ಶಿರಸಿ: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಕುಂದಾಪುರದ ಮನೋಜ್ ನರಸಿಂಹ ಪೂಜಾರಿ ಬಂಧಿತ ಆರೋಪಿಯಾಗಿದ್ದಾನೆ. ತಾನು ಹುಬ್ಬಳ್ಳಿ ಕಸ್ಟಮ್ ವಿಭಾಗದ ಅಧಿಕಾರಿ ಎಂದು ಸಾರ್ವಜನಿಕರಿಗೆ ಈತ ಸುಳ್ಳು ಹೇಳಿ ಸುಮಾರು 7,70,000 ರೂಪಾಯಿಗಳನ್ನು ಪಡೆದು ಮೋಸ ಮಾಡಿದ ಬಗ್ಗೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ.
ಪೊಲೀಸರು ತನಿಖೆ ಚುರುಕು ಗೊಳಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸಿಪಿಐ ರಾಮಚಂದ್ರ ನಾಯಕ ನೇತೃತ್ವದಲ್ಲಿ ಪಿ.ಎಸ್.ಐ., ಈರಯ್ಯ, ಡಿ. ಎನ್. ಪ್ರೊ.ಪಿ.ಎಸ್. ಐ., ದೇವೇಂದ್ರ ನಾಯ್ಕ ಸಿಬ್ಬಂದಿಗಳಾದ ಚೇತನ್.ಎಚ್.,ಮಹದೇವ ನಾಯಕ.ಗಣಪತಿ ನಾಯ್ಕ ,ಕುಬೇರಪ್ಪ, ಪ್ರದೀಪ್, ರೇವಣಕರ್, ಶ್ರೀಧರ ,ಅರುಣ, ಲಕ್ಷ್ಮಪ್ಪ, ಚೇತನ ಪಾಲ್ಗೊಂಡಿದ್ದರು ಎಂದು ವರದಿಯಾಗಿದೆ.