ಕುಮಟಾ : ಕಿರುಚಿತ್ರ ಹಾಗೂ ಪತ್ರಿಕೋದ್ಯಮದ ಮೂಲಕ ಹೆಸರು ಮಾಡಿದ್ದ ಕುಮಟಾ ತಾಲೂಕಿನ ಬ್ರಹ್ಮೂರಿನ ವಿನಾಯಕ ಭಟ್ಟ ಅಪಘಾತದಿಂದ ಆಸ್ಪತ್ರೆ ಸೇರಿದ್ದು ನಿನ್ನೆ ಕೊನೆಯುಸಿರೆಳೆದಿರುವ ಬಗ್ಗೆ ವರದಿಯಾಗಿದೆ. ವಿಶೇಷ ಬರಹಗಳ ಮೂಲಕ ಹಾಗೂ ಲೇಖನಗಳ ಮೂಲಕ ಪ್ರಸಿದ್ಧಿ ಪಡೆದಿದ್ದ ಇವರು ಕಾರವಾರ ಹಾಗೂ ಕುಮಟಾದಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದರು. ಪ್ರಜಾವಾಣಿ, ಕರಾವಳಿ ಮುಂಜಾವು, ನೂತನ, ಜನಮಾಧ್ಯಮ ಇಂತಹ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿ ತಮ್ಮ ವಿಶೇಷ ಹಾಗೂ ನಿಖರ ಬರಹದ ಮೂಲಕ ಜನರ ಮನಸ್ಸು ಗೆದ್ದಿದ್ದ ಖ್ಯಾತ ಬರಹಗಾರ ಇವರಾಗಿದ್ದರು.

RELATED ARTICLES  ಬ್ರಷ್ಟಾಚಾರ ನಿಗ್ರಹಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ : ದಿನಕರ ಶೆಟ್ಟಿ

ಉತ್ತರ ಕನ್ನಡದಲ್ಲಿ ಕಿರು ಚಿತ್ರಗಳನ್ನು ತಯಾರಿಸುವ ಮೂಲಕ ಉತ್ತರ ಕನ್ನಡದಲ್ಲಿ ಕಿರು ಸಿನಿಮಾದ ಅಪ್ರತಿಮ ಸಾಹಸಿ ಎಂದೇ ಇವರು ಗುರುತಿಸಲ್ಪಟ್ಟಿದ್ದರು. ಸಮಾಜಕ್ಕೊಂದು ಸಂದೇಶ ಸಾರುವ ವಿವಿಧ ಕಿರು ಚಿತ್ರಗಳ ಮೂಲಕ ಇವರು ಪ್ರಸಿದ್ಧಿ ಪಡೆದಿದ್ದರು.

ಪ್ರಸ್ತುತ ಕುಮಟಾದ ಶಾಸಕರಾದ ದಿನಕರ ಶೆಟ್ಟಿ ಅವರ ಜೊತೆಗೆ ಇದ್ದು, ಅವರ ಕಾರ್ಯಗಳ ಪ್ರಚಾರ ಹಾಗೂ ಸಾಮಾಜಿಕ ಜಾಲತಾಣವನ್ನು ನೋಡಿಕೊಳ್ಳುತ್ತಿದ್ದ ಇವರು ಬೈಕ್ ಅಪಘಾತಕ್ಕೆ ಒಳಗಾಗಿ ಆಸ್ಪತ್ರೆ ಸೇರಿದರು. ಇವರ ಮಿದುಳು ನಿಶ್ಕ್ರಿಯವಾಗಿದ್ದು ಆಸ್ಪತ್ರೆಯ ಚಿಕಿತ್ಸೆಗೂ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

RELATED ARTICLES  ಸಂತರನ್ನು ಶಾಂತವಾಗಿರಲು ಬಿಡಿ, ಸಂತ ಶಕ್ತಿಯ ಪ್ರಖರತೆ ತೋರುವಂತೆ‌ ಮಾಡದಿರಿ: ಸಂತ ಸೇವಕ ಸಮಿತಿ ಎಚ್ಚರಿಕೆ.

ತಮ್ಮ ಪ್ರೀತಿಯ ಮಾತು ಹಾಗೂ ಗೆಳೆತನದಿಂದಲೇ ಜನರ ಮನ ಗೆದ್ದಿದ್ದ ವಿನಾಯಕ ಬ್ರಹ್ಮೂರು ಅವರ ಅಗಲುವಿಕೆಯಿಂದ ಅವರ ಕುಟುಂಬ ಹಾಗೂ ಆಪ್ತವಲಯ ದುಃಖದ ಮಡುವಿನಲ್ಲಿ ಮುಳುಗಿದೆ.

ಸತ್ವಾಧಾರ ನ್ಯೂಸ್ ಅನ್ನು ಅತಿಯಾಗಿ ಪ್ರೀತಿಸುತ್ತಿದ್ದ, ನಮ್ಮ ಬಳಗದ ಸದಸ್ಯನಂತಿದ್ದ ವಿನಾಯಕ ಬ್ರಹ್ಮೂರ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಅವರ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ದೇವರು ಕರುಣಿಸಲೆಂದು ಪ್ರಾರ್ಥಿಸುತ್ತೇವೆ.