ಪೆಟ್ರೋಲ್ ದುಬಾರಿಯಾಗುತ್ತಿರುವ ಕಾಲದಲ್ಲಿ ಇದೀಗ ಉತ್ತರಕನ್ನಡದಲ್ಲಿ ಇ ವೆಹಿಕಲ್ಸ್ ಹೊಸ ಕ್ರಾಂತಿ ಮೂಡಿಸುತ್ತಿದೆ. ಅದರಂತೆ ಹೊನ್ನಾವರ ಹಾಗೂ ಭಟ್ಕಳ ಭಾಗದಲ್ಲಿ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಶ್ರೀನಿವಾಸ ಇ ವೆಹಿಕಲ್ಸ್ ಹೊಸ ಕ್ರಾಂತಿ ಮೂಡಿಸುತ್ತಿದೆ. ಶ್ರೀನಿವಾಸ ಇ ವೆಹಿಕಲ್ಸ್ ಭಟ್ಕಳ ಹಾಗೂ ಹೊನ್ನಾವರದಲ್ಲಿ ಸುಸಜ್ಜಿತ ಶೋರೂಂಗಳನ್ನು ಹೊಂದಿದ್ದು ,ಹೈದರಾಬಾದ್ ಮೂಲದ ಪ್ಯೂರ್ ಇವಿ ಕಂಪನಿಯ ಎಕ್ಸ್ ಕ್ಲ್ಯೂಸಿವ್ ಡೀಲರ್ ಶಿಪ್ ಆಗಿರುತ್ತದೆ.
ಪ್ಯೂರ್ ಇವಿ ಕಂಪನಿಯು ಭಾರತದಾದ್ಯಂತ 200 ಕ್ಕೂ ಹೆಚ್ಚು ಡೀಲರ್‌ಶಿಪ್ ಗಳನ್ನು ಹೊಂದಿದ್ದು 50 ಸಾವಿರಕ್ಕೂ ಹೆಚ್ಚು ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳನ್ನು ಮಾರಾಟ
ಮಾಡಿರುತ್ತದೆ. ಪ್ಯೂರ್ ಇ ವಿ ಕಂಪನಿಯು 2 ಸ್ಕೂಟರ್ ಮಾದರಿಯ ಹಾಗೂ ಒಂದು ಬೈಕ್ ಮಾದರಿಯ ವಾಹನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ.
ಇ ಪ್ಲುಟೊ 7G ಮತ್ತು ಇ ಟ್ರಾನ್ಸ್ ನಿಯೋ ಎನ್ನುವ ಎರಡು ಸ್ಕೂಟರ್ ಮಾದರಿಗಳಾಗಿದ್ದು, ಎರಡೂ ವಾಹನಗಳು ನೋಡಲು ಬೇರೆ ಬೇರೆ ಇದ್ದು, ಸಮನಾದ ಲಕ್ಷಣಗಳನ್ನು ಹೊಂದಿವೆ. ಎರಡೂ ವಾಹನಗಳು ಒಂದು ಫುಲ್ ಚಾರ್ಜ್ ನಲ್ಲಿ 120 ಕಿ.ಮೀ. ಗಳನ್ನು ಕ್ರಮಿಸುವ ಕ್ಷಮತೆ ಹೊಂದಿದ್ದು, 60 kmph ನ ಟಾಪ್ ಸ್ಪೀಡ್ ಹೊಂದಿದೆ.
ವಾಹನದ ಮೇಲೆ 200 ಕೆ.ಜಿ. ವರೆಗಿನ ಭಾರವನ್ನು ಹಾಕಿಕೊಂಡು ಸಹ ಎಲ್ಲ ಘಟ್ಟಗಳನ್ನು ಹತ್ತುವ ಶಕ್ತಿ ಹೊಂದಿದೆ. 120 ಕಿ.ಮೀ. ಕ್ರಮಿಸಲು 2.5 kwh ನ ಬ್ಯಾಟರಿ ಸಹಾಯ ಮಾಡಿದರೆ, 2.5 kw ನ ಮೊಟಾರ್ ಎಲ್ಲ ಘಟ್ಟಗಳನ್ನು ಹತ್ತಲು ಸಹಾಯ ಮಾಡುತ್ತದೆ. ಒಮ್ಮೆ ಫುಲ್ ಚಾರ್ಜ್ ಮಾಡಲು 3 ಯುನಿಟ್ ಗಳಷ್ಟು ವಿದ್ಯುತ್ ವ್ಯಯವಾಗುತ್ತದೆ ಹಾಗೂ 4 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ.
ವಿಶೇಷವಾಗಿ ಆಫ್ಟರ್ ಸೇಲ್ಸ್ ಸರ್ವೀಸ್ ನ ವಿಚಾರವಾಗಿ ಶ್ರೀನಿವಾಸ ಇ ವೆಹಿಕಲ್ಸ್ ಎಲ್ಲ ಪ್ರಸ್ತುತ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ, ಶೋರೂಂನಲ್ಲಿ ವಾಹನಕ್ಕೆ ಸಂಬಂಧಿಸಿದ ಎಲ್ಲ ಬಿಡಿಭಾಗಗಳು ಲಭ್ಯವಿದ್ದು, ಎರಡು ತಿಂಗಳುಗಳ ಕಾಲ ಹೈದರಾಬಾದ್‌ನ ವಾಹನದ ಫ್ಯಾಕ್ಟರಿಯಲ್ಲಿ ತರಬೇತಿ ಪಡೆದ ನುರಿತ ಟೆಕ್ನಿಷಿಯನ್ಸ್ ಲಭ್ಯವಿರುತ್ತಾರೆ.
ಬ್ಯಾಟರಿಯ ಮೇಲೆ 5 ವರ್ಷ/40 ಸಾವಿರ ಕಿ.ಮೀ. ಗಳ ವಾರಂಟಿ, ಮೋಟರಿನ ಮೇಲೆ 3 ವರ್ಷ/30 ಸಾವಿರ ಕಿ.ಮೀ. ಗಳ ವಾರಂಟಿ ಹಾಗೂ ಚಾರ್ಜರ್ ಮತ್ತು ಕಂಟ್ರೋಲರ್‌ಗಳ ಮೇಲೆ 2 ವರ್ಷ/20 ಸಾವಿರ ಕಿ.ಮೀ. ವಾರಂಟಿ ಹೊಂದಿರುತ್ತದೆ. ಸರ್ವೀಸ್, ರಿಪೇರಿ, ವಾರಂಟಿ ಕ್ಲೇಮ್, ಇನ್ಸುರೆನ್ಸ್ ಕ್ಲೇಮ್ ನಂತಹ ಎಲ್ಲಾ ಸೇವೆಗಳು ಸಹ ಶೋರೂಂನಲ್ಲಿಯೇ ಲಭ್ಯವಿರುತ್ತದೆ. ಸಾಲ ಸೌಲಭ್ಯ ಕೂಡ ಲಭ್ಯವಿದ್ದು, ಒಂದು ವೇಳೆ ವಾಹನದಲ್ಲಿ ಏನೇ ಸಮಸ್ಯೆಯಾಗಿ ವಾಹನ ನಿಂತಲ್ಲಿ, ನಿಂತ ಸ್ಥಳಕ್ಕೆ ಬಂದು ರಿಪೇರಿ ಮಾಡಿ ಕೊಡುವ ವ್ಯವಸ್ಥೆ ಕೂಡ ಶೋರೂಂನಲ್ಲಿ ಲಭ್ಯವಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಮೊಬೈಲ್ ನಂಬರ್‌ಗಳನ್ನು ಸಂಪರ್ಕಿಸಿ.
9738943425
7348900970
7348972970