚನೆಯಾಯ್ತು ತಾಲೂಕಾವಾರು ಅಧಿಕಾರಿಗಳ ತಂಡ

ಬಸ್ ಹೊಂಡಕ್ಕಿಳಿದ ಪರಿಣಾಮವಾಗಿ ವಾಹನ ಸಂಚಾರಕ್ಕೆ ಕೆಲ ಹೊತ್ತು ಅಡಚಣೆಯಾಗಿತ್ತು.ಅನಂತರ ಸ್ಥಳೀಯರ ಸಹಕಾರದಲ್ಲಿ ಕ್ರೇನ್ ತರಿಸಿ, ಅದರ ಮೂಲಕ ಬಸ್ಸನ್ನು ಮೇಲಕ್ಕೆತ್ತಲಾಗಿದೆ. ಇಲ್ಲಿ ರಸ್ತೆ ಹದಗೆಟ್ಟಿರುವುದರಿಂದ ಪ್ರತಿನಿತ್ಯ ಒಂದಲ್ಲಾ ಒಂದು ರೀತಿಯಲ್ಲಿ ಅವಘಡಗಳು ಸಂಭವಿಸುವಂತಾಗಿದೆ.

RELATED ARTICLES  ಶಿರಸಿ- ಸಿದ್ಧಾಪುರ ಕ್ಷೇತ್ರದಲ್ಲಿ ಭೀಮಣ್ಣ ನಾಯ್ಕ ಪರ ಮತ ಯಾಚಿಸಿದ ಆರ್.ವಿ ದೇಶಪಾಂಡೆ.